Home ಸಾಹಿತ್ಯ ಮತ್ತು ಸಂಗೀತ ಬಪ್ಪನ ಮೆರವಣಿಗೆ, ಗಲ್ಲಿ ಹೈಪು, ತಮಟೆ ಸದ್ದು: ಗಣೇಶೋತ್ಸವದ ರೈಮಿಂಗ್ ಪ್ರಾಸದ ಪುರಾಣ.
ಸಾಹಿತ್ಯ ಮತ್ತು ಸಂಗೀತಸುದ್ದಿ

ಬಪ್ಪನ ಮೆರವಣಿಗೆ, ಗಲ್ಲಿ ಹೈಪು, ತಮಟೆ ಸದ್ದು: ಗಣೇಶೋತ್ಸವದ ರೈಮಿಂಗ್ ಪ್ರಾಸದ ಪುರಾಣ.

Share
Share
ಮರ್ಚೆಡ್ ಡೇಸ್|ಕಿರು ಲೇಖನೆ:

ಗಣೇಶ ಪ್ರತಿಷ್ಠಾಪನೆ ಅಂದರೆ ಗಲ್ಲಿಯಲ್ಲೊಂದು ಹಬ್ಬ, ಕಿವಿಯಲ್ಲೊಂದು ಶಬ್ದ, ಎಲ್ಲಕ್ಕಿಂತ ಹೆಚ್ಚಾಗಿ ಗಂಟಲಿಗಂತೂ ಸಿಕ್ಕಾಪಟ್ಟೆ ಹಬ್ಬ! ಇಷ್ಟು ದಿನ ಸುಮ್ಮನಿದ್ದ ಹುಡುಗರೆಲ್ಲ ಇದ್ದಕ್ಕಿದ್ದಂತೆ ಆಶುಕವಿಗಳಾಗಿ ಬದಲಾಗುವ ಏಕೈಕ ಕಾಲವಿದು. ಉತ್ತರ ಕರ್ನಾಟಕದ ಜಾತ್ರೆಗಳಲ್ಲಿ ಪಲ್ಲಕ್ಕಿ ಎತ್ತುವಾಗ ಕೂಗುತ್ತಿದ್ದ ಒಡಪುಗಳ ದೇಸಿ ಮಾದರಿ, ಈಗಿನ Gen-Z ಜಮಾನಾದಲ್ಲಿ ಡಿಜಿಟಲ್ ಅವತಾರವೆತ್ತಿ “ವಿಸರ್ಜನಾ ಬೀಟ್ ಪಂಚ್” ಆಗಿ ಸದ್ದು ಮಾಡುತ್ತಿದೆ. ಆ ರಂಗು, ತಮಾಷೆ ಮತ್ತು ಮಾಸ್ ವೈಬ್‌ನ ಒಂದು ಸುತ್ತಿನ  ನೋಟ.

ಮೆರವಣಿಗೆಯಲ್ಲಿ ಒಬ್ಬ ಮೈಕ್ ಹಿಡಿದು ನಿಲ್ಲುತ್ತಾನೆ. ಅವನಷ್ಟೇ ಗಲ್ಲಿಯ ಮಾಸ್. ಅವನು ಒಡಪು( ರೈಮಿಂಗ್ಸ್ ಡೈಲಾಗ್) ಹೇಳುವ ಮೂರು ಸೆಕೆಂಡುಗಳ ಕಾಲ ನಾಸಿಕ್ ಡೋಲು, ತಮಟೆ, ಡಿಜೆ ಎಲ್ಲವೂ ಉಸಿರು ಬಿಗಿಹಿಡಿದು ಸ್ತಬ್ಧವಾಗುತ್ತವೆ.

ಪ್ರಾಸ ಪದಗಳು ಕೊನೆಯ ಪದ ಬಾಯಿಂದ ಹೊರಬಿದ್ದಿದ್ದೇ ತಡ, “ಡ್ರಮ್ ರೋಲ್” ಶುರು! ಅಷ್ಟು ಹೊತ್ತು ಸೈಲೆಂಟ್ ಆಗಿದ್ದ ಇಡೀ ಗಲ್ಲಿ ಒಮ್ಮೆಲೆ ಭೂಕಂಪವಾದಂತೆ ಕುಣಿಯಲು ಶುರುಮಾಡುತ್ತದೆ.

ಮೈಕ್‌ನಿಂದ “ಲಾಲ್ ಫೂಲ್, ನೀಲಾ ಫೂಲ್…” ಎಂದು ಕೂಗು ಬಂದರೆ, ಇಡೀ ಗಲ್ಲಿ “ಗಣಪತಿ ಬಪ್ಪಾ ಬ್ಯೂಟಿಫುಲ್!” ಎಂದು ಆಕಾಶ ಮುಟ್ಟುವಂತೆ ಉತ್ತರಿಸುತ್ತದೆ. “ಚೈನಾ ಹೋ ಯಾ ಕೊರಿಯಾ…” ಎಂದರೆ ಜಗತ್ತೇ ಮರೆತು ಎಲ್ಲರೂ ಕೂಗುವುದು “…ಗಣಪತಿ ಬಪ್ಪಾ ಮೋರಿಯಾ!”

ಯಾವ ಪ್ರಾಸಕ್ಕೂ ಹೆದರದ ಹುಡುಗರು ಬಾಯಿಗೆ ಬಂದದ್ದನ್ನೆಲ್ಲ ಜೋಡಿಸುತ್ತಾರೆ. “ಚ್ಯೂಯಿಂಗ್ ಗಮ್ ಚ್ಯೂಯಿಂಗ್ ಗಮ್…” ಎಂದರೆ ಸಾಕು, ಎದುರಿನಿಂದ ಬರುವ ಉತ್ತರ ಒಂದೇ—”…ನಮ್ಮ ಬಪ್ಪಾ ಪಕ್ಕಾ ಸಿಂಗಂ!” ಪಕ್ಕದ ಗಲ್ಲಿಯಿಂದ ಹಿಡಿದು ದೇಶದ ದಿಲ್ಲಿವರೆಗೂ ಎಲ್ಲವೂ ಇಲ್ಲಿ ಪ್ರಾಸದ ಸರಕು.

ಪುಷ್ಪ ಸಿನಿಮಾ ಇರಲಿ, ಕೆಜಿಎಫ್ ಇರಲಿ, ಬಪ್ಪನ ಮುಂದೆ ಎಲ್ಲವೂ ರೀ-ಮಿಕ್ಸ್. “ಫ್ಲವರ್ ಅನ್ಕೋಬೇಡ…” ಎಂದು ಮೈಕ್‌ನಲ್ಲಿ ಕೂಗಿದರೆ, ಸಮೂಹದಿಂದ ಬರುವ ಅಬ್ಬರ—”…ಇವನು ಲೋಕ ಮೆಚ್ಚಿದ ಫೈಯರ್!” ರೌಡಿಸಂ ಡೈಲಾಗ್‌ಗಳೆಲ್ಲ ಇಲ್ಲಿ ಬಪ್ಪನ ರಕ್ಷಣಾ ಪಡೆಗಳಾಗಿ ಬದಲಾಗುತ್ತವೆ.

“ಅಡಿಕೆ ತೋಟ, ತೆಂಗಿನ ಮರ… ಬಪ್ಪನ ಎದುರು ಯಾರಿಲ್ಲ ಗುರು ಸರದಾರ!”—ಇಲ್ಲಿ ಊರಿನ ಭೌಗೋಳಿಕ ಗಡಿಗಳು, ಚರಂಡಿಗಳು, ಗುಂಡಿಗಳೂ ಸಹ ಕಾವ್ಯಮಯವಾಗಿ ಮೆರವಣಿಗೆಯ ಹೈಲೈಟ್ ಆಗಿಬಿಡುತ್ತವೆ.

ಹಿಂದೆ ಊರಿನ ಗಲ್ಲಿಗೆ ಸೀಮಿತವಾಗಿದ್ದ ಈ ಒಡಪುಗಳು ಈಗ ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಶಾರ್ಟ್ಸ್‌ನ ಆಸ್ತಿ. ಡೈಲಾಗ್ ಹೊಡೆದು ತಮಟೆ ಬಿದ್ದ ತಕ್ಷಣದ ಐದು ಸೆಕೆಂಡಿನ ಕ್ಲಿಪ್‌ಗಳು ಈಗ ಗಲ್ಲಿಯಿಂದ ಗ್ಲೋಬಲ್ ಲೆವೆಲ್‌ಗೆ ಟ್ರೆಂಡ್ ಆಗುತ್ತಿವೆ.

ಸಾಂಪ್ರದಾಯಿಕ ಹಲಗೆ ಬಡಿತದ ಜೊತೆಗೆ ಯುವಪಡೆ ಈಗ ಎಲೆಕ್ಟ್ರಾನಿಕ್ ಮ್ಯೂಸಿಕ್ ಡ್ರಾಪ್ ಸೇರಿಸಿದೆ. ಹಳ್ಳಿ ಜಾನಪದ ಮತ್ತು ಗ್ಲೋಬಲ್ ಟೆಕ್ನೋ ಒಟ್ಟಿಗೆ ಸೇರಿದರೆ ಹೇಗಿರುತ್ತದೆಯೋ, ಅಂಥ ಅದ್ಭುತ ರಂಪಾಟ ಇದು.

ಬಪ್ಪನ ಆಗಮನದಿಂದ ಹಿಡಿದು ವಿಸರ್ಜನೆಯ ಟ್ರ್ಯಾಕ್ಟರ್ ಕದಲುವವರೆಗೆ ಪ್ರತಿ ಹೆಜ್ಜೆಗೂ ಕಾಮೆಂಟರಿ. “ಗಲಿ ಗಲಿ ಮೇ ಗಡ್ಡಾ ಹೈ… ಆಜ್ ಗಣಪತಿ ಕಾ ಬಡ್ಡೇ ಹೈ!” ಎನ್ನುತ್ತಾ ಜನರನ್ನು ಬೋರ್ ಆಗದಂತೆ ಕಟ್ಟಿಹಾಕುವ ಕಲೆ ಇದು.

ಇಲ್ಲಿ ವ್ಯಾಕರಣ ಮುಖ್ಯವಲ್ಲ, ಕೇವಲ ಭಾವನೆ ಮತ್ತು ಪ್ರಾಸ ಮುಖ್ಯ. ಭಕ್ತಿ, ದೇಸಿ ಜಾನಪದದ ಗತ್ತು ಹಾಗೂ ತ್ರಾಸ್ ಡೈಲಾಗ್ ಯುವಪಡೆಯ ಮಾಸ್ ಮನಸ್ಥಿತಿ ಒಂದಾದಾಗ ಹುಟ್ಟುವ ಈ ಗಲ್ಲಿ ಕಾವ್ಯವೇ ಗಣೇಶೋತ್ಸವದ ಅಸಲಿ ಜೀವ ಮತ್ತು ಜೀವಂತ ಆಕರ್ಷಣೆ. ಮರ್ಚೆಡ್ ಡೇಸ್ ಪೇಪರ ಹೈ ಗಣಪತಿ ಬಪ್ಪ ಸೂಪರ ಹೈ! …

ಲೇಖಕರು: ಟಿ ಎಸ್ . ಮರ್ಚೆಡ್.

 

Share
Related Articles
ಅಂಕಣಸುದ್ದಿ

ಒಂದೇ ಒಂದು ಗುಂಡು ಹಾರಿಸದೆ ಮಾಯಾನಗರಿ ಮುಂಬೈ ಆಳಿದ ‘ಸುಲ್ತಾನ್’!

ಬಡತನದ ಕೂಲಿಯಿಂದ ಬಾಲಿವುಡ್ ಬೆರಗಾಗುವಂತೆ ಬೆಳೆದ 'ಹಾಜಿ ಮಸ್ತಾನ್' ಎಂಬ ಬ್ರಾಂಡ್ ಡಾನ್‌ನದ ರೋಚಕ ಕಥೆ...

ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...