ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ.
ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ; ಗಣ್ಯರ ಸಂತಾಪ
ಗಂಗಾವತಿ: ನಗರದ ಚಿರಪರಿಚಿತ ಮತ್ತು ಪ್ರತಿಷ್ಠಿತ ಅರಳಿ ಕುಟುಂಬದ ಹಿರಿಯ ಜೀವಿ, ಗಂಗಾವತಿಯ ಅಚ್ಚುಮೆಚ್ಚಿನ ಸಾಹಿತಿ ಹಾಗೂ ಉದ್ಯಮಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರರಾದ ಶ್ರೀ ಬಸವರಾಜ ಅಮರಪ್ಪ ಅರಳಿ ಅವರು ನಿಧನರಾಗಿದ್ದಾರೆ.
ನಿನ್ನೆ (ನವೆಂಬರ್ 20,11, 2026) ರಾತ್ರಿ 11.45ರ ಸುಮಾರಿಗೆ ತೀವ್ರ ಹೃದಯಾಘಾತದಿಂದ ಅವರು ಲಿಂಗೈಕ್ಯರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರ ಪಾರ್ಥಿವ ಶರೀರವನ್ನು ಅರಳಿ ರೈಸ್ ಮಿಲ್ ಆವರಣದಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿದೆ.
ಮೃತರ ಅಂತಿಮ ಸಂಸ್ಕಾರಗಳನ್ನು ಇಂದು (ನವೆಂಬರ್ 21, 11,2026) ಸಂಜೆ 4.00 ಗಂಟೆಗೆ ಗಂಗಾವತಿಯ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಹಿರಿಯ ಚೇತನವನ್ನು ಕಳೆದುಕೊಂಡ ಅರಳಿ ಕುಟುಂಬಸ್ಥರು, ಬಂಧು-ಬಳಗ ಹಾಗೂ ಅಪಾರ ಸ್ನೇಹಿತರು ತೀವ್ರ ದುಃಖದಲ್ಲಿದ್ದಾರೆ. ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಕುಟುಂಬವರ್ಗದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ನಗರದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ