Home ಅಂಕಣ ಜೆನ್-ಜಿ (Gen Z): ಡಿಜಿಟಲ್ ಯುಗದ ಬಂಡಾಯಗಾರರು ಮತ್ತು ಹೊಸ ಸಂಸ್ಕೃತಿಯ ರೂವಾರಿಗಳು.
ಅಂಕಣಸುದ್ದಿ

ಜೆನ್-ಜಿ (Gen Z): ಡಿಜಿಟಲ್ ಯುಗದ ಬಂಡಾಯಗಾರರು ಮತ್ತು ಹೊಸ ಸಂಸ್ಕೃತಿಯ ರೂವಾರಿಗಳು.

Share
Share

ಮರ್ಚೆಡ್ ಡೇಸ್ ವಿಶೇಷ ಲೇಖನೆ|ಗಂಗಾವತಿ.

ಇಂದಿನ ಯುವ ಜನಾಂಗವನ್ನು ‘ಜೆನ್-ಜಿ’ (Gen Z) ಅಥವಾ ‘ಝೆಂಜಿ’ ಎಂದು ಕರೆಯಲಾಗುತ್ತದೆ. ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣಗಳ ಅತಿಯಾದ ಪ್ರಭಾವದಿಂದ ಬೆಳೆದಿರುವ ಈ ತಲೆಮಾರಿನ ಧ್ವನಿ, ಆಲೋಚನೆ ಮತ್ತು ಅಭಿವ್ಯಕ್ತಿ ವಿಧಾನವೇ ಸಂಪೂರ್ಣ ಭಿನ್ನವಾಗಿದೆ. ಹಳೆಯ ರೂಢಿಗತ ನಂಬಿಕೆಗಳನ್ನು ಪ್ರಶ್ನಿಸುತ್ತಾ, ತಮ್ಮದೇ ಆದ ಹೊಸ ಪ್ರಪಂಚವನ್ನು ಸೃಷ್ಟಿಸಿಕೊಳ್ಳುತ್ತಿರುವ ಇವರ ವೈಶಿಷ್ಟ್ಯಗಳು ಇಂದಿನ ಸಮಾಜದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿವೆ.

ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಇವರು ಹೊಸ ರೀತಿಯ ಕೈ ಸನ್ನೆಗಳು, ಕಣ್ಣಿನ ಭಾವನೆಗಳು ಮತ್ತು ವಿಭಿನ್ನ ಚಿಹ್ನೆಗಳನ್ನು (Slang Gestures) ಸಂವಹನಕ್ಕಾಗಿ ಬಳಸುತ್ತಿದ್ದಾರೆ. ಹಿರಿಯರಿಗೆ ಇವು ತಪ್ಪಾಗಿ ಅರ್ಥೈಸಿಕೊಂಡರೂ, ಯುವಕರ ನಡುವೆ ಇವು ನಿರ್ದಿಷ್ಟ ಮತ್ತು ಆಳವಾದ ಅರ್ಥಗಳನ್ನು ಹೊಂದಿರುತ್ತವೆ. ಉದಾಹರಣೆಗೆ, ಹೆಬ್ಬೆರಳು ಮತ್ತು ತೋರುಬೆರಳನ್ನು ಒಟ್ಟಿಗೆ ಸ್ಪರ್ಶಿಸುವ ‘ಕ್ಲಾಕ್ ಇಟ್’ (Clock It) ಸನ್ನೆ ಮಾತನ್ನು 100% ಒಪ್ಪುವುದನ್ನು ಸೂಚಿಸಿದರೆ, ‘ಫಿಂಗರ್ ಹಾರ್ಟ್’ ಪ್ರೀತಿಯನ್ನು ವ್ಯಕ್ತಪಡಿಸುವ ಹೊಸ ಭಾಷೆಯಾಗಿದೆ.

ಹಿರಿಯರು ಬೇರೆ ರೀತಿಯಾಗಿ ಭಾವಿಸುವ ‘ಬೆರಳುಗಳನ್ನು ಕೂಡಿಸುವುದು’ (Touching Fingers) ಸನ್ನೆಯನ್ನು ಯುವಕರು ನಾಚಿಕೆ ಅಥವಾ ಅಂಜಿಕೆಯನ್ನು ವ್ಯಕ್ತಪಡಿಸಲು ಬಳಸುತ್ತಾರೆ. ಹಾಗೆಯೇ, ಕಣ್ಣುಗಳನ್ನು ಒಂದು ಕಡೆಗೆ ಗಂಭೀರವಾಗಿ ನೋಡ್ವ ‘ಸೈಡ್ ಐ’ (Side Eye) ಅಸಮಾಧಾನ ಅಥವಾ ತೀವ್ರ ಸಂದೇಹವನ್ನು ಸೂಚಿಸುತ್ತದೆ. ಈ ಎಲ್ಲಾ ಸನ್ನೆಗಳು ಇಂದಿನ ಯುವಕರ ಸಂವಹನ ಶೈಲಿಯನ್ನು ಹೆಚ್ಚು ರೋಚಕವಾಗಿಸಿವೆ.

ಕೇವಲ ಸನ್ನೆಗಳಷ್ಟೇ ಅಲ್ಲದೆ, ಸಾಮಾಜಿಕ ಮತ್ತು ರಾಜಕೀಯ ವಿಷಯಗಳಲ್ಲೂ ಜೆನ್-ಜಿ ಯುವಕರು ತೀವ್ರವಾಗಿ ಸ್ಪಂದಿಸುತ್ತಿದ್ದಾರೆ. ನೀಟ್ ಪೇಪರ್ ಲೀಕ್ ಮುಂತಾದ ಗಂಭೀರ ಸಂದರ್ಭಗಳಲ್ಲಿ ಡಿಜಿಟಲ್ ಮೀಡಿಯಾಗಳ ಮೂಲಕ ‘ಕಾಕ್ರೋಚ್ ಜನತಾ ಪಾರ್ಟಿ’ ಹೆಸರಿನಲ್ಲಿ ಇಡೀ ವ್ಯವಸ್ಥೆಯನ್ನು ಪ್ರಶ್ನಿಸುವ ಧೈರ್ಯ ತೋರಿದ್ದಾರೆ. ಅಲ್ಲದೆ, ಜಂತರ್ ಮಂತರ್‌ನಲ್ಲಿ ನಡೆದ ಹೋರಾಟಗಳಿರಬಹುದು ಅಥವಾ ವ್ಯವಸ್ಥೆಯ ವಿರುದ್ಧದ ಧ್ವನಿಯಾಗಿರಬಹುದು, ಯುವಕರ ಪ್ರತಿಯೊಂದು ನಡೆಗೂ ಡಿಜಿಟಲ್ ಯುಗದಲ್ಲಿ ದೊಡ್ಡ ಶಕ್ತಿ ಸಿಕ್ಕಿದೆ.

ಈ ಕ್ರಾಂತಿಕಾರಿ ಹೋರಾಟಗಳ ಮತ್ತೊಂದು ವಿಶೇಷತೆಯೆಂದರೆ, ಹಿಂಸಾತ್ಮಕ ವಾತಾವರಣದಲ್ಲೂ ಇವರು ಶಾಂತಿಯುತವಾಗಿ ಕ್ರಾಂತಿ ಗೀತೆಗಳನ್ನು ಹಾಗೂ ಹೋರಾಟದ ಸಾಹಿತ್ಯವನ್ನು ಬಳಸುತ್ತಾರೆ. ‘ಕಾಂತಾರ’ದಂತಹ ಜನಪರ ಕಲೆ ಮತ್ತು ಸಂಸ್ಕೃತಿಯನ್ನು ಜನರ ಮನಸ್ಸಿಗೆ ಮುಟ್ಟಿಸುವ ಮೂಲಕ ವಿಭಿನ್ನ ಶೈಲಿಯಲ್ಲಿ ಪ್ರತಿಭಟಿಸುತ್ತಿದ್ದಾರೆ. ಕೇವಲ ಘೋಷಣೆಗಳಲ್ಲ, ಬದಲಿಗೆ ಕಲೆಯ ಮೂಲಕ ವ್ಯವಸ್ಥೆಯ ಕಣ್ಣು ತೆರೆಸುವ ಕೆಲಸವನ್ನು ಇವರು ಮಾಡುತ್ತಿದ್ದಾರೆ.

ಜೆನ್-ಜಿಯವರ ಈ ಪಯಣ ಇಲ್ಲಿಗೆ ನಿಲ್ಲುವುದಿಲ್ಲ; ಇವರು ಮುಂದುವರೆದು ವಿಭಿನ್ನವಾದ ಸ್ಲಾಂಗ್ ಭಾಷೆ, ಆಟಿಟ್ಯೂಡ್, ಶಾಯರಿ, ಕ್ರಿಯೇಟಿವ್ ಪೇಂಟಿಂಗ್ ಹಾಗೂ ಕಾರ್ಡ್‌ಬೋರ್ಡ್ ಲೈಟಿಂಗ್ ಪ್ರದರ್ಶನಗಳ ಮೂಲಕ ತಮ್ಮ ಪ್ರತಿಭೆಯನ್ನು ಹೊರಹಾಕುತ್ತಿದ್ದಾರೆ. ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಇವರ ಬರವಣಿಗೆ ಮತ್ತು ಕಲೆ ಎಲ್ಲರ ಗಮನ ಸೆಳೆಯುತ್ತಿದೆ.

ಇಂದಿನ ಯುವ ಜನಾಂಗದ ವಿಶೇಷತೆಯೆಂದರೆ, ತಮ್ಮ ನಿಲುವನ್ನು ವ್ಯಕ್ತಪಡಿಸಲು ಯಾರ ಹೆಡರಿಕೆಯೂ ಇಲ್ಲದೆ ನಿರ್ಭಯವಾಗಿ ಮಾತನಾಡುವ ಎದೆಗಾರಿಕೆ ಅವರಿಗಿದೆ. ಅಗತ್ಯ ಬಿದ್ದರೆ ತಮ್ಮ ತಂದೆ-ತಾಯಿ ಅಥವಾ ಹಿರಿಯರ ಅಭಿಪ್ರಾಯಗಳ ವಿರುದ್ಧವೂ ನೇರವಾಗಿ, ಆದರೆ ಗೌರವಯುತವಾಗಿ ತಮ್ಮ ವಾದವನ್ನು ಮಂಡಿಸುವ ದಿಟ್ಟತನವನ್ನು ಜೆನ್-ಜಿ ತೋರಿಸುತ್ತಿದೆ.

ಒಟ್ಟಾರೆಯಾಗಿ, ಇಂದಿನ ಜೆನ್-ಜಿ ಯುವ ಜನಾಂಗವು ಕೇವಲ ಮೋಜು-ಮಸ್ತಿಗೆ ಸೀಮಿತವಾಗಿಲ್ಲ; ಬದಲಿಗೆ ತಂತ್ರಜ್ಞಾನದ ಅಸ್ತ್ರದೊಂದಿಗೆ ಸಮಾಜದ ಲೋಪದೋಷಗಳನ್ನು ಪ್ರಶ್ನಿಸುತ್ತಾ, ಹೊಸತನದ ಕನಸುಗಳನ್ನು ಕಾಣುತ್ತಿರುವ ಭವಿಷ್ಯದ ನಿಜವಾದ ರೂವಾರಿಗಳಾಗಿದ್ದಾರೆ. ಇವರ ಈ ಸೃಜನಶೀಲತೆ ಮತ್ತು ಬಂಡಾಯದ ಮನೋಭಾವವೇ ನಾಳಿನ ಹೊಸ ಸಮಾಜದ ನಿರ್ಮಾಣಕ್ಕೆ ಅಡಿಪಾಯವಾಗಲಿದೆ.

ಲೇಖಕರು:

ತಾಯಪ್ಪ ಮರ್ಚೆಡ್ ಪತ್ರಕರ್ತರು

 

ಗಂಗಾವತಿ.

Share
Related Articles
ಅಂಕಣಸುದ್ದಿ

ಒಂದೇ ಒಂದು ಗುಂಡು ಹಾರಿಸದೆ ಮಾಯಾನಗರಿ ಮುಂಬೈ ಆಳಿದ ‘ಸುಲ್ತಾನ್’!

ಬಡತನದ ಕೂಲಿಯಿಂದ ಬಾಲಿವುಡ್ ಬೆರಗಾಗುವಂತೆ ಬೆಳೆದ 'ಹಾಜಿ ಮಸ್ತಾನ್' ಎಂಬ ಬ್ರಾಂಡ್ ಡಾನ್‌ನದ ರೋಚಕ ಕಥೆ...

ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...