Home ಸುದ್ದಿ ಆರ್ಯವೈಶ್ಯ ಧ್ವಜಾರೋಹಣಕ್ಕೆ ಚಾಲನೆ: ಬೆಂಗಳೂರಿನ ಡಿಸೆಂಬರ್‌ನಲ್ಲಿ”ಗ್ಲೋಬಲ್ ಅಸ್ಸಿ ಲೆಟರ್ ವಿಷನ್ ಸಮಿಟ್” ಮಹಾಸಂಕಲ್ಪ.
ಸುದ್ದಿ

ಆರ್ಯವೈಶ್ಯ ಧ್ವಜಾರೋಹಣಕ್ಕೆ ಚಾಲನೆ: ಬೆಂಗಳೂರಿನ ಡಿಸೆಂಬರ್‌ನಲ್ಲಿ”ಗ್ಲೋಬಲ್ ಅಸ್ಸಿ ಲೆಟರ್ ವಿಷನ್ ಸಮಿಟ್” ಮಹಾಸಂಕಲ್ಪ.

Share
Share
ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ.

ಗಂಗಾವತಿ : ಆರ್ಯವೈಶ್ಯ ಸಮಾಜದ ಯುವಜನತೆಯನ್ನು ಜಾಗತಿಕ ಮಟ್ಟದಲ್ಲಿ ಉದ್ಯಮಶೀಲರನ್ನಾಗಿಸುವ ಮತ್ತು ಸಮಾಜದ ಬಲವರ್ಧನೆಗೆ ಒತ್ತು ನೀಡುವ ಮಹದುದ್ದೇಶದಿಂದ ಹಮ್ಮಿಕೊಳ್ಳಲಾಗಿರುವ “ಗ್ಲೋಬಲ್ ಅಸ್ಸಿ ಲೆಟರ್ ವಿಷನ್ ಸಮಿಟ್” ಮಹಾಸಂಕಲ್ಪಕ್ಕೆ ನಗರದ ಶ್ರೀ ನಗರೇಶ್ವರ ದೇವಸ್ಥಾನದಲ್ಲಿ ಶನಿವಾರ ಅಧಿಕೃತವಾಗಿ ಚಾಲನೆ ನೀಡಲಾಯಿತು ಎಂದು ಆರ್ಯವೈಶ್ಯ ಮಹಾಸಭೆಯ ಅಧ್ಯಕ್ಷೆ ರೂಪರಾಣಿ ರಾಯಚೂರು ತಿಳಿಸಿದರು.

ನಗರದ ಐತಿಹಾಸಿಕ ಶ್ರೀ ನಗರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಿದ ಬಳಿಕ, ದೇವಾಲಯದ ಗೋಪುರದ ಮೇಲೆ ಸಮಾಜದ ಏಕತೆ ಹಾಗೂ ಸಂಘಟನೆಯ ಪ್ರತೀಕವಾಗಿ ಆರ್ಯವೈಶ್ಯ ಧ್ವಜವನ್ನು ಧ್ವಜಾರೋಹಣ ಮಾಡಲಾಯಿತು.

ಬಳಿಕ ಮಾತನಾಡಿದ ರೂಪರಾಣಿ ರಾಯಚೂರು, ಸಮಾಜದ ಐಕ್ಯತೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ದೇಶ ಹಾಗೂ ವಿದೇಶಗಳಲ್ಲಿರುವ ಪ್ರಮುಖ ಆರ್ಯವೈಶ್ಯ ದೇವಸ್ಥಾನಗಳು ಮತ್ತು ಕಚೇರಿಗಳಲ್ಲಿಯೂ ಇದೇ ಮಾದರಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಬರುವ ಡಿಸೆಂಬರ್ 25, 26 ಮತ್ತು 27 ರಂದು ಬೆಂಗಳೂರಿನ ಪ್ರತಿಷ್ಠಿತ ಅರಮನೆ ಮೈದಾನದಲ್ಲಿ ಮೂರು ದಿನಗಳ ಕಾಲ “ಗ್ಲೋಬಲ್ ಅಸ್ಸಿ ಲೆಟರ್ ವಿಷನ್ ಸಮಿಟ್” ಅತ್ಯಂತ ಅದ್ದೂರಿಯಾಗಿ ಜರುಗಲಿದೆ. ಈ ಬೃಹತ್ ಸಮಾವೇಶದಲ್ಲಿ ದೇಶದ ನಾನಾ ಭಾಗಗಳಿಂದ ಹಾಗೂ ವಿದೇಶಗಳಲ್ಲಿ ನೆಲೆಸಿರುವ ಸಮಾಜದ ಪ್ರಮುಖರು ಹಾಗೂ ಯುವ ಉದ್ಯಮಿಗಳು ಭಾಗವಹಿಸಲಿದ್ದಾರೆ. ಈ ಸಮಾವೇಶದ ಮೂಲಕ ಯುವಜನತೆಗೆ ಉದ್ಯಮಶೀಲತೆ, ನೂತನ ವ್ಯಾಪಾರ ಅವಕಾಶಗಳು, ಹೂಡಿಕೆ ಹಾಗೂ ಜಾಗತಿಕ ಮಟ್ಟದ ಮಾರುಕಟ್ಟೆ ಪರಿಚಯದ ಕುರಿತು ವಿಶೇಷ ಮಾರ್ಗದರ್ಶನ ನೀಡಲಾಗುವುದು ಎಂದು ಅವರು ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕಾರ್ಯದರ್ಶಿ ಸಿ. ಈಶ್ವರ್ ಶೆಟ್ಟಿ, ಸಮಾಜದ ಯುವಕ-ಯುವತಿಯರಿಗೆ ವೈವಿಧ್ಯಮಯ ಉದ್ಯೋಗ ಮತ್ತು ಅತ್ಯುತ್ತಮ ಉದ್ಯಮಾವಕಾಶಗಳನ್ನು ಸೃಷ್ಟಿಸುವುದು ಹಾಗೂ ಸಾಂಪ್ರದಾಯಿಕ ವ್ಯಾಪಾರ-ವಹಿವಾಟನ್ನು ಜಾಗತಿಕ ಮಟ್ಟಕ್ಕೆ ವಿಸ್ತರಿಸುವುದೇ ಜಿಎವಿಎಸ್ (Global Asci Letter Vision Summit) ಸಮ್ಮೇಳನದ ಮುಖ್ಯ ಧ್ಯೇಯವಾಗಿದೆ ಎಂದು ಸ್ಪಷ್ಟಪಡಿಸಿದರು.

ಈ ಮಹಾಸಂಕಲ್ಪ ಹಾಗೂ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಸುರೇಶ್ ಶೆಟ್ಟಿ, ಯುವಜನ ಮಹಾಸಭಾದ ನಿರ್ದೇಶಕ ಸಂತೋಷ್ ಕೆಲೋಜಿ, ಕೊಪ್ಪಳ ಜಿಲ್ಲಾ ಉಪಾಧ್ಯಕ್ಷ ಸಿರಿಗೇರಿ ಕಾಶಿ ವಿಶ್ವನಾಥ ಶೆಟ್ಟಿ, ವಾಸವಿ ಯೋಜನೆಯ ಕಾರ್ಯದರ್ಶಿ ಮಂಜುನಾಥ್ ಹುಲ್ಲೂರು, ಮತ್ತು ಈಶ್ವರ್ ಶೆಟ್ಟಿ, ವಿಜಯನಗರ ವಿಭಾಗದ ಆರ್ಯವೈಶ್ಯ ಸಮಾಜದ ಯುವಜನ ಮಹಾಸಭಾ ನಿರ್ದೇಶಕ ಜ್ಞಾನೇಶ್ವರ, ಮಹಿಳಾ ಸಂಘದ ಲಕ್ಷ್ಮೀ ಶ್ರೀನಿವಾಸ ಸೇರಿದಂತೆ ಸಮಾಜದ ಅನೇಕ ಗಣ್ಯರು ಹಾಗೂ ಬಂಧುಗಳು ಉಪಸ್ಥಿತರಿದ್ದು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...