
ಧಾರ್ಮಿಕ ಆಚರಣೆಯ ಮೂಲಕ ಸಂಘಟನೆ.. ನಾರಾಯಣರಾವ್ ವೈದ್ಯ
ಮರ್ಚೆಡ್ ಡೇಸ್ ಸುದ್ಧಿ.
ಗಂಗಾವತಿ. ಮೂರು ವರ್ಷಕ್ಕೊಮ್ಮೆ ಆಚರಿಸುವ ಅಧಿಕ ಮಾಸವನ್ನು ಪುರುಷೋತ್ತಮ ಮಾಸವೆಂದು ವಿಷ್ಣುವಿನ ನಾಮ ಸ್ಮರಣೆಯ ಮೂಲಕ ಆಚರಿಸಲಾಗುತ್ತಿದ್ದು ಧಾರ್ಮಿಕ ಸನಾತನ ಧರ್ಮದ ರಕ್ಷಣೆ ಹಾಗೂ ಸಂಘಟನೆಗೆ ಅತ್ಯಂತ ಪೂರಕವಾಗಿದೆ ಎಂದು ಶಂಕರ್ ಮಠದ ಧರ್ಮದರ್ಶಿ ನಾರಾಯಣ್ ರಾವ್ ವೈದ್ಯ ಹೇಳಿದರು.
ಅವರು ರವಿವಾರದಂದು ಪುರುಷೋತ್ತಮ ಮಾಸದ ಮಂಗಳೋತ್ಸಮ ಧಾರ್ಮಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಶೃಂಗೇರಿಯ ಉಭಯ ಜಗದ್ಗುರುಗಳ ಅನುಗ್ರಹದ ಮೇರೆಗೆ ಸತತ 33 ದಿನಗಳ ಕಾಲ ಪ್ರತಿಯೊಬ್ಬರ ಮನೆಯಲ್ಲಿ ವಿಶೇಷ ಪೂಜೆಯ ಮೂಲಕ ಅಷ್ಟೋತ್ತರ ಪಾರಾಯಣ ಭಜನೆ ಮಹಿಳೆಯರಿಗೆ ಉಡಿ ತುಂಬುವಿಕೆ ಸೇರಿದಂತೆ ದಾನ ಧರ್ಮಗಳನ್ನು ಮಾಡುವುದರ ಮೂಲಕ ವಿಷ್ಣುವಿನ ಹಾಗೂ 33 ಕೋಟಿ ದೇವಾನು ದೇವತೆಗಳ ಗುರು ಪರಂಪರೆಯನ್ನು ಸ್ಮರಿಸುವುದರ ಮೂಲಕ ಆರಾಧಿಸಲಾಗುತ್ತದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಶಕುಂತಲಾ ರಾಜೀವ ಅಧಿಕ ಮಾಸ ಹಾಗೂ ಪುರುಷೋತ್ತಮ ಮಾಸದ ವಿಷಯ ಕುರಿತು ಉಪನ್ಯಾಸ ನೀಡಿದರು. ಭೀಮಸೇನ ಭಟ್ ಅವರು ಮಹಾಸಂಕಲ್ಪ
ಗುರುಪಾದುಕೆಗಳಿಗೆ ಅಷ್ಟೋತ್ತರ ಮೂಲಕ ಪುಷ್ಪಾರ್ಚನೆ ನೆರವೇರಿಸಿದರು ಈ ಸಂದರ್ಭದಲ್ಲಿ ಶಾರದಾ ಶಂಕರ ಭಜನಾ ಮಂಡಳಿ ನೇತ್ರತ್ವದಲ್ಲಿ ಭಜನೆ ಮಹಿಳೆಯರಿಗೆ ಉಡಿ ತುಂಬುವಿಕೆ ಮತ್ತಿತರ ಪೂಜಾ ಕಾರ್ಯಕ್ರಮವನ್ನು ನಿರ್ವಹಿಸಿದರು… ಹಿರಿಯ ಮುಖಂಡರಾದ ಭೀಮಸೇನಭಟ್ ಮಹೇಶ ಭಟ್ ಜೋಶಿ. ರಾಘವೇಂದ್ರ ಅಳವಂಡಿಕರ್. ಶೇಷಗಿರಿ ಗಡಾದ್. ಪ್ರಕಾಶ್ ಅಳವಂಡಿ ಶ್ರೀಧರ. ಕಾಶಿನಾಥ್ ಬಾಲಕೃಷ್ಣ ದೇಸಾಯಿ. ಅನಿಲಅಳವಂಡಿ. ಭೀಮಶಂಕರ್. ಪ್ರಹ್ಲಾದ್ ದಿಗ್ಗಾವಿ . ಇನ್ನಿತರರು ಉಪಸ್ಥಿತರಿದ್ದರು.