ಮರ್ಚೆಡ್ ಡೇಸ್ :
ಸಿನಿಮಾ ವಿಶ್ಲೇಷಣೆ:
ಇದೇ ಜೂನ್ ತಿಂಗಳಲ್ಲಿ ‘ಭರತ್ ಭಾಗ್ಯ ವಿಧಾತ’ (Bharat Bhhagya Viddhaata) ಸಿನಿಮಾದ ಕುರಿತು ಸಂದರ್ಶನ ನೀಡುವ ಸಂದರ್ಶನದಲ್ಲಿ ಅವರು ಭಾರತದಲ್ಲಿ ನರ್ಸ್ಗಳ ಸ್ಥಿತಿಗತಿಯ ಕುರಿತು ಅತ್ಯಂತ ಜ್ವಲಂತ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇಂದಿಗೂ ಸಮಾಜದಲ್ಲಿ ನರ್ಸ್ಗಳಿಗೆ ಸಿಗಬೇಕಾದ ಅತ್ಯುನ್ನತ ಗೌರವ ಸಿಗುತ್ತಿಲ್ಲ, ಅತ್ಯಂತ ಕಡಿಮೆ ವೇತನಕ್ಕೆ ಅವರು ಅತಿ ಹೆಚ್ಚು ಶ್ರಮಪಡುತ್ತಾರೆ. ಸಿನಿಮಾಗಳಲ್ಲಿ ಅಥವಾ ಸಮಾಜದ ಕೆಲವು ವರ್ಗಗಳಲ್ಲಿ ಅವರ ಪವಿತ್ರ ವೃತ್ತಿಯನ್ನು ಕೇವಲ ಲೈಂಗಿಕವಾಗಿ ಬಿಂಬಿಸಲಾಗುತ್ತಿರುವುದು ಅತ್ಯಂತ ಬೇಸರದ ಸಂಗತಿ ಎಂದು ಅವರು ಮಾರ್ಮಿಕವಾಗಿ ಹೇಳಿದ್ದಾರೆ.
ಭಾರತದಲ್ಲಿ ನರ್ಸ್ಗಳ ಸಮವಸ್ತ್ರವು ಇಂದಿಗೂ ಬ್ರಿಟಿಷ್ ಆಳ್ವಿಕೆಯ ಶೈಲಿಯಲ್ಲೇ ಮುಂದುವರಿದಿದೆ. ಈ ವಿದೇಶಿ ಲುಕ್ ಬದಲಾಗಿ ನಮ್ಮ ದೇಶದ ಸಂಸ್ಕೃತಿ ಮತ್ತು ಅವರಿಗೆ ಕಾಯಕದ ಸ್ಥಳದಲ್ಲಿ ಹೆಚ್ಚಿನ ಕಂಫರ್ಟ್ ನೀಡುವಂತೆ ವಸ್ತ್ರ ವಿನ್ಯಾಸವನ್ನು ‘ಭಾರತೀಯಗೊಳಿಸಿದರೆ’ ಅವರ ಮೇಲಿರುವ ಸಮಾಜದ ಹಳೆಯ ದೃಷ್ಟಿಕೋನ ಮತ್ತು ಭಾವನೆಗಳು ಖಂಡಿತವಾಗಿಯೂ ಧನಾತ್ಮಕವಾಗಿ ಬದಲಾಗಬಲ್ಲವು ಎಂದು ಕಂಗನಾ ಪ್ರತಿಪಾದಿಸಿದ್ದಾರೆ.
ಇತ್ತೀಚಿನ ಕೋವಿಡ್-19 ಸಾಂಕ್ರಾಮಿಕದ ಕರಾಳ ದಿನಗಳಲ್ಲಿ, ಸ್ವಂತ ಕುಟುಂಬದವರೇ ರೋಗಿಯನ್ನು ಮುಟ್ಟಲು ಹೆದರಿ, ಮಾತನಾಡಲು ಭಯಬೀಳುತ್ತಿದ್ದ ಸಂದರ್ಭದಲ್ಲಿ, ಈ ನರ್ಸ್ಗಳು ರಾತ್ರಿ-ಹಗಲೆನ್ನದೆ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸೇವೆ ಸಲ್ಲಿಸಿದರು. ಆ ಸಮಯದಲ್ಲಿ ನಾವೆಲ್ಲರೂ ಅವರನ್ನು ‘ಕೊರೊನಾ ವಾರಿಯರ್ಸ್’ ಎಂದು ಕರೆದು, ಚಪ್ಪಾಳೆ ತಟ್ಟಿ, ಸನ್ಮಾನಿಸಿ ಗೌರವಿಸಿದೆವು. ಆದರೆ, ಬಿಕ್ಕಟ್ಟು ಮುಗಿದ ತಕ್ಷಣ ಅವರನ್ನು ಮರೆತು ಸಾಮಾನ್ಯ ದಿನಗಳಲ್ಲಿ ಕೀಳಾಗಿ ನೋಡುವುದು ಸಮಾಜದ ದ್ವಿಮುಖ ನೀತಿಯಾಗಿದೆ. ಅವರ ತ್ಯಾಗ ಕೇವಲ ಕೋವಿಡ್ ಸಮಯಕ್ಕೆ ಸೀಮಿತವಾಗಿರಲಿಲ್ಲ, ಅದು ಅವರ ನಿರಂತರ ಬದುಕಿನ ಭಾಗವಾಗಿದೆ.
ಈ ಸಿನಿಮಾವು 26/11ರ ಮುಂಬೈ ಉಗ್ರರ ದಾಳಿಯ ಸಂದರ್ಭದಲ್ಲಿ ಕಾಮಾ ಆಸ್ಪತ್ರೆಯಲ್ಲಿದ್ದ ನೂರಾರು ರೋಗಿಗಳ ಜೀವ ಉಳಿಸಿದ ಧೀರ ನರ್ಸ್ ‘ಅಂಜಲಿ ಕುಲ್ತೆ’ ಅವರ ನೈಜ ಜೀವನದ ಕಥೆಯನ್ನು ಆಧರಿಸಿದೆ.
ಕೇವಲ ಕಲ್ಪಿತ ಕಥೆಯಾಗಿರದೆ, ನೈಜ ಹೀರೋಗಳ ಹೋರಾಟವನ್ನು ಇದು ಬಿಂಬಿಸುತ್ತದೆ.
ನರ್ಸ್ಗಳ ಬದುಕಿನ ನೈಜ ಕಷ್ಟಗಳು, ಅವರ ಮೇಲಿನ ಸಾಮಾಜಿಕ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಈ ಸಿನಿಮಾ ಕನ್ನಡಿ ಹಿಡಿಯುತ್ತದೆ.
ಚಿತ್ರಮಂದಿರಗಳಲ್ಲಿ ಈ ಸಿನಿಮಾವನ್ನು ವೀಕ್ಷಿಸುವುದು ನಾವು ನಮ್ಮ ಹೆಮ್ಮೆಯ ಶುಶ್ರೂಷಕಿಯರಿಗೆ ಮತ್ತು ನಮ್ಮ ಅಕ್ಕ ,ತಂಗಿ ,ಅಣ್ಣ ತಮ್ಮ ನರ್ಸ್ (ಸಿಸ್ಟರ್, ಬ್ರದರ್ಸ) ಸಲ್ಲಿಸುವುದು ನಿಜವಾದ ಗೌರವವಾಗಿದೆ.
ಲೇಖಕರು.
ತಾಯಪ್ಪ ಮರ್ಚೆಡ್
ಪತ್ರಕರ್ತರು ಗಂಗಾವತಿ