Home ಸುದ್ದಿ ಹೊಸಪೇಟೆಯಲ್ಲಿ 4 ನೇ ಬ್ರಾಂಚ್ ‘ಬಿಗ್ ಡ್ಯಾಡಿ’ ಪ್ರೀಮಿಯಂ ಕ್ಲೋತ್ ಶಾಪ್ ಅದ್ಧೂರಿ ಲೋಕಾರ್ಪಣೆ: ಬಿಗ್ ಬಾಸ್ ವಿಜೇತ ಗಿಲ್ಲಿ ನಟನಿಂದ ಉದ್ಘಾಟನೆ.
ಸುದ್ದಿ

ಹೊಸಪೇಟೆಯಲ್ಲಿ 4 ನೇ ಬ್ರಾಂಚ್ ‘ಬಿಗ್ ಡ್ಯಾಡಿ’ ಪ್ರೀಮಿಯಂ ಕ್ಲೋತ್ ಶಾಪ್ ಅದ್ಧೂರಿ ಲೋಕಾರ್ಪಣೆ: ಬಿಗ್ ಬಾಸ್ ವಿಜೇತ ಗಿಲ್ಲಿ ನಟನಿಂದ ಉದ್ಘಾಟನೆ.

Share
Share

ಮರ್ಚೆಡ್ ಡೇಸ್ ಸುದ್ದಿ|ವಿಜಯನಗರ.

ಹೊಸಪೇಟೆ:ಐತಿಹಾಸಿಕ ನಗರ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಯುವ ಸಮೂಹದ ನೆಚ್ಚಿನ ‘ಬಿಗ್ ಡ್ಯಾಡಿ ಪ್ರೀಮಿಯಂ ಕ್ಲೋತ್ ಶಾಪ್’ನ ನೂತನ ನಾಲ್ಕನೇ ಶಾಖೆ ಅತ್ಯಂತ ವಿಜೃಂಭಣೆಯಿಂದ ಲೋಕಾರ್ಪಣೆಗೊಂಡಿತು. ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಶ್ರೀಕಾಂತ್ ನಾಯಕ್ ಮಾಲೀಕತ್ವದ ಈ ನೂತನ ಮಳಿಗೆಯ ಉದ್ಘಾಟನಾ ಸಮಾರಂಭಕ್ಕೆ ಬಿಗ್ ಬಾಸ್ ವಿಜೇತ ಗಿಲ್ಲಿ ನಟ ಮುಖ್ಯ ಅತಿಥಿಯಾಗಿ ಆಗಮಿಸಿ, ರಿಬ್ಬನ್ ಕತ್ತರಿಸುವ ಮೂಲಕ ಶಾಖೆಯನ್ನು ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಿದರು.

ತಮ್ಮ ನೆಚ್ಚಿನ ಕಲಾವಿದ ಗಿಲ್ಲಿ ನಟನನ್ನು ಕಣ್ತುಂಬಿಕೊಳ್ಳಲು ಹಾಗೂ ನೂತನ ಮಳಿಗೆಯ ವಸ್ತ್ರ ವಿನ್ಯಾಸಗಳನ್ನು ವೀಕ್ಷಿಸಲು ನೂರಾರು ಸಂಖ್ಯೆಯಲ್ಲಿ ಸ್ಥಳೀಯ ಸಾರ್ವಜನಿಕರು ಮತ್ತು ಯುವ ಸಮೂಹ ಮಳಿಗೆಯ ಆವರಣದಲ್ಲಿ ಕಿಕ್ಕಿರಿದು ಜಮಾಯಿಸಿದ್ದರು. ನೆರೆದಿದ್ದ ಅಭಿಮಾನಿಗಳು ಮತ್ತು ಗ್ರಾಹಕರನ್ನು ಉದ್ದೇಶಿಸಿ ಮಾತನಾಡಿದ ಗಿಲ್ಲಿ ನಟ, ಯುವ ಉದ್ಯಮಿ ಶ್ರೀಕಾಂತ್ ನಾಯಕ್ ಅವರ ಶ್ರಮವನ್ನು ಶ್ಲಾಘಿಸಿ, ಹೊಸಪೇಟೆಯ ವಸ್ತ್ರಲೋಕದಲ್ಲಿ ‘ಬಿಗ್ ಡ್ಯಾಡಿ’ ಮುಂಚೂಣಿಯಲ್ಲಿ ನಿಲ್ಲಲಿ ಎಂದು ಶುಭ ಹಾರೈಸಿದರು.

ಈಗಾಗಲೇ ಗಂಗಾವತಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಮೂರು ಪ್ರಮುಖ ಕೇಂದ್ರಗಳಲ್ಲಿ ‘ಬಿಗ್ ಡ್ಯಾಡಿ’ ಮಳಿಗೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ ಯುವ ಜನಾಂಗದ ಫ್ಯಾಷನ್ ಅಭಿರುಚಿಗೆ ತಕ್ಕಂತೆ ಗುಣಮಟ್ಟದ ಬಟ್ಟೆಗಳನ್ನು ಕೈಗೆಟುಕುವ ದರದಲ್ಲಿ ಒದಗಿಸುತ್ತಾ ಗ್ರಾಹಕರ ವಿಶ್ವಾಸ ಗಳಿಸಿರುವ ಸಂಸ್ಥೆ, ಇದೀಗ ತನ್ನ ವಿಸ್ತರಣೆಯ ಭಾಗವಾಗಿ ನಾಲ್ಕನೇ ಶಾಖೆಯನ್ನು ವಿಜಯನಗರದ ಹೊಸಪೇಟೆಗೆ ಪರಿಚಯಿಸಿದೆ.

ಉದ್ಘಾಟನೆಯ ಮೊದಲ ದಿನ ಗ್ರಾಹಕರಿಗೆ ಆಕರ್ಷಕ ರಿಯಾಯಿತಿ ಮತ್ತು ವಿಶೇಷ ಕೊಡುಗೆಗಳನ್ನು (ಆಫರ್) ಪ್ರಕಟಿಸಲಾಗಿದ್ದು, ಮೊದಲ ದಿನವೇ ಮಳಿಗೆಯಲ್ಲಿ ವ್ಯಾಪಕ ಖರೀದಿ ಭರಾಟೆ ಕಂಡುಬಂತು. ಆಧುನಿಕ ಟ್ರೆಂಡ್‌ಗೆ ತಕ್ಕಂತೆ ಪುರುಷರ ಮತ್ತು ಯುವಕರ ಪ್ರೀಮಿಯಂ ಉಡುಪುಗಳ ಬೃಹತ್ ಸಂಗ್ರಹ ಒಂದೇ ಸೂರಿನಡಿ ಲಭ್ಯವಿರುವುದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಕೇವಲ ವ್ಯಾಪಾರ-ವಹಿವಾಟಿಗೆ ಸೀಮಿತವಾಗದೆ, ಸಾಮಾಜಿಕ ಕಳಕಳಿಯನ್ನೂ ಮೆರೆದ ಸಂಸ್ಥೆಯು ಉದ್ಘಾಟನಾ ವೇದಿಕೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಬಡ ಪ್ರತಿಭಾವಂತ ಮಕ್ಕಳಿಗೆ ಉಚಿತ ಸೈಕಲ್‌ಗಳನ್ನು ವಿತರಿಸಿದರು. ಉದ್ಯಮದೊಂದಿಗೆ ಸಮಾಜಮುಖಿ ಕಾರ್ಯ ಕೈಗೊಂಡ ಶ್ರೀಕಾಂತ್ ನಾಯಕ್ ಅವರ ನಡೆಯನ್ನು ನೆರೆದಿದ್ದ ಗಣ್ಯರು ಹಾಗೂ ಸಾರ್ವಜನಿಕರು ಮುಕ್ತಕಂಠದಿಂದ ಪ್ರಶಂಸಿಸಿದರು.

Share
Related Articles
ಅಂಕಣಸುದ್ದಿ

ಒಂದೇ ಒಂದು ಗುಂಡು ಹಾರಿಸದೆ ಮಾಯಾನಗರಿ ಮುಂಬೈ ಆಳಿದ ‘ಸುಲ್ತಾನ್’!

ಬಡತನದ ಕೂಲಿಯಿಂದ ಬಾಲಿವುಡ್ ಬೆರಗಾಗುವಂತೆ ಬೆಳೆದ 'ಹಾಜಿ ಮಸ್ತಾನ್' ಎಂಬ ಬ್ರಾಂಡ್ ಡಾನ್‌ನದ ರೋಚಕ ಕಥೆ...

ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...