Home ಅಂಕಣ ಕಣ್ಮರೆಯಾಗುತ್ತಿರುವ ಔಪಚಾರಿಕ ಪತ್ರಿಕೋದ್ಯಮ ಶಿಕ್ಷಣ…
ಅಂಕಣಶಿಕ್ಷಣಸುದ್ದಿ

ಕಣ್ಮರೆಯಾಗುತ್ತಿರುವ ಔಪಚಾರಿಕ ಪತ್ರಿಕೋದ್ಯಮ ಶಿಕ್ಷಣ…

Share
Share

 

ಡಿಜಿಟಲ್ ಯುಗದಲ್ಲಿ ಮಾಧ್ಯಮ ಕ್ಷೇತ್ರದ ಸ್ವರೂಪ ಬದಲಾವಣೆ; ಉದ್ಯೋಗದ ಭರವಸೆ, ಪ್ರಾಯೋಗಿಕ ತರಬೇತಿ ಮತ್ತು ತಂತ್ರಜ್ಞಾನ ಕೌಶಲ್ಯಕ್ಕೆ ಹೆಚ್ಚಲಿ ಒತ್ತು.
ಮರ್ಚೆಡ್ ಡೇಸ್ |ವಿಶೇಷ ಲೇಖನ:

ಪ್ರಪಂಚದಾದ್ಯಂತ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎಂದೇ ಪರಿಗಣಿಸಲ್ಪಟ್ಟಿರುವ ಪತ್ರಿಕೋದ್ಯಮವು ಇಂದು ತೀವ್ರ ಬದಲಾವಣೆಯ ಪರ್ವದಲ್ಲಿದೆ. ಈ ಬದಲಾವಣೆಯ ಗಾಳಿಯಲ್ಲಿ ನಲುಗುತ್ತಿರುವುದು ಕೇವಲ ಪತ್ರಿಕೆಗಳಲ್ಲ, ಬದಲಿಗೆ ಆ ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕಿಕೊಡಬೇಕಾದ ಪತ್ರಿಕೋದ್ಯಮ ಶಿಕ್ಷಣ. ಒಂದು ಕಾಲದಲ್ಲಿ ಪತ್ರಿಕೋದ್ಯಮವು ಯುವಜನರ ಗಮನ ಸೆಳೆಯುತ್ತಿದ್ದ ಪ್ರಮುಕ ಶಿಕ್ಷಣ ಕ್ಷೇತ್ರವಾಗಿತ್ತು. ಪತ್ರಕರ್ತರಾಗಬೇಕು, ಸುದ್ದಿ ಬರೆಯಬೇಕು ರೇಡಿಯೋ ದೂರದರ್ಶನದಲ್ಲಿ ಕೆಲಸ ಮಾಡಬೇಕು ಎಂಬ ಕನಸು ಹೊತ್ತ ಅನೇಕ ವಿದ್ಯಾರ್ಥಿಗಳು ಪತ್ರಿಕೋದ್ಯಮ ಕೋರ್ಸ ಆಯ್ಕೆ ಮಾಡುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ವಿಶ್ವವಿದ್ಯಾಲಯಗಳಲ್ಲಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ಕೋರ್ಸ್‌ ಗಳಿಗೆ ವಿದ್ಯಾರ್ಥಿಗಳ ಪ್ರವೇಶ ಕಡಿಮೆಯಾಗುತ್ತಿದೆ.

ಪತ್ರಿಕೋದ್ಯಮ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಲು ಹಲವು ಕಾರಣಗಳಿರಬಹುದು. ಇಂದಿನ ವಿದ್ಯಾರ್ಥಿಗಳು ಉದ್ಯೋಗಾವಕಾಶ, ಸಂಬಳ, ವೃತ್ತಿಯ ಸ್ಥಿರತೆ ಮತ್ತು ತಂತ್ರಜ್ಞಾನ ಆಧಾರಿತ ಕೌಶಲ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಇದರ ಪರಿಣಾಮವಾಗಿ ಕೆಲವು ಸಾಂಪ್ರದಾಯಿಕ ಪತ್ರಿಕೋದ್ಯಮ ಕೋರ್ಸ್‌ಗಳಿಗೆ ಪ್ರವೇಶ ಕಡಿಮೆಯಾಗುತ್ತಿದೆ. ಸಂಸ್ಥೆಯ ಪ್ರಕಾರ, ಸಾಕಷ್ಟು ವಿದ್ಯಾರ್ಥಿಗಳನ್ನು ಆಕರ್ಷಿಸಲು ಸಾಧ್ಯವಾಗದಿರುವುದು ಮತ್ತು ಆರ್ಥಿಕವಾಗಿ ಕಾರ್ಯಕ್ರಮವನ್ನು ಮುಂದುವರಿಸುವುದು ಕಷ್ಟವಾಗಿರುವುದು ಪ್ರಮುಖ ಕಾರಣಗಳಾಗಿದ್ದವು.

ಪತ್ರಿಕೋದ್ಯಮದ ಸ್ವರೂಪವೇ ಇಂದು ಬದಲಾಗಿದೆ. ಹಿಂದೆ ಪತ್ರಿಕೆ, ರೇಡಿಯೋ ಮತ್ತು ದೂರದರ್ಶನ ಪ್ರಮುಖ ಮಾಧ್ಯಮಗಳಾಗಿದ್ದರೆ, ಇಂದು ವೆಬ್‌ಸೈಟ್‌ಗಳು, ಮೊಬೈಲ್ ನ್ಯೂಸ್, ಸಾಮಾಜಿಕ ಮಾಧ್ಯಮ, ಪಾಡ್‌ಕಾಸ್ಟ್‌, ವೀಡಿಯೊ ಮತ್ತು ಡಿಜಿಟಲ್ ಸ್ಟೋರಿಟೆಲಿಂಗ್ ಪ್ರಮುಖವಾಗಿವೆ. ಹೀಗಾಗಿ ಪತ್ರಿಕೋದ್ಯಮ ಶಿಕ್ಷಣವೂ ಈ ಬದಲಾವಣೆಗೆ ಹೊಂದಿಕೊಳ್ಳಬೇಕಾಗಿದೆ. ಡಿಜಿಟಲ್ ಪತ್ರಿಕೋದ್ಯಮ, ಮೊಬೈಲ್ ಜರ್ನಲಿಸಂ, ಡೇಟಾ ಜರ್ನಲಿಸಂ, ಮಲ್ಟಿಮೀಡಿಯಾ ಸ್ಟೋರಿಟೆಲಿಂಗ್, ವೀಡಿಯೊ ಎಡಿಟಿಂಗ್ ಮತ್ತು ಸಾಮಾಜಿಕ ಮಾಧ್ಯಮ ನಿರ್ವಹಣೆಯಂತಹ ಕೌಶಲ್ಯಗಳಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ.

ಪತ್ರಿಕೋದ್ಯಮ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳ ಆಸಕ್ತಿ ಹೆಚ್ಚಿಸಲು ಪಠ್ಯಕ್ರಮವನ್ನು ಕಾಲಕ್ಕೆ ತಕ್ಕಂತೆ ಬದಲಾಯಿಸುವ ಅಗತ್ಯವಿದೆ. ಕೇವಲ ಸಾಂಪ್ರದಾಯಿಕ ಪತ್ರಿಕೆ ಬರವಣಿಗೆಯ ಜೊತೆಗೆ ಡಿಜಿಟಲ್ ಮಾಧ್ಯಮ ಮತ್ತು ಪ್ರಾಯೋಗಿಕ ತರಬೇತಿಗೆ ಹೆಚ್ಚಿನ ಅವಕಾಶ ನೀಡಬೇಕು. 2025ರಲ್ಲಿ ಪ್ರಕಟವಾದ ಪತ್ರಿಕೋದ್ಯಮ ಶಿಕ್ಷಣದ ಕುರಿತು ವಿಶ್ಲೇಷಣೆಯೊಂದರಲ್ಲಿ, ಪಠ್ಯಕ್ರಮವನ್ನು ಡಿಜಿಟಲ್ ಮಾಧ್ಯಮ, ಮಲ್ಟಿಮೀಡಿಯಾ ಸ್ಟೋರಿಟೆಲಿಂಗ್ ಮತ್ತು ಡೇಟಾ ಜರ್ನಲಿಸಂಗೆ ಹೊಂದಿಸುವುದು, ಮಾಧ್ಯಮ ಸಂಸ್ಥೆಗಳೊಂದಿಗೆ ಇಂಟರ್ನ್‌ಶಿಪ್ ಮತ್ತು ಪ್ರಾಯೋಗಿಕ ತರಬೇತಿ ಹೆಚ್ಚಿಸುವುದು ಅಗತ್ಯವೆಂದು ಚರ್ಚಿಸಲಾಗಿದೆ.ಕೆಲವು ವಿಶ್ವವಿದ್ಯಾಲಯಗಳಲ್ಲಿ ಪತ್ರಿಕೋದ್ಯಮ ಕೋರ್ಸ್‌ಗಳು ಕಡಿಮೆಯಾಗುತ್ತಿರುವುದು ಕೇವಲ ಒಂದು ಶಿಕ್ಷಣ ಕೋರ್ಸ್‌ನ ಸಮಸ್ಯೆಯಲ್ಲ; ಅದು ಬದಲಾಗುತ್ತಿರುವ ಮಾಧ್ಯಮ ಕ್ಷೇತ್ರದ ಪ್ರತಿಬಿಂಬವೂ ಹೌದು.

ವಿದ್ಯಾರ್ಥಿಗಳ ಆಸಕ್ತಿ, ಉದ್ಯೋಗದ ಸ್ವರೂಪ ಮತ್ತು ತಂತ್ರಜ್ಞಾನದಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ಅನುಗುಣವಾಗಿ ಪತ್ರಿಕೋದ್ಯಮ ಶಿಕ್ಷಣವೂ ಹೊಸ ರೂಪ ಪಡೆಯಬೇಕಾಗಿದೆ. ಕೆಲವೊಮ್ಮೆ ಎಷ್ಟೋ ವಿದ್ಯಾರ್ಥಿಗಳಲ್ಲಿ ಒಳ್ಳೆ ಪತ್ರಕರ್ತ ಅಥವ ಒಳ್ಳೆಯ ಪತ್ರರ್ತೆಯಾಗುವ ಆಸೆ ಇರಬಹುದು ಕೆಲವೊಂದು ವಿಶ್ವವಿದ್ಯಾಲಯಗಳಲ್ಲಿ ಲಭ್ಯವಿಲ್ಲಾದಗ ಕಷ್ಟವಾಗುತ್ತದೆ ಅಂತಹ ವಿದ್ಯಾರ್ಥಿಗಳಿಗೆ ಪ್ರೋತ್ಸಹ ನೀಡಬೇಕು. ಕೆಲವೊಂದು ವಿದ್ಯಾರ್ಥಿಗಳಲ್ಲಿ ಪತ್ರಿಕೋದ್ಯಾಮವೆಂದರೆ ಕಷ್ಟ ಅದು ನಮಗಲ್ಲ ಎಂಬ ವಿದ್ಯಾರ್ಥಿಗಳಲ್ಲಿ ಅದರ ಬಗ್ಗೆ ಆಸಕ್ತಿ ಮೂಡಿಸಬೇಕು.

ಅದೆಷ್ಟೋ ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮ ಎಂಬ ಅದ್ಯಾಯನವಿದೆ ಎಂಬ ವಿಷಯವೆ ತಿಳಿದಿರುವುದ್ದಿಲ ಅದ್ದರಿಂದಲ್ಲೆ ಅವರಲ್ಲಿ ಶಾಲ ಮಟ್ಟದಲ್ಲಿಯೇ ಆಸಕ್ತಿ ಮೂಡಿಸಬೇಕು. ಪತ್ರಿಕೋದ್ಯಮ ಶಿಕ್ಷಣವು ಕೇವಲ ಸುದ್ದಿ ಬರೆಯುವುದನ್ನು ಕಲಿಸುವುದಲ್ಲ. ಸತ್ಯವನ್ನು ಹುಡುಕುವ ಮಾಹಿತಿಯನ್ನು ಪರಿಶೀಲಿಸುವ , ಸಮಾಜದ ಸಮಸ್ಯೆಗಳನ್ನು ಅರ್ಥಮಾಡುಕೊಳ್ಳುವ ಮತ್ತು ಜವಾಬ್ದಾರಿಯಿಂದ ಜನರಿಗೆ ಮಾಹಿತಿ ತಲುಪಿಸುವ

ಪತ್ರಕರ್ತರನ್ನು ರೂಪಿಸಲು ಸಾಧ್ಯ. ಪತ್ರಿಕೋದ್ಯಮದ ರೂಪ ಬದಲಾಗಬಹುದು; ಆದರೆ ಸತ್ಯವನ್ನು ಸಮಾಜದ ಮುಂದಿಡುವ ಅದರ ಮೂಲ ಜವಾಬ್ದಾರಿ ಎಂದಿಗೂ ಬದಲಾಗಬಾರದು. ಆ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಯುವಪೀಳಿಗೆಯನ್ನು ರೂಪಿಸುವುದೇ ಇಂದಿನ ಪತ್ರಿಕೋದ್ಯಮ ಶಿಕ್ಷಣದ ನಿಜವಾದ ಸವಾಲು ಮತ್ತು ಗುರಿ.

ಮರ್ಚೆಡ್ ಡೇಸ್ | ವಿಶೇಷ ಲೇಖನಿ:
            ಅನುಶ್ರೀ .ಆರ್ .
  ಪತ್ರಿಕೋದ್ಯಮ ಸಮೂಹ ಸಂವಹನ ವಿಭಾಗ ,
     ಕೊಡಗು ವಿಶ್ವವಿದ್ಯಾನಿಲಯ ಕೊಡಗು.
Share
Related Articles
ಅಂಕಣಸುದ್ದಿ

ಒಂದೇ ಒಂದು ಗುಂಡು ಹಾರಿಸದೆ ಮಾಯಾನಗರಿ ಮುಂಬೈ ಆಳಿದ ‘ಸುಲ್ತಾನ್’!

ಬಡತನದ ಕೂಲಿಯಿಂದ ಬಾಲಿವುಡ್ ಬೆರಗಾಗುವಂತೆ ಬೆಳೆದ 'ಹಾಜಿ ಮಸ್ತಾನ್' ಎಂಬ ಬ್ರಾಂಡ್ ಡಾನ್‌ನದ ರೋಚಕ ಕಥೆ...

ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...