Home ಸುದ್ದಿ ​₹40 ಸಾವಿರ ಲಂಚ ಪಡೆಯುತ್ತಿದ್ದ ಮಲ್ಲಾಪುರ ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ!
ಸುದ್ದಿ

​₹40 ಸಾವಿರ ಲಂಚ ಪಡೆಯುತ್ತಿದ್ದ ಮಲ್ಲಾಪುರ ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ!

Share
Oplus_131106
Share
ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ.

ಗಂಗಾವತಿ: ಪೋತಿ ಖಾತೆಯಲ್ಲಿ ಹೆಸರು ಬದಲಾವಣೆ ಮಾಡಿಕೊಡಲು ಬರೋಬ್ಬರಿ ₹40,000 ಲಂಚದ ಹಣಕ್ಕೆ ಬೇಡಿಕೆಯಿಟ್ಟು, ಹಣ ಸ್ವೀಕರಿಸುತ್ತಿದ್ದ ಮಲ್ಲಾಪುರ ಗ್ರಾಮ ಲೆಕ್ಕಾಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ರೆಡ್‌ಹ್ಯಾಂಡ್‌ ಆಗಿ ವಶಕ್ಕೆ ಪಡೆದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ. ಆನೆಗೊಂದಿ ಹೊರವಲಯದ ಪೆಟ್ರೋಲ್ ಬಂಕ್ ಸಮೀಪವೇ ಲಂಚದ ಹಣ ಸಮೇತ ಲೋಕಾಯುಕ್ತ ಪೊಲೀಸರ ಕೈಗೆ ಅಧಿಕಾರಿ ಸಿಕ್ಕಿಬಿದ್ದ ಘಟನೆ ನಡೆದಿದೆ.

ತಾಲೂಕಿನ ಜಂಗ್ಲಿ ರಂಗಾಪುರ ಗ್ರಾಮದ ಸರ್ವೇ ನಂಬರ್ 3ರಲ್ಲಿ ದಿವಂಗತ ಕುರುಬರ ಸತ್ಯಪ್ಪ ಅವರಿಗೆ ಸೇರಿದ ಒಂದು ಎಕರೆ  ಈ ಜಮೀನನ್ನು ತಮ್ಮ ಹೆಸರಿಗೆ ಪೋತಿ ಖಾತೆ ಬದಲಾವಣೆ ಮಾಡಿಕೊಡುವಂತೆ ಮೃತ ಸತ್ಯಪ್ಪ ಅವರ ಕುಟುಂಬದವರು ಅರ್ಜಿ ಸಲ್ಲಿಸಿ ಮನವಿ ಮಾ

ಇದೇ ವೇಳೆ, ವಿಲ್ (ಮರಣಶಾಸನ) ಪ್ರಕಾರ ಆ ಜಮೀನು ತನಗೆ ಸೇರಬೇಕೆಂದು ರಾಮು ಎಂಬ ವ್ಯಕ್ತಿಯೂ ತಹಸೀಲ್ದಾರ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ವಿವಾದಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ಇದ್ದ ಕಾರಣ, ಗಂಗಾವತಿ ತಹಸೀಲ್ದಾರರು ಸ್ಥಳದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ಹೊರಡಿಸಿದ್ದರು.

ಹೈಕೋರ್ಟ್ ತಡೆಯಾಜ್ಞೆ ಮತ್ತು ತಹಸೀಲ್ದಾರ್ ಆದೇಶವಿದ್ದರೂ ಸಹ, ಮಲ್ಲಾಪುರ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಸೋಮನಾಥ ಎಂಬುವವರು ಕೆಲಸ ಮಾಡಿಕೊಡಲು ರಾಮು ಅವರಿಂದ ₹40,000 ಲಂಚದ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಲಂಚ ನೀಡಲು ಇಷ್ಟವಿಲ್ಲದ ರಾಮು ಅವರು ಕೊಪ್ಪಳ ಜಿಲ್ಲಾ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ದೂರಿನ ಹಿನ್ನೆಲೆಯಲ್ಲಿ ಬಲೆ ಬೀಸಿದ ಕೊಪ್ಪಳ ಲೋಕಾಯುಕ್ತ ಡಿವೈಎಸ್ಪಿ ವಿಜಯ್ ಬಿರಾದಾರ್ ನೇತೃತ್ವದ ಪೊಲೀಸ್ ತಂಡವು, ಆನೆಗೊಂದಿ ಪೆಟ್ರೋಲ್ ಬಂಕ್ ಬಳಿ ರಾಮು ಅವರಿಂದ ₹40,000 ಲಂಚ ಸ್ವೀಕರಿಸುತ್ತಿದ್ದ ವೇಳೆಯಲ್ಲೇ ಸೋಮನಾಥ ಅವರನ್ನು ಹಣದ ಸಮೇತ ವಶಕ್ಕೆ ಪಡೆದಿದೆ. ಸದ್ಯ ಆರೋಪಿ ಗ್ರಾಮ ಲೆಕ್ಕಾಧಿಕಾರಿಯನ್ನು ಗಂಗಾವತಿ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಎಂದು ಮಾಹಿತಿ ತಿಳಿದು ಬಂದಿದೆ.

Share
Related Articles
ಅಂಕಣಸುದ್ದಿ

ಜನರ ಜೀವ ಉಳಿಸಲು ಜಾಗತಿಕ ಔಷಧಿ ದೈತ್ಯರ ಎದರು ಸೆಟೆದು ನಿಂತ ಧೀರ ಅಧಿಕಾರಿ ಐಎಎಸ್ ಅಧಿಕಾರಿ ಪಿ.ಎಚ್. ಕುರಿಯನ್.

ಮರ್ಚೆಡ್ ಡೇಸ್ | ವಿಶೇಷ ಲೇಖನ: ಅಧಿಕಾರವೆಂದರೆ ಜನರ ಸೇವೆ ಎಂಬುದನ್ನು ಜಗತ್ತಿಗೆ ತೋರಿಸಿದ ಅಪರೂಪದ...

ಸುದ್ದಿ

ಡ್ರೋನ್ ಕಣ್ಣಲ್ಲಿ ಸೆರೆಯಾಯ್ತು ದೇವಿರಮ್ಮ ಬೆಟ್ಟದ ಅದ್ಭುತ ವೈಭವ: ಜನಸಾಗರದ ನಡುವೆ ರಕ್ಷಣಾ ಪಡೆಯ ಶ್ಲಾಘನೀಯ ಸೇವ.

ಮರ್ಚೆಡ್ ಡೇಸ್ ಸುದ್ದಿ|ಚಿಕ್ಕಮಂಗಳೂರು. ಚಿಕ್ಕಮಗಳೂರು :ತಾಲೂಕಿನ ಮಲ್ಲೇನಹಳ್ಳಿ ಸಮೀಪದಲ್ಲಿರುವ ಸುಪ್ರಸಿದ್ಧ ದೇವಿರಮ್ಮ ಬೆಟ್ಟದಲ್ಲಿ ಭಕ್ತಿಭಾವದ ಪರಾಕಾಷ್ಠೆ...

ಸುದ್ದಿ

ಆಕಾಶದಲ್ಲೇ ಬೆಳಕಿನ ಮಹಾಸಂಗ್ರಾಮ! ಶತಮಾನಗಳ ಸಂಪ್ರದಾಯಕ್ಕೆ ಸಾಕ್ಷಿಯಾದ ಕೇರಳದ ತ್ರಿಶೂರ್ ಪೂರಂನ ‘ವೆಡಿಕ್ಕೆಟ್ಟು’ ವೈಭವ.

  ಮರ್ಚೆಡ್ ಡೇಸ್ ಸುದ್ದಿ| ವಿಶೇಷ ವರದಿ ಭಕ್ತಿ, ಸಂಪ್ರದಾಯ ಮತ್ತು ಪಟಾಕಿಗಳ ಅಬ್ಬರದ ಅಪರೂಪದ...

ಸುದ್ದಿ

ಹಾಲುಮತದ ಪುಣ್ಯಕಾಶಿ ಹುಲಜಂತಿಯಲ್ಲಿ ಕಲಿಯುಗದ ಪವಾಡ: ಮಾಳಿಂಗರಾಯನ ಶಿಖರಕ್ಕೆ ಶಿವ-ಪಾರ್ವತಿಯರಿಂದ ರೇಷ್ಮೆ ಮುಂಡಾಸು ಸೇವೆ.

ಮರ್ಚೆಡ್ ಡೇಸ್ ಸುದ್ದಿ|ಹುಲಿಜಂತಿ. ಹುಲಿಜಂತಿ:ಹಾಲುಮತದ ಶ್ರದ್ಧಾ ಕೇಂದ್ರ ಹುಲಜಂತಿ ಕ್ಷೇತ ಸಮಸ್ತ ಹಾಲುಮತ ಸಂಸ್ಕೃತಿಯ ಆರಾಧ್ಯ...