Home ಸುದ್ದಿ ಕುರುಹಿನ ಶೆಟ್ಟಿ ಸಮಾಜದ ಯುವ ಮುಖಂಡ ಪರಶುರಾಮ ತಟ್ಟಿ ನಿಧನ: ಗಣ್ಯರ ಸಂತಾಪ.
ಸುದ್ದಿ

ಕುರುಹಿನ ಶೆಟ್ಟಿ ಸಮಾಜದ ಯುವ ಮುಖಂಡ ಪರಶುರಾಮ ತಟ್ಟಿ ನಿಧನ: ಗಣ್ಯರ ಸಂತಾಪ.

Share
Share

 

ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ.

ಗಂಗಾವತಿ: ನಗರದ ಪಂಪಾನಗರ ನಿವಾಸಿ ಹಾಗೂ ಕುರುಹಿನ ಶೆಟ್ಟಿ ಸಮಾಜದ ಯುವ ಮುಖಂಡ ಪರಶುರಾಮ ತಟ್ಟಿ (48) ಅವರು ಅನಾರೋಗ್ಯದ ಕಾರಣ ಕೊಪ್ಪಳದಲ್ಲಿ ನಿಧನರಾಗಿದ್ದಾರೆ. ಪಂಪಣ್ಣ ತಟ್ಟಿ ಅವರ ಪುತ್ರರಾದ ಇವರು, ಕಳೆದ ಹಲವು ವರ್ಷಗಳಿಂದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿ ಸಮಾಜಮುಖಿ ಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದರು. ಮೃತರು ಓರ್ವ ಪುತ್ರ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಇವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯು ಭಾಗ್ಯನಗರದ ರುದ್ರಭೂಮಿಯಲ್ಲಿ ಗುರುವಾರ ಸಂಜೆ 4 ಗಂಟೆಗೆ ನೆರವೇರಿತು.

ಪರಶುರಾಮ ತಟ್ಟಿ ಅವರ ಅಕಾಲಿಕ ನಿಧನಕ್ಕೆ ಗಂಗಾವತಿಯ ಸ್ವಾಮಿ ವಿವೇಕಾನಂದ ಟ್ರಸ್ಟ್ ತೀವ್ರ ಕಂಬನಿ ಮಿಡಿದಿದೆ. ಟ್ರಸ್ಟ್‌ನ ಅಧ್ಯಕ್ಷ ಸಂತೋಷ ಮೇದಾರ, ಪ್ರಧಾನ ಕಾರ್ಯದರ್ಶಿ ಸಿದ್ದರಾಮ ಗೌಳಿ ಹಾಗೂ ಸರ್ವ ಸದಸ್ಯರು ಶೋಕ ವ್ಯಕ್ತಪಡಿಸಿದ್ದು, ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಸಂತಾಪ ಸೂಚಿಸಿದ್ದಾರೆ.

.

Share
Related Articles
ಸುದ್ದಿ

ಆಕಾಶದಲ್ಲೇ ಬೆಳಕಿನ ಮಹಾಸಂಗ್ರಾಮ! ಶತಮಾನಗಳ ಸಂಪ್ರದಾಯಕ್ಕೆ ಸಾಕ್ಷಿಯಾದ ಕೇರಳದ ತ್ರಿಶೂರ್ ಪೂರಂನ ‘ವೆಡಿಕ್ಕೆಟ್ಟು’ ವೈಭವ.

  ಮರ್ಚೆಡ್ ಡೇಸ್ ಸುದ್ದಿ| ವಿಶೇಷ ವರದಿ ಭಕ್ತಿ, ಸಂಪ್ರದಾಯ ಮತ್ತು ಪಟಾಕಿಗಳ ಅಬ್ಬರದ ಅಪರೂಪದ...

ಸುದ್ದಿ

ಹಾಲುಮತದ ಪುಣ್ಯಕಾಶಿ ಹುಲಜಂತಿಯಲ್ಲಿ ಕಲಿಯುಗದ ಪವಾಡ: ಮಾಳಿಂಗರಾಯನ ಶಿಖರಕ್ಕೆ ಶಿವ-ಪಾರ್ವತಿಯರಿಂದ ರೇಷ್ಮೆ ಮುಂಡಾಸು ಸೇವೆ.

ಮರ್ಚೆಡ್ ಡೇಸ್ ಸುದ್ದಿ|ಹುಲಿಜಂತಿ. ಹುಲಿಜಂತಿ:ಹಾಲುಮತದ ಶ್ರದ್ಧಾ ಕೇಂದ್ರ ಹುಲಜಂತಿ ಕ್ಷೇತ ಸಮಸ್ತ ಹಾಲುಮತ ಸಂಸ್ಕೃತಿಯ ಆರಾಧ್ಯ...

ಅಂಕಣಸುದ್ದಿ

ಮಿಡ್ಲ್ ಕ್ಲಾಸ್ ದೀಪಾವಳಿ: ಬೆಳಕಿನ ಹಬ್ಬದ ಹಿಂದಿರುವ ಬಜೆಟ್ ಬದುಕು.

  ಮರ್ಚೆಡ್ ಡೇಸ್ ವಿಶೇಷ ಲೇಖನ: ಕೆಲವು ವರ್ಷಗಳ ಹಿಂದಿನ ಸಂಭ್ರಮ ಈಗಿಲ್ಲ; ಆಸೆಗಳು ದೊಡ್ಡದಿವೆ,...

ಸುದ್ದಿ

ಗಂಗಾವತಿ ನಗರಸಭೆಗೆ ಹೊಸ ಪೌರಾಯುಕ್ತರಾಗಿ ಮಂಜುನಾಥ್ ಮಲ್ಲಪ್ಪ ಗುಂಡೂರ ನೇಮಕ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ಗಂಗಾವತಿ:* ಗಂಗಾವತಿ ನಗರಸಭೆಯಲ್ಲಿ ಖಾಲಿಯಿದ್ದ ಪೌರಾಯುಕ್ತರ...