Home ಸುದ್ದಿ ರಷ್ಯಾ ಟು ರಾಯಚೂರು! ಗಣಪತಿ ಬಪ್ಪನ ಸ್ವಾಗತಕ್ಕೆ ‘ಪಿ ಆರ್ ಎಸ್ ಬಾಯ್ಸ್’ ಸೃಷ್ಟಿಸಿದ ಹೊಸ ದಾಖಲೆ.
ಸುದ್ದಿ

ರಷ್ಯಾ ಟು ರಾಯಚೂರು! ಗಣಪತಿ ಬಪ್ಪನ ಸ್ವಾಗತಕ್ಕೆ ‘ಪಿ ಆರ್ ಎಸ್ ಬಾಯ್ಸ್’ ಸೃಷ್ಟಿಸಿದ ಹೊಸ ದಾಖಲೆ.

Share
Share
ಮರ್ಚೆಡ್ ಡೇಸ್ ಸುದ್ದಿ|ರಾಯಚೂರು.

ರಾಯಚೂರು: ನಗರದಲ್ಲಿ ಗಣೇಶೋತ್ಸವದ ಸಂಭ್ರಮ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದು, ಸ್ಥಳೀಯ ‘ಪಿಎಸ್ಆರ್ ಬಾಯ್ಸ್’ (PSR Boys) ತಂಡ ಆಯೋಜಿಸಿದ್ದ ಗಣೇಶ ಆಗಮನದ ಅದ್ಧೂರಿ ಮೆರವಣಿಗೆ ಇಡೀ ಕಲ್ಯಾಣ ಕರ್ನಾಟಕವೇ ಆಶ್ಚರ್ಯದಿಂದ ತಿರುಗಿ ನೋಡುವಂತೆ ಮಾಡಿದೆ. ಮಹಾರಾಷ್ಟ್ರದ ಪುಣೆ ಹಾಗೂ ದೂರದ ರಷ್ಯಾದಿಂದ ಖ್ಯಾತ ಡಿಜೆ ಆಪರೇಟರ್ಸ್ ಮತ್ತು ಡಿಜೆ ಜಾಕಿಗಳನ್ನು  ಕರೆಸಿ ನಡೆಸಲಾದ ಈ ಸಾಹಸಮಯ ಆಯೋಜನೆ ನಗರದ ಹಬ್ಬದ ಸಂಭ್ರಮಕ್ಕೆ ಹಿಂದೆಂದೂ ಕಾಣದ ಹೊಸ ಮೆರುಗು ತಂದಿದ್ದು, ಯುವಶಕ್ತಿಯ ಉತ್ಸಾಹ ಹೊಸ ದಾಖಲೆಯನ್ನೇ ಬರೆದಿದೆ.

ಗಣಪತಿ ಬಪ್ಪನ ಆಗಮನದ ಹಿನ್ನೆಲೆಯಲ್ಲಿ ನಗರದಲ್ಲಿ ಬೃಹತ್ ಜನಸಾಗರವೇ ಹರಿದುಬಂದಿತ್ತು. ಇಡೀ ರಾಯಚೂರಿನ ಬೀದಿಗಳನ್ನೇ ತಮ್ಮ ಡ್ಯಾನ್ಸ್ ಫ್ಲೋರ್ ಮಾಡಿಕೊಂಡಿದ್ದ ಸಾವಿರಾರು ಯುವಕರು, ಬೃಹತ್ ಸೌಂಡ್ ಸಿಸ್ಟಮ್ ಹಾಗೂ ಡಿಜೆ ವಾಹನಗಳ ಎದುರು ಮೈಮರೆತು ಹೆಜ್ಜೆ ಹಾಕಿ ಸಂಭ್ರಮಿಸಿದರು. ‘ಇದು ಕೇವಲ ಗಣೇಶನ ಆಗಮನವಲ್ಲ, ಇದೊಂದು ಹವಾ!’ ಎಂಬಂತೆ ಇಡೀ ನಗರದ ರಸ್ತೆ ರಸ್ತೆಗಳಲ್ಲೂ ಯುವಕರ ಹರ್ಷೋದ್ಗಾರ ಮುಗಿಲುಮುಟ್ಟಿತ್ತು.

ಈ ಮೆರವಣಿಗೆಯ ಪ್ರಮುಖ ಆಕರ್ಷಣೆಯೆಂದರೆ ಪುಣೆ-ರಷ್ಯಾ-ರಾಯಚೂರು ಶೈಲಿಯ ವಿಶಿಷ್ಟ ‘ಫ್ಯೂಷನ್ ಬೀಟ್ಸ್’. ರಷ್ಯಾದ ಅತ್ಯಾಧುನಿಕ ಹೈ-ವೋಲ್ಟೇಜ್ ಎಲೆಕ್ಟ್ರಾನಿಕ್ ಸೌಂಡ್ಸ್ ಜೊತೆಗೆ ಪುಣೆಯ ಖಡಕ್ ಧ್ವನಿ ಹಾಗೂ ಸ್ಥಳೀಯ ದೇಸಿ ಬೀಟ್ಸ್‌ಗಳನ್ನು ಸಮ್ಮಿಳಿತಗೊಳಿಸಿ (Russia × Pune × Raichur) ವಿಶೇಷವಾಗಿ ಸಿದ್ಧಪಡಿಸಲಾಗಿದ್ದ ಈ ಅಂತರರಾಷ್ಟ್ರೀಯ ಮಟ್ಟದ ಧ್ವನಿ ವ್ಯವಸ್ಥೆ ಮೆರವಣಿಗೆಯುದ್ದಕ್ಕೂ ರೋಮಾಂಚನಕಾರಿ ವಾತಾವರಣ ಸೃಷ್ಟಿಸಿತು.

ಸಾಂಪ್ರದಾಯಿಕ ಮೆರವಣಿಗೆಗಳ ಚೌಕಟ್ಟನ್ನು ಮೀರಿ ‘ಲೆಟ್ ದಿ ಬೀಟ್ಸ್ ಸ್ಪೀಕ್’  ಪರಿಕಲ್ಪನೆಯೊಂದಿಗೆ ರಸ್ತೆಯುದ್ದಕ್ಕೂ ಯುವ ಸಮೂಹ ಪ್ರದರ್ಶಿಸಿದ ಹುಮ್ಮಸ್ಸು ನಗರದ ಸಂಸ್ಕೃತಿಗೆ ಆಧುನಿಕ ಆಯಾಮ ನೀಡಿತು. ರಸ್ತೆಗಳನ್ನೇ ಬೃಹತ್ ವೇದಿಕೆಯನ್ನಾಗಿ ಪರಿವರ್ತಿಸಿ, ಪ್ರತಿಯೊಬ್ಬರೂ ಒಂದಾಗಿ ಕುಣಿದು ಕುಪ್ಪಳಿಸಿದ ಈ ದೃಶ್ಯಗಳು ಹಬ್ಬದ ಉತ್ಸಾಹವನ್ನು ಇಮ್ಮಡಿಗೊಳಿಸಿದವು.

ಸ್ಥಳೀಯ ಯುವಕರೆಲ್ಲ ಒಟ್ಟಾಗಿ ನಡೆಸಿದ ಈ ಅದ್ಭುತ ಗಣೇಶ ಆಗಮನದ ವಿಡಿಯೋ ಹಾಗೂ ದೃಶ್ಯಾವಳಿಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಕರ್ನಾಟಕದಲ್ಲಿ ತೀವ್ರ ಚರ್ಚೆ ಆಗುತ್ತಿರುವ. ಕಲ್ಯಾಣ ಕರ್ನಾಟಕ ಭಾಗದಲ್ಲೇ ಇಂತಹದೊಂದು ಹೊಸ ಟ್ರೆಂಡ್ ಮತ್ತು ಸಾಹಸಮಯ ಡಿಜೆ ಶೋ ನಿರ್ಮಿಸಿದ ಹೆಗ್ಗಳಿಕೆಗೆ ರಾಯಚೂರುನ ಪಿಎಸ್ಆರ್ ಬಾಯ್ಸ್ ಪಾತ್ರರಾಗಿದ್ದಾರೆ.

Share
Related Articles
ಅಂಕಣಸುದ್ದಿ

ಒಂದೇ ಒಂದು ಗುಂಡು ಹಾರಿಸದೆ ಮಾಯಾನಗರಿ ಮುಂಬೈ ಆಳಿದ ‘ಸುಲ್ತಾನ್’!

ಬಡತನದ ಕೂಲಿಯಿಂದ ಬಾಲಿವುಡ್ ಬೆರಗಾಗುವಂತೆ ಬೆಳೆದ 'ಹಾಜಿ ಮಸ್ತಾನ್' ಎಂಬ ಬ್ರಾಂಡ್ ಡಾನ್‌ನದ ರೋಚಕ ಕಥೆ...

ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...