Home ಸುದ್ದಿ ಸೂಗುರೇಶ್ವರ ದೇವಸ್ಥಾನದಲ್ಲಿ ಅಭಿಷೇಕದ ಹೆಸರಲ್ಲಿ ಸುಲಿಗೆ: ರಸೀದಿ ಕಿತ್ತುಕೊಳ್ಳುತ್ತಿರುವ ಅರ್ಚಕರು, ಭಕ್ತರ ಆಕ್ರೋಶ
ಸುದ್ದಿ

ಸೂಗುರೇಶ್ವರ ದೇವಸ್ಥಾನದಲ್ಲಿ ಅಭಿಷೇಕದ ಹೆಸರಲ್ಲಿ ಸುಲಿಗೆ: ರಸೀದಿ ಕಿತ್ತುಕೊಳ್ಳುತ್ತಿರುವ ಅರ್ಚಕರು, ಭಕ್ತರ ಆಕ್ರೋಶ

Share
Share

 

ಮರ್ಚೆಡ್ ಡೇಸ್ ಸುದ್ದಿ|ಶಕ್ತಿನಗರ.

ರಾಯಚೂರು : ಜಿಲ್ಲೆಯ( ಶಕ್ತಿನಗರದ) ದೇವಸೂಗೂರಿನ ಆರಾಧ್ಯ ದೈವ ಶ್ರೀ ಸೂಗುರೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪವಿತ್ರ ಸಂದರ್ಭದಲ್ಲೇ ಭಕ್ತರ ಮೇಲೆ ತೀವ್ರ ಆರ್ಥಿಕ ಹೊರೆ ಹೇರಲಾಗುತ್ತಿದೆ. ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಅರ್ಚಕರ ಅವ್ಯವಹಾರ ಭಕ್ತಾದಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಲಕ್ಷಾಂತರ ರೂಪಾಯಿ ಹಣ ದುರ್ಬಳಕೆಯಾಗುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ.

ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರ ಸೇರಿದಂತೆ ಕೊಪ್ಪಳ, ಬಳ್ಳಾರಿ, ಯಾದಗಿರಿ ಜಿಲ್ಲೆಗಳಿಂದ ನಿತ್ಯ ಸಾವಿರಾರು ಭಕ್ತರು ಸ್ವಾಮಿಯ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಈ ಹಿಂದೆ ಜಾರಿಯಲ್ಲಿದ್ದ ನಿಯಮದಂತೆ ₹2000 ಅಜೀವ ಸದಸ್ಯತ್ವ ಪಡೆದವರಿಗೆ ಉಚಿತವಾಗಿ ಹಾಗೂ ಸದಸ್ಯತ್ವ ಇಲ್ಲದ ಸಾಮಾನ್ಯ ಭಕ್ತರಿಗೆ ಕೇವಲ ₹250 ಶುಲ್ಕದಲ್ಲಿ ಅಭಿಷೇಕ ಸೇವೆ ಮಾಡಿಸಲಾಗುತ್ತಿತ್ತು.

ಆದರೆ, ಈ ಬಾರಿ ಆಡಳಿತ ಮಂಡಳಿಯು ಯಾವುದೇ ಮುನ್ಸೂಚನೆಯಿಲ್ಲದೆ ಅಭಿಷೇಕದ ಶುಲ್ಕವನ್ನು ಏಕಾಏಕಿ ₹250 ರಿಂದ ₹1250 ಕ್ಕೆ ಹೆಚ್ಚಳ ಮಾಡಿದೆ. ಬಡ ಹಾಗೂ ಮಧ್ಯಮ ವರ್ಗದ ಭಕ್ತರಿಗೆ ಈ ದುಬಾರಿ ಮೊತ್ತ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಭಕ್ತರನ್ನು ನೇರವಾಗಿ ದೋಚುವ ಹುನ್ನಾರ ಇದಾಗಿದೆ ಎಂದು ಗಂಗಾವತಿಯ ಭಕ್ತರಾದ ಬಸವರಾಜ್‌ ಇಂಗಳಗಿ ಮತ್ತು ಶರಣಪ್ಪ ಇಂಗಳಗಿ ಆರೋಪಿಸಿದ್ದಾರೆ. ಮುಂದುವರೆದು ಕಾರಟಗಿ ಭಕ್ತಾದಿಗಳು ವಾಗ್ವಾದವೆ ಆಗಿಹೋಗಿದೆ ಈ ವಿಷಯಕ್ಕೆ.

ಅತ್ಯಂತ ಆಘಾತಕಾರಿ ವಿಷಯವೆಂದರೆ, ಭಕ್ತರಿಂದ ₹1250 ಶುಲ್ಕ ಪಡೆದು ರಸೀದಿ ನೀಡಿದ ಕೆಲವೇ ಕ್ಷಣಗಳಲ್ಲಿ ಅರ್ಚಕರೇ ಆ ರಸೀದಿಯನ್ನು ಭಕ್ತರಿಂದ ವಾಪಸ್ ಕಿತ್ತುಕೊಳ್ಳುತ್ತಿದ್ದಾರೆ. ಭಕ್ತರ ಕೈಗೆ ರಸೀದಿ ಉಳಿಯದಂತೆ ಮಾಡಿ, ಸಂಗ್ರಹವಾದ ಲಕ್ಷಾಂತರ ರೂಪಾಯಿ ಹಣವನ್ನು ಲೆಕ್ಕಕ್ಕೆ ತೋರಿಸದೆ ಲಪಟಾಯಿಸಲು ಈ ಅಕ್ರಮ ದಾರಿ ಹಿಡಿಯಲಾಗಿದೆ ಎಂಬ ಸಂಶಯ ಬಲವಾಗಿದೆ.

ಈ ಅವೈಜ್ಞಾನಿಕ ಶುಲ್ಕ ಹೆಚ್ಚಳ ಹಾಗೂ ರಸೀದಿ ಗೋಲ್‌ಮಾಲ್ ಕುರಿತು ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ನಿರ್ಲಕ್ಷ್ಯದ ಉತ್ತರ ನೀಡುತ್ತಿದ್ದಾರೆ. ಹಿರಿಯ ಅಧಿಕಾರಿಗಳು ಕರೆ ಸ್ವೀಕರಿಸದೆ ಜಾರಿಕೊಳ್ಳುತ್ತಿದ್ದು, ಕೂಡಲೇ ಉನ್ನತ ಮಟ್ಟದ ತನಿಖೆ ನಡೆಸಿ ಭಕ್ತರ ರಕ್ಷಣೆಗೆ ನಿಲ್ಲಬೇಕು ಮತ್ತು ಹೆಚ್ಚುವರಿ ಶುಲ್ಕವನ್ನು ರದ್ದುಪಡಿಸಬೇಕೆಂದು ಭಕ್ತ ಸಮೂಹ ಆಗ್ರಹಿಸಿದೆ.

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...