Home ಸುದ್ದಿ ಖೇಲೋ ಇಂಡಿಯಾ ಅಸ್ಮಿತಾ ವುಶು ಲೀಗ್: ಗಂಗಾವತಿಯ ಬಾಲಕಿಯರ ಮಿಂಚಿನ ಸಾಧನೆ; 1 ಚಿನ್ನ, 6 ಬೆಳ್ಳಿ ಪದಕಗಳ ಮೂಡಿಗೆ.
ಸುದ್ದಿ

ಖೇಲೋ ಇಂಡಿಯಾ ಅಸ್ಮಿತಾ ವುಶು ಲೀಗ್: ಗಂಗಾವತಿಯ ಬಾಲಕಿಯರ ಮಿಂಚಿನ ಸಾಧನೆ; 1 ಚಿನ್ನ, 6 ಬೆಳ್ಳಿ ಪದಕಗಳ ಮೂಡಿಗೆ.

Share
Share
ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ.

ಗಂಗಾವತಿ:ವಿಜಯಪುರದ ಡಾ. ಬಿ.ಆರ್. ಅಂಬೇಡ್ಕರ್ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಪ್ರತಿಷ್ಠಿತ ‘ಖೇಲೋ ಇಂಡಿಯಾ ಅಸ್ಮಿತಾ ವುಮೆನ್ಸ್ ವುಶು ಲೀಗ್’ ಪಂದ್ಯಾವಳಿಯಲ್ಲಿ ಗಂಗಾವತಿಯ ಬಾಲಕಿಯರು ಅದ್ಭುತ ಪ್ರದರ್ಶನ ನೀಡಿ ಒಟ್ಟು 7 ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ನಗರದ ಹೆಸರಾಂತ ‘ಜವಾನ್ ಕರಾಟೆ ಸ್ಪೋರ್ಟ್ಸ್ ಅಸೋಸಿಯೇಷನ್’ ಹಾಗೂ ‘ನ್ಯೂ ಬ್ರೈಟ್ ಕರಾಟೆ ಸ್ಪೋರ್ಟ್ಸ್ ಅಕಾಡೆಮಿ’ಯ 7 ವಿದ್ಯಾರ್ಥಿನಿಯರು ಈ ಸಾಧನೆ ಮಾಡಿ ನಗರಕ್ಕೆ ಮತ್ತು ಸಂಸ್ಥೆಗೆ ಅಪಾರ ಕೀರ್ತಿ ತಂದಿದ್ದಾರೆ.

ಪಂದ್ಯಾವಳಿಯ ವಿವಿಧ ತೂಕದ ವಿಭಾಗಗಳಲ್ಲಿ ಸ್ಪರ್ಧಿಸಿದ್ದ  ಪಟುಗಳು 1 ಚಿನ್ನ ಹಾಗೂ 6 ಬೆಳ್ಳಿ ಪದಕಗಳನ್ನು ಜಯಿಸಿದ್ದಾರೆ.

* ಜೆ. ಲಯ: ಸೀನಿಯರ್ 52 ಕೆಜಿ ವಿಭಾಗ – ಪ್ರಥಮ ಸ್ಥಾನ (ಚಿನ್ನದ ಪದಕ)* ಐಶ್ವರ್ಯ: ಜೂನಿಯರ್ 40 ಕೆಜಿ ವಿಭಾಗ – ದ್ವಿತೀಯ ಸ್ಥಾನ (ಬೆಳ್ಳಿ ಪದಕ)* ದೃವಿ: ಜೂನಿಯರ್ 34 ಕೆಜಿ ವಿಭಾಗ – ದ್ವಿತೀಯ ಸ್ಥಾನ (ಬೆಳ್ಳಿ ಪದಕ)* ಅಮೃತ: ದ್ವಿತೀಯ ಸ್ಥಾನ (ಬೆಳ್ಳಿ ಪದಕ)

* ಸಾನಿಯಾ: ಸೀನಿಯರ್ 40 ಕೆಜಿ ವಿಭಾಗ – ದ್ವಿತೀಯ ಸ್ಥಾನ (ಬೆಳ್ಳಿ ಪದಕ)* ಶಿಫಾ ನಜ್: ಜೂನಿಯರ್ 28 ಕೆಜಿ ವಿಭಾಗ – ದ್ವಿತೀಯ ಸ್ಥಾನ (ಬೆಳ್ಳಿ ಪದಕ)* ಸಿದ್ರ: ಸಬ್ ಜೂನಿಯರ್ 20 ಕೆಜಿ ವಿಭಾಗ – ದ್ವಿತೀಯ ಸ್ಥಾನ (ಬೆಳ್ಳಿ ಪದಕ)ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ವುಶು ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಅಶೋಕ್ ಮೂಕಾಶಿ, “ಇಂದಿನ ದಿನಗಳಲ್ಲಿ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು, ಅವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಶಕ್ತಿಶಾಲಿಯಾಗಲು ಸಮರ ಕಲೆಗಳು ಅತ್ಯಂತ ಅವಶ್ಯಕ. ಇಂತಹ ಸರ್ಕಾರಿ ಪ್ರಾಯೋಜಿತ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳು ಹೆಣ್ಣುಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ಧೈರ್ಯವನ್ನು ತುಂಬುತ್ತವೆ,” ಎಂದರು. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ಕ್ರೀಡೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಲು ಪೋಷಕರು ಮತ್ತು ಶಿಕ್ಷಕರ ನಿರಂತರ ಪ್ರೋತ್ಸಾಹ ಅಗತ್ಯ ಎಂದು ತರಬೇತುದಾರರು ಅಭಿಪ್ರಾಯಪಟ್ಟರು.

ಕ್ರೀಡಾಪಟುಗಳ ಈ ಶ್ರೇಷ್ಠ ಸಾಧನೆಗೆ ಸಂಸ್ಥೆಯ ರಾಜ್ಯಾಧ್ಯಕ್ಷರಾದ ಅನ್ವರ್ ಪಾಷಾ, ಸೈಯದ್ ಬಿಲಾಲ್, ಮುಖ್ಯ ತರಬೇತುದಾರ ಸೈಯದ್ ಸಮೀರ್ ಹಾಗೂ ಸಂಸ್ಥೆಯ ಸದಸ್ಯ ನಜೀರ್ ಸಾಬ್ ಹರ್ಷ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಪಾಲಕರಾದ ವೀರೇಶ್, ಮಂಜುನಾಥ್, ಮೌನೇಶ್, ಆನಂದ್, ಎಂ.ಡಿ. ಯೂನುಸ್ ಮತ್ತು ಯಮನೂರು ಸಾಬ್ ವಿಜೇತ ಮಕ್ಕಳಿಗೆ ಹಾರ್ದಿಕ ಅಭಿನಂದನೆ ಸಲ್ಲಿಸಿ, ಮುಂದಿನ ಕ್ರೀಡಾ ಜೀವನಕ್ಕೆ ಶುಭ ಹಾರೈಸಿದರು.

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...