
ಮರ್ಚೇಡ್ ಡೇಸ್ ಸುದ್ದಿ.|ನವಲಿ.
ಕನಕಗಿರಿ: ತಾಲೂಕಿನ ನವಲಿ ಗ್ರಾಮದ ಶ್ರೀ ದುರ್ಗಾದೇವಿ ದೇವಸ್ಥಾನದ ಸಾಂಸ್ಕೃತಿಕ ಭವನದಲ್ಲಿ ಜನಪರ ಕಾಳಜಿಯ ಎಸ್.ಎಸ್. ಪಿ. ಲೈಫ್ ಮಿಷನ್ ಗಂಗಾವತಿ ಹಾಗೂ ಬೆಂಗಳೂರಿನ ಪ್ರತಿಷ್ಠಿತ ಸಪ್ತಗಿರಿ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಅತ್ಯಂತ ಯಶಸ್ವಿಯಾಗಿ ಜರುಗಿತು. ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಸದುದ್ದೇಶದಿಂದ ಆಯೋಜಿಸಲಾಗಿದ್ದ ಈ ಶಿಬಿರಕ್ಕೆ ನವಲಿ ಸೇರಿದಂತೆ ಸುತ್ತಮುತ್ತಲಿನ ಹಲವು ಹಳ್ಳಿಗಳಿಂದ ನೂರಾರು ಸಾರ್ವಜನಿಕರು ಆಗಮಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಸದುಪಯೋಗ ಪಡೆದುಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜ ಸೇವಕಿ ಹಾಗೂ ಎಸ್.ಎಸ್. ಪಿ ಲೈಫ್ ಮಿಷನ್ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಸೋಫಿಯಾ ರಾಣಿ ಜಂಗಮರ ಕಲ್ಗುಡಿ ಅವರು ವಹಿಸಿದ್ದರು. ಶಿಬಿರಕ್ಕೆ ದಿವ್ಯ ಸಾನ್ನಿಧ್ಯ ವಹಿಸಿದ್ದ ಪರಮಪೂಜ್ಯ ಶ್ರೀ ಮಾರ್ಕಂಡಯ್ಯ ಸ್ವಾಮಿಗಳು ಜ್ಯೋತಿ ಬೆಳಗಿಸುವ ಮೂಲಕ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ವಿದ್ಯುಕ್ತ ಚಾಲನೆ ನೀಡಿ, ಗ್ರಾಮೀಣ ಭಾಗದಲ್ಲಿ ಇಂತಹ ಸಮಾಜೋಪಯೋಗಿ ಆರೋಗ್ಯ ಸೇವೆಗಳು ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಪ್ತಗಿರಿ ಆಸ್ಪತ್ರೆಯ ಖ್ಯಾತ ವೈದ್ಯರುಗಳಾದ ಡಾ. ಶುಭೋದಯ, ಡಾ. ಅಶ್ವಿನ್, ಡಾ. ವಿಷ್ಣು ವಿಲಾಸ್ ಹಾಗೂ ಡಾ. ಕೃಷ್ಣ ಅವರು, ಬದಲಾಗುತ್ತಿರುವ ಜೀವನಶೈಲಿಯಲ್ಲಿ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ. ರೋಗ ಲಕ್ಷಣಗಳು ಕಾಣಿಸಿಕೊಂಡ ತಕ್ಷಣವೇ ತಪಾಸಣೆ ಮಾಡಿಸಿಕೊಳ್ಳುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಆರಂಭದಲ್ಲೇ ತಡೆಗಟ್ಟಬಹುದು ಎಂದು ಸಲಹೆ ನೀಡಿ, ರೋಗಿಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಮಾರ್ಗದರ್ಶನ ನೀಡಿದರು.
ವೇದಿಕೆಯ ಮೇಲೆ ಸಪ್ತಗಿರಿ ಆಸ್ಪತ್ರೆಯ ಪ್ರಮುಖರಾದ ವಿಕಾಸ್, ನಂದೀಶ್, ಗಜೇಂದ್ರ, ದರ್ಶನ್ ಹಾಗೂ ಎಸ್.ಎಸ್. ಪಿ. ಲೈಫ್ ಮಿಷನ್ ನಿರ್ದೇಶಕರಾದ ಶ್ರೀದೇವಿ ಭಂಡಾರಿ, ಹಿರಿಯರಾದ ಯೂನಿಸ್ ಖಾನ್, ಪ್ರಮುಖರಾದ ಚಕ್ರಿ ಮಹಾರಾಜ್, ಮಂಜುನಾಥ್ ನಾಯಕ್ ಮತ್ತು ಪಿ. ದಶರಥ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದು ಶಿಬಿರದ ಯಶಸ್ಸಿಗೆ ಸಾಕ್ಷಿಯಾದರು.
ಎಸ್.ಎಸ್. ಪಿ ಲೈಫ್ ಮಿಷನ್ ಅಧ್ಯಕ್ಷರಾದ ಶ್ರೀಮತಿ ಸೋಫಿಯಾ ರಾಣಿ ಅವರು ಸದಾ ಸಮಾಜಮುಖಿ ಚಿಂತನೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಅನಾಥ ಹಾಗೂ ಬಡ ಮಕ್ಕಳ ಏಳಿಗೆ, ಕುಟುಂಬ ಕಲಹಗಳಿಂದ ನೊಂದ ಮಹಿಳೆಯರಿಗೆ ಸಾಂತ್ವನ, ಹಿಂದುಳಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ಸೇರಿದಂತೆ ಹತ್ತು ಹಲವು ಜನಪರ ಕಾರ್ಯಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜ ಸೇವೆಯಲ್ಲಿ ಮಾದರಿಯಾಗಿದ್ದಾರೆ.
ಸಂಸ್ಥೆಯ ಮೂಲಕ ಮುಂಬರುವ ದಿನಗಳಲ್ಲಿ ಇನ್ನಷ್ಟು ಬಡ ಜನರಿಗೆ ಉಚಿತ ವೈದ್ಯಕೀಯ ಸೇವೆ ಹಾಗೂ ಸಾಮಾಜಿಕ ನೆರವು ತಲುಪಿಸುವ ಸಂಕಲ್ಪವನ್ನು ಹೊಂದಲಾಗಿದೆ. ಸಂಸ್ಥೆಯ ಸೇವೆಗಳು, ಮುಂಬರುವ ಯೋಜನೆಗಳು ಅಥವಾ ತುರ್ತು ನೆರವಿನ ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ಎಸ್.ಎಸ್. ಪಿ. ಲೈಫ್ ಮಿಷನ್ ಅಧ್ಯಕ್ಷರಾದ ಶ್ರೀಮತಿ ಸೋಫಿಯಾ ರಾಣಿ (ಮೊ. 7899151230) ಅವರನ್ನು ನೇರವಾಗಿ ಸಂಪರ್ಕಿಸಬಹುದಾಗಿದೆ.