ಮರ್ಚೆಡ್ ಡೇಸ್ ಸುದ್ದಿ.|ರಾಯಚೂರು.
ಮಾನ್ವಿ: ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕು ಪತ್ರಿಕಾ ಭವನದಲ್ಲಿ ಮಧುಮೇಹಿಗಳಿಗೆ (ಶುಗರ್ ಕಾಯಿಲೆ ಇರುವವರಿಗೆ) ಅತ್ಯಂತ ಉಪಯುಕ್ತವಾದ ‘ಭಾವನಾ ಡಯಾ ಬೆಸ್ಟ್ ರೈಸ್’ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಹೊಸ ಉತ್ಪನ್ನವನ್ನು ಪರಿಚಯಿಸಲಾಯಿತು.
ದೈನಂದಿನ ಆಹಾರ ಪದ್ಧತಿಯಲ್ಲಿ ಅನ್ನ ಸೇವನೆಯಿಂದ ಶುಗರ್ ಮಟ್ಟ ಹೆಚ್ಚಾಗುತ್ತದೆ ಎಂಬ ಆತಂಕದಲ್ಲಿರುವ ಮಧುಮೇಹಿಗಳಿಗೆ ಈ ಅಕ್ಕಿ ಉತ್ತಮ ಪರಿಹಾರವಾಗಿದೆ. ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಈ ‘ಶುಗರ್ ಲೆಸ್ ರೈಸ್’ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಸಮತೋಲನದಲ್ಲಿಡಲು ಸಹಕಾರಿಯಾಗಿದ್ದು, ಆರೋಗ್ಯ ರಕ್ಷಣೆಗೆ ಸೂಕ್ತವಾಗಿದೆ ಎಂದು ಸಂಸ್ಥೆಯ ಪ್ರತಿನಿಧಿಗಳು ತಿಳಿಸಿದರು.
‘ಬೈ.. ಬೈ.. ಶುಗರ್’ ಎಂಬ ಧ್ಯೇಯವಾಕ್ಯದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಈ ಭಾವನಾ ರೈಸ್ 5 ಕೆಜಿ ಪ್ಯಾಕೆಟ್ಗಳಲ್ಲಿ ಲಭ್ಯವಿದೆ. ಇದು ಕೇವಲ ಶುಗರ್ ರೋಗಿಗಳಿಗೆ ಮಾತ್ರವಲ್ಲದೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸುವವರು ಹಾಗೂ ತೂಕ ಇಳಿಸಿಕೊಳ್ಳಲು ಬಯಸುವವರಿಗೂ ಉತ್ತಮ ಪೌಷ್ಟಿಕ ಆಹಾರ ಆಯ್ಕೆಯಾಗಿದೆ ಎಂದು ಗೋಷ್ಠಿಯಲ್ಲಿ ಮಾಹಿತಿ ನೀಡಲಾಯಿತು
ಮಾನ್ವಿ ಪಟ್ಟಣ ಹಾಗೂ ಗ್ರಾಮೀಣ ಭಾಗದ ಜನರಿಗೆ ಸುಲಭವಾಗಿ ದೊರೆಯುವಂತೆ ಸ್ಥಳೀಯವಾಗಿ ಈ ಅಕ್ಕಿಯ ಮಾರಾಟ ಮತ್ತು ವಿತರಣಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇನ್ಮುಂದೆ ಅನ್ನ ಪ್ರಿಯರಾದ ಮಧುಮೇಹಿಗಳು ಯಾವುದೇ ಆತಂಕವಿಲ್ಲದೆ ನಿತ್ಯದ ಊಟದಲ್ಲಿ ಈ ಅಕ್ಕಿಯನ್ನು ಬಳಸಬಹುದಾಗಿದೆ ಎಂದು ತಿಳಿಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಮುಖ್ಯಸ್ಥರು, ಗಣ್ಯರು ಹಾಗೂ ಸ್ಥಳೀಯ ಪತ್ರಕರ್ತರು ಉಪಸ್ಥಿತರಿದ್ದು ಉತ್ಪನ್ನದ ಪೊಟ್ಟಣವನ್ನು ಜಂಟಿಯಾಗಿ ಬಿಡುಗಡೆಗೊಳಿಸಿದರು. ಸಾರ್ವಜನಿಕರು ಹಾಗೂ ಮಧುಮೇಹದಿಂದ ಬಳಲುತ್ತಿರುವವರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಲಾಯಿತು.