Home ಸುದ್ದಿ ಕನಕಗಿರಿಯಲ್ಲಿ ಆಸ್ತಿ ವಿವಾದ: ವಿಷ ಸೇವಿಸಿ ಬಸವರಾಜ್ ರೆಡ್ಡಿ ಸಾವು – ಪೊಲೀಸ್ ಠಾಣೆ ಮುಂದೆ ಶವವಿಟ್ಟು ಪ್ರತಿಭಟನೆಗೆ ಕುಟುಂಬಸ್ಥರ ಸಿದ್ಧತೆ.
ಸುದ್ದಿ

ಕನಕಗಿರಿಯಲ್ಲಿ ಆಸ್ತಿ ವಿವಾದ: ವಿಷ ಸೇವಿಸಿ ಬಸವರಾಜ್ ರೆಡ್ಡಿ ಸಾವು – ಪೊಲೀಸ್ ಠಾಣೆ ಮುಂದೆ ಶವವಿಟ್ಟು ಪ್ರತಿಭಟನೆಗೆ ಕುಟುಂಬಸ್ಥರ ಸಿದ್ಧತೆ.

Share
Share

 

ಮರ್ಚೆಡ್ ಡೇಸ್ ಸುದ್ದಿ|ಕನಕಗಿರಿ.

ಕೊಪ್ಪಳ ಜಿಲ್ಲೆಯ ಕನಕಗಿರಿ ನಗರದಲ್ಲಿ ಆಸ್ತಿ ವಿವಾದದ ಹಿನ್ನೆಲೆ ಗಂಭೀರ ಬೆಳವಣಿಗೆಯೊಂದು ನಡೆದಿದೆ. ಆಸ್ತಿ ವಿಚಾರವಾಗಿ ಬೆದರಿಕೆ ಹಾಗೂ ಕಿರುಕುಳ ತಾಳಲಾರದೆ ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ ಬಸವರಾಜ್ ರೆಡ್ಡಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಸಾವಿನ ಬಳಿಕ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಮೃತರ ಶವವನ್ನು ಪೊಲೀಸ್ ಠಾಣೆ ಮುಂದೆ ಇಟ್ಟು ಪ್ರತಿಭಟನೆ ನಡೆಸಲು ಕುಟುಂಬಸ್ಥರು ಸಿದ್ಧತೆ ನಡೆಸಿದ್ದಾರೆ.

ಬಸವರಾಜ್ ರೆಡ್ಡಿ ಅವರಿಗೆ ಆಸ್ತಿ ವಿಚಾರವಾಗಿ ನಿರಂತರವಾಗಿ ಬೆದರಿಕೆ ಹಾಗೂ ಕಿರುಕುಳ ನೀಡಲಾಗುತ್ತಿತ್ತು. ಈ ಬಗ್ಗೆ ಈ ಹಿಂದೆಯೇ ದೂರು ನೀಡಿದ್ದರೂ ಸಹ ಪೊಲೀಸರು ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಮೃತರ ಕುಟುಂಬಸ್ಥರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣಕ್ಕೆ ರಾಜಕೀಯ ತಿರುವು ಸಿಕ್ಕಿದೆ ಎಂಬ ಆರೋಪವೂ ಕೇಳಿಬಂದಿದ್ದು, ಸ್ಥಳೀಯ ರಾಜಕಾರಣಿಗಳ ಒತ್ತಡದಿಂದಾಗಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯಿ ರುವುದರಿಂದ, ಬಳ್ಳಾರಿ ವಲಯ ಐಜಿಪಿ ಡಾ. ಪಿ. ಹರ್ಷ್ ಅವರು ತುರ್ತಾಗಿ ಕನಕಗಿರಿ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ರಜೆಯಲ್ಲಿದ್ದ ಕೊಪ್ಪಳ ಎಸ್ಪಿ ಡಾ. ರಾಮ್ ಅರಸಿದ್ದಿ ಕೂಡ ಠಾಣೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ.

ಪ್ರತಿಭಟನೆ ಉಲ್ಬಣಗೊಳ್ಳುವ ಮುನ್ನೆಚ್ಚರಿಕೆ ಕ್ರಮವಾಗಿ ಕನಕಗಿರಿ ಪೊಲೀಸ್ ಠಾಣೆಯ ಸುತ್ತಲೂ ಬಿಗಿ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಮುಂದುವರೆದಿದೆ.

Share
Related Articles
ಅಂಕಣಸುದ್ದಿ

ಜನರ ಜೀವ ಉಳಿಸಲು ಜಾಗತಿಕ ಔಷಧಿ ದೈತ್ಯರ ಎದರು ಸೆಟೆದು ನಿಂತ ಧೀರ ಅಧಿಕಾರಿ ಐಎಎಸ್ ಅಧಿಕಾರಿ ಪಿ.ಎಚ್. ಕುರಿಯನ್.

ಮರ್ಚೆಡ್ ಡೇಸ್ | ವಿಶೇಷ ಲೇಖನ: ಅಧಿಕಾರವೆಂದರೆ ಜನರ ಸೇವೆ ಎಂಬುದನ್ನು ಜಗತ್ತಿಗೆ ತೋರಿಸಿದ ಅಪರೂಪದ...

ಸುದ್ದಿ

ಡ್ರೋನ್ ಕಣ್ಣಲ್ಲಿ ಸೆರೆಯಾಯ್ತು ದೇವಿರಮ್ಮ ಬೆಟ್ಟದ ಅದ್ಭುತ ವೈಭವ: ಜನಸಾಗರದ ನಡುವೆ ರಕ್ಷಣಾ ಪಡೆಯ ಶ್ಲಾಘನೀಯ ಸೇವ.

ಮರ್ಚೆಡ್ ಡೇಸ್ ಸುದ್ದಿ|ಚಿಕ್ಕಮಂಗಳೂರು. ಚಿಕ್ಕಮಗಳೂರು :ತಾಲೂಕಿನ ಮಲ್ಲೇನಹಳ್ಳಿ ಸಮೀಪದಲ್ಲಿರುವ ಸುಪ್ರಸಿದ್ಧ ದೇವಿರಮ್ಮ ಬೆಟ್ಟದಲ್ಲಿ ಭಕ್ತಿಭಾವದ ಪರಾಕಾಷ್ಠೆ...

ಸುದ್ದಿ

ಆಕಾಶದಲ್ಲೇ ಬೆಳಕಿನ ಮಹಾಸಂಗ್ರಾಮ! ಶತಮಾನಗಳ ಸಂಪ್ರದಾಯಕ್ಕೆ ಸಾಕ್ಷಿಯಾದ ಕೇರಳದ ತ್ರಿಶೂರ್ ಪೂರಂನ ‘ವೆಡಿಕ್ಕೆಟ್ಟು’ ವೈಭವ.

  ಮರ್ಚೆಡ್ ಡೇಸ್ ಸುದ್ದಿ| ವಿಶೇಷ ವರದಿ ಭಕ್ತಿ, ಸಂಪ್ರದಾಯ ಮತ್ತು ಪಟಾಕಿಗಳ ಅಬ್ಬರದ ಅಪರೂಪದ...

ಸುದ್ದಿ

ಹಾಲುಮತದ ಪುಣ್ಯಕಾಶಿ ಹುಲಜಂತಿಯಲ್ಲಿ ಕಲಿಯುಗದ ಪವಾಡ: ಮಾಳಿಂಗರಾಯನ ಶಿಖರಕ್ಕೆ ಶಿವ-ಪಾರ್ವತಿಯರಿಂದ ರೇಷ್ಮೆ ಮುಂಡಾಸು ಸೇವೆ.

ಮರ್ಚೆಡ್ ಡೇಸ್ ಸುದ್ದಿ|ಹುಲಿಜಂತಿ. ಹುಲಿಜಂತಿ:ಹಾಲುಮತದ ಶ್ರದ್ಧಾ ಕೇಂದ್ರ ಹುಲಜಂತಿ ಕ್ಷೇತ ಸಮಸ್ತ ಹಾಲುಮತ ಸಂಸ್ಕೃತಿಯ ಆರಾಧ್ಯ...