
ಮರ್ಚೆಡ್ ಡೇಸ್ ವಿಶೇಷ ವರದಿ.|ಗಂಗಾವತ
ಸುಮಾರಿ 25 ವರ್ಷದ ಕೆಳಗೆ ಹುಟ್ಟುವುದಕ್ಕೆ…. ಸಾಯೋದಕ್ಕೆ ಏನಾದರೂ ಸಾಧಿಸೋಕೆ .. ಎನ್ನುವ ಹಾಡಿನ ಸಾಲು ಕೇಳಿದರೆ ಮೈ ರೋಮಾಂಚನಗೊಳ್ಳುತ್ತದೆ. ಇವತ್ತಿಗೂ 19ನೇ ಸೆಪ್ಟೆಂಬರ್ 1991ರಲ್ಲಿ ತೆರೆಕಂಡ ‘ಶಾಂತಿ ಕ್ರಾಂತಿ’ ಭಾರತೀಯ ಚಲನಚಿತ್ರ ರಂಗದಲ್ಲಿ ಒಂದು ಮೈಲಿಗಲ್ಲು ಹಾಗೂ ಬಹುಭಾಷಾ ಸಾಹಸ ಮತ್ತು ಆಕ್ಷನ್ ಪ್ರಧಾನ ಚಲನಚಿತ್ರವಾಗಿ ದಾಖಲಾಗಿದೆ.
ಕನ್ನಡದ ಖ್ಯಾತ ನಿರ್ದೇಶಕ ಹಾಗೂ ನಟ ಕ್ರೇಜಿ ಸ್ಟಾರ್ ವಿ. ರವಿಚಂದ್ರನ್ ಅವರು ತಮ್ಮ ಪ್ರತಿಷ್ಠಿತ ‘ಈಶ್ವರಿ ಪ್ರೊಡಕ್ಷನ್ಸ್’ ಲಾಂಚ್ ಅಡಿಯಲ್ಲಿ ಈ ಚಿತ್ರವನ್ನು ನಿರ್ದೇಶಿಸಿ, ಕಥೆ ಬರೆದು ನಿರ್ಮಾಣ ಮಾಡಿದ್ದರು. ಅಂದು ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲದಲ್ಲಿ ಈ ಚಿತ್ರ ತಯಾರಾಗಿ ಭಾರಿ ಸಂಚಲನ ಮೂಡಿಸಿತ್ತು.
ಈ ಬೃಹತ್ ಚಿತ್ರದ ತಾರಾಗಣ ಹಾಗೂ ಭಾಷಾ ವೈವಿಧ್ಯತೆ ಅತ್ಯಂತ ವಿಶೇಷವಾಗಿತ್ತು. ಕನ್ನಡದಲ್ಲಿ ಸ್ವತಃ ವಿ. ರವಿಚಂದ್ರನ್ ನಾಯಕನಾಗಿ ನಟಿಸಿದರೆ, ತೆಲುಗಿನಲ್ಲಿ ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ ನಾಯಕನಾದರು. ಇನ್ನು ತಮಿಳು ಮತ್ತು ಹಿಂದಿ ಆವೃತ್ತಿಗಳಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಮುಖ್ಯ ನಾಯಕನಾಗಿ ನಟಿಸಿ ಚಿತ್ರಕ್ಕೆ ಮತ್ತಷ್ಟು ಮೆರುಗು ತಂದರು. ಇವರೊಂದಿಗೆ ಜೂಹಿ ಚಾವ್ಲಾ, ಖುಷ್ಬೂ, ರಮೇಶ್ ಅರವಿಂದ್ ಮತ್ತು ಖಳನಾಯಕನಾಗಿ ಅನಂತನಾಗ್ ಎಲ್ಲ ಭಾಷೆಗಳಲ್ಲೂ ಅಥವಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡು ಅಭಿನಯದ ಮುಖಾಂತರ ಪ್ರೇಕ್ಷಕರನ್ನು ರಂಜಿಸಿದರು.
ಚಿತ್ರದ ಕಥೆಯ ಹಂದರವು ಸಮಾಜದ ಗಂಭೀರ ಸಮಸ್ಯೆಯಾದ ಅಂಗಾಂಗ ಕಳ್ಳಸಾಗಾಣಿಕೆ (Organ Trafficking) ಜಾಲದ ವಿರುದ್ಧ ಹೋರಾಡುವ ಪ್ರಾಮಾಣಿಕ ಪೊಲೀಸ್ ಅಧಿಕಾರಿಯ ಸುತ್ತ ಸುತ್ತುತ್ತದೆ. ‘ಡ್ಯಾಡಿ’ ಎಂಬ ಕ್ರಿಮಿನಲ್ ಅನಾಥಾಶ್ರಮದ ಮುಖವಾಡದೊಂದಿಗೆ ಈ ಕರಾಳ ಜಾಲವನ್ನು ನಡೆಸುತ್ತಿರುವುದನ್ನು ಪತ್ತೆ ಹಚ್ಚಿ, ನಾಯಕರು ಆ ಜಾಲವನ್ನು ಹೇಗೆ ಮಟ್ಟಹಾಕುತ್ತಾರೆ ಎಂಬುದು ಚಿತ್ರದ ರೋಚಕ ಕಥಾವಸ್ತುವಾಗಿದೆ. ಅಂದಿನ ಕಾಲದಲ್ಲೇ ಇಂತಹ ಸಾಮಾಜಿಕ ಪಿಡುಗಿನ ಕಥೆಯನ್ನು ಆಧಾರವಾಗಿಟ್ಟುಕೊಂಡು ಸಿನಿಮಾ ಮಾಡುವುದು ದೊಡ್ಡ ಸಾಹಸವಾಗಿತ್ತು.
ಇನ್ನು ತಾಂತ್ರಿಕತೆ ಮತ್ತು ವಿಶೇಷತೆಗಳ ವಿಚಾರದಲ್ಲಿ ಈ ಚಿತ್ರ ಸಾಟಿಯಿಲ್ಲದ್ದು. ಸಂಗೀತ ಮಾಂತ್ರಿಕ ಹಂಸಲೇಖ ಅವರು ಈ ಚಿತ್ರಕ್ಕೆ ಅದ್ಭುತ ಸಂಗೀತ ಹಾಗೂ ಎಂದಿಗೂ ಮರೆಯಲಾಗದ 9 ಹಾಡುಗಳನ್ನು ಸಂಯೋಜಿಸಿದರು. ಅಂದಿನ ಕಾಲದಲ್ಲೇ ಸುಮಾರು ₹10 ಕೋಟಿ ಬಜೆಟ್ನಲ್ಲಿ ನಿರ್ಮಾಣವಾದ ಈ ಸಿನಿಮಾ, ಭಾರತದ ಅತ್ಯಂತ ವೆಚ್ಚದ ಹಾಗೂ ದುಬಾರಿ ಸಿನಿಮಾವಾಗಿ ಹೊರಹೊಮ್ಮಿತು. ಅಂದು ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಕಾಣದಿದ್ದರೂ, ಇಂದಿಗೂ ಈ ಚಿತ್ರದ ತಾಂತ್ರಿಕ ಅಂದ ಹೆಚ್ಚೇ ಇದೆ.
ಆದರೆ ಅತಿಯಾದ ಬಜೆಟ್ ಮತ್ತು ತಾಂತ್ರಿಕ ವೆಚ್ಚದಿಂದಾಗಿ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಹಿನ್ನಡೆ ಅನುಭವಿಸಿತು. ಕ್ಲೈಮ್ಯಾಕ್ಸ್ ದೃಶ್ಯಕ್ಕಾಗಿ 50 ಎಕರೆ ಭೂಮಿಯನ್ನು ಪಡೆದು ಬೃಹತ್ ಸೆಟ್ಗಳು ಹಾಗೂ ಆ ಕಾಲಕ್ಕೆ ಅತ್ಯಂತ ದುಬಾರಿಯಾಗಿದ್ದ ದೃಶ್ಯ ಪರಿಣಾಮಗಳನ್ನು (VFX) ಬಳಸಲಾಗಿತ್ತು. ಕೇವಲ ಡಬ್ಬಿಂಗ್ ಮಾಡದೆ, ಪ್ರತಿಯೊಂದು ಭಾಷೆಗೂ ಪ್ರತ್ಯೇಕ ನಾಯಕರನ್ನು ಇಟ್ಟುಕೊಂಡು ಪ್ರತಿಯೊಂದು ದೃಶ್ಯವನ್ನು ಮರು-ಚಿತ್ರೀಕರಣ ಮಾಡಿದ್ದರಿಂದ ಬಜೆಟ್ ದುಪ್ಪಟ್ಟಾಯಿತು. ಟಿಕೆಟ್ ದರ ಏರಿಕೆಗೆ ಸರ್ಕಾರದಿಂದ ಅನುಮತಿ ಸಿಗದಿರುವುದು ಮತ್ತು ನಿರೀಕ್ಷಿತ ಓಪನಿಂಗ್ ಸಿಗದಿರುವುದು ಚಿತ್ರದ ಕಲೆಕ್ಷನ್ ಮೇಲೆ ನೇರ ಪರಿಣಾಮ ಬೀರಿತು.
ಈ ಚಿತ್ರದ ಆರ್ಥಿಕ ಸೋಲಿನಿಂದಾಗಿ ರವಿಚಂದ್ರನ್ ಅವರು ತೀವ್ರ ಸಂಕಷ್ಟಕ್ಕೆ ಹಾಗೂ ಆರ್ಥಿಕ ಮುಗ್ಗಟ್ಟಿಗೆ ಒಳಗಾಗಬೇಕಾಯಿತು. ಆದರೂ, ಇಂದಿನ ‘ಪ್ಯಾನ್-ಇಂಡಿಯಾ’ ಕಲ್ಪನೆ ಹುಟ್ಟಿಕೊಳ್ಳುವ ದಶಕಗಳ ಮೊದಲೇ ಇಂತಹ ಬೃಹತ್ ಸಾಹಸಕ್ಕೆ ಕೈಹಾಕಿದ ಅವರ ದೂರದೃಷ್ಟಿಯನ್ನು ಇಂದಿಗೂ ಸಿನಿರಂಗ ಹಾಗೂ ಕಲಾಭಿಮಾನಿಗಳು ಗೌರವಿಸುತ್ತಾರೆ. ಪ್ಯಾನ್ ಇಂಡಿಯಾ ಎನ್ನುವ ಕಾನ್ಸೆಪ್ಟ್ ಅನ್ನು ಇಡೀ ಇಂಡಿಯಾಕ್ಕೆ ಮೊದಲು ಪರಿಚಯಿಸಿದ ಕೀರ್ತಿ ಕನ್ನಡಿಗ ವಿ. ರವಿಚಂದ್ರನ್ ಅವರಿಗೆ ಸಲ್ಲುತ್ತದೆ ಮತ್ತು ಇದೊಂದು ಅಪ್ಪಟ ಕಲ್ಟ್ ಸಿನಿಮಾವಾಗಿ ಉಳಿದಿದೆ.
‘ಪ್ರೇಮಲೋಕ’ದಿಂದ ಹಿಡಿದು ‘ಶಾಂತಿ ಕ್ರಾಂತಿ’ವರೆಗೆ ಹಂಸಲೇಖ ಮತ್ತು ರವಿಚಂದ್ರನ್ ಜೋಡಿಯ ಸಂಗೀತದ ಅಬ್ಬರ ಎಂದೆಂದಿಗೂ ಸ್ಮರಣೀಯ. ಇಂದಿಗೂ ಹಾಡುಗಳನ್ನು ಯುವಜನತೆ ಗುನುಗುತ್ತಿರುತ್ತರೆ.
ಚಿತ್ರದಲ್ಲಿನ ಹಾಡುಗಳ 9 ಹಾಗೂ ಒಂದಕ್ಕಿಂತ ಒಂದು ಸುಂದರವಾದ ಮಧುರ ಧ್ವನಿಗಳು ಸಿನಿಮಾದ ಪ್ರಮುಖ ಆಕರ್ಷಣೆಯಾಗಿದ್ದು, ಪ್ರೇಕ್ಷಕರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಕೊಂಡಿವೆ.
ಸುಮಾರು 25 ವರ್ಷಗಳಿಗೂ ಅಧಿಕ ಕಾಲ ಕಳೆದ ನಂತರ, ಅಭಿಮಾನಿಗಳ ತೀವ್ರ ಒತ್ತಡ ಹಾಗೂ ವೀಕ್ಷಕರ ಬೇಡಿಕೆಯ ಮೇರೆಗೆ, ಸಂಗೀತದ ರಸದೌತಣ ತುಂಬಿರುವ ಈ ಸುಂದರ ಸಿನಿಮಾವನ್ನು ಮತ್ತೊಮ್ಮೆ ದೊಡ್ಡ ಪರದೆಯ ಮೇಲೆ ‘ರೀ-ಲೀಸ್’ ಮಾಡಲು ಅಧಿಕೃತ ಗ್ರೀನ್ ಸಿಗ್ನಲ್ ಸಿಕ್ಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ರೀಲ್ಸ್ಗಳಲ್ಲಿ ಈ ಚಿತ್ರದ ಹಾಡುಗಳ ತುಣುಕುಗಳು ಈಗಲೂ ವೈರಲ್ ಆಗುತ್ತಿದ್ದು, ಅಭಿಮಾನಿಗಳು ದೊಡ್ಡ ಪರದೆಯಲ್ಲಿ ಈ ಕ್ರಾಂತಿಕಾರಿ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ.
ನೀವು ಹೋಗಿ ನಿಮ್ಮ ಕುಟುಂಬ ಸಮೇತ ಈ ಸಿನಿಮಾವನ್ನು ನೋಡಿ ನಾವೆಲ್ಲ ಶಾಂತಿಯ ಹೂವುಗಳು…..