Home ಸುದ್ದಿ ವಾಸ್ತು ತಜ್ಞ ಡಾ. ಮಂಜುನಾಥ್ ಕುರುಗೋಡು ಅವರಿಗೆ ‘ವಾಸ್ತು ವೈಭವ ಪ್ರಶಸ್ತಿ-2026’ ಗೌರವ: ಗಣ್ಯರಿಂದ ಅಭಿನಂದನೆಗಳ ಮಹಾಪೂರ.
ಸುದ್ದಿ

ವಾಸ್ತು ತಜ್ಞ ಡಾ. ಮಂಜುನಾಥ್ ಕುರುಗೋಡು ಅವರಿಗೆ ‘ವಾಸ್ತು ವೈಭವ ಪ್ರಶಸ್ತಿ-2026’ ಗೌರವ: ಗಣ್ಯರಿಂದ ಅಭಿನಂದನೆಗಳ ಮಹಾಪೂರ.

Share
Share

ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ.

​ಗಂಗಾವತಿ : ಕವಿತಾ ಮೀಡಿಯಾ ಸೋರ್ಸ್ ಪ್ರೈ. ಲಿ. ಹೈಬ್ರಿಡ್ ನ್ಯೂಸ್ ಕನ್ನಡ ವಾಹಿನಿ ಹಾಗೂ ಮಹಿಳಾ ಧ್ವನಿ ಸಂಸ್ಥೆ (ರಿ) ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಸಾಂಸ್ಕೃತಿಕ ಸಂಭ್ರಮ ಹಾಗೂ ಸಂಗೀತ-ಸಾಹಿತ್ಯದ ಸಮ್ಮಿಲನದೊಂದಿಗೆ ‘ಕರُನಾಡ ಸಾಧಕರು’ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭದಲ್ಲಿ ಗಂಗಾವತಿಯ ಹೆಸರಾಂತ ವಾಸ್ತು ತಜ್ಞರಾದ ಡಾ. ಮಂಜುನಾಥ್ ಕುರುಗೋಡು ಅವರಿಗೆ ‘ವಾಸ್ತು ವೈಭವ ಪ್ರಶಸ್ತಿ-2026’ ನೀಡಿ ಗೌರವಿಸಲಾಗುತ್ತಿದೆ.

​ನಾಡಿನ ನಾಡು, ನುಡಿ, ನೆಲ, ಜಲ, ಪರಿಸರ ಹಾಗೂ ಸಮಾಜಪರ ಇವರ ಅನುಪಮ ಸೇವೆಯನ್ನು ಗುರುತಿಸಿ ಈ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಗಣ್ಯರ ಸಮಕ್ಷಮದಲ್ಲಿ ಪ್ರದಾನ ಮಾಡಲಾಗುತ್ತಿದೆ. ಈ ಮಹತ್ವದ ಸನ್ಮಾನವು ಡಾ. ಮಂಜುನಾಥ್ ಕುರುಗೋಡು ಅವರ ಬಹು ವಿಶೇಷಗಳ ಸಮಾಜಮುಖಿ ಮತ್ತು ವೃತ್ತಿಪರ ಸೇವೆಗೆ ಸಂದ ಗೌರವವಾಗಿದೆ.

​ಈ ಅಪೂರ್ವ ಕಾರ್ಯಕ್ರಮವು 2026ನೇ ಆಗಸ್ಟ್ 09ರ ಬೆಳಿಗ್ಗೆ 11:00 ಗಂಟೆಗೆ ಕೊಪ್ಪಳದ ಖಾನಫಂಟಿ ಕಲ್ಯಾಣ ಮಂಟಪದಲ್ಲಿ ಜರುಗಲಿದೆ. ಕಾರ್ಯಕ್ರಮದ ಯಶಸ್ಸಿಗಾಗಿ ಹಾಗೂ ಕರುನಾಡಿನ ಸಾಧಕರನ್ನು ಗೌರವಿಸಲು ಎಲ್ಲ ಸೃಜನಶೀಲ ಮನಸ್ಸುಗಳು ಮತ್ತು ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9663132663 ಅಥವಾ 6362880857 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.

​ವಾಸ್ತು ತಜ್ಞರಾದ ಡಾ. ಮಂಜುನಾಥ್ ಕುರುಗೋಡು ಅವರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಲಭಿಸಿರುವುದಕ್ಕೆ ಕುರುಹೀನ ಶೆಟ್ಟಿ ಸಮಾಜದ ಮುಖಂಡರಾದ ಏಳುಬಾವಿ ಕುಬೇರಪ್ಪನವರು, ವಾಣಿಜ್ಯೋದ್ಯಮಿಗಳಾದ  ಅಸರ್  ಅನ್ಸಾರಿ, ಸ್ನೇಹಿತರಾದ ಸಿದ್ದಲಿಂಗಯ್ಯ ಸ್ವಾಮಿ ಕಿನ್ನಾಳಮಠ ಹಾಗೂ ಹಿರಿಯ ಪತ್ರಕರ್ತ ಪಿ. ದಶರಥ ಅವರುಗಳು ಹರ್ಷ ವ್ಯಕ್ತಪಡಿಸಿ ಹೃತ್ಪೂರ್ವಕ ಅಭಿನಂದನೆಗಳನ್ನು ಹಾಗೂ ಮುಂದಿನ ಸಮಾಜಮುಖಿ ಕಾರ್ಯಗಳಿಗೆ ಶುಭ ಹಾರೈಸಿದ್ದಾರೆ.

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...