Home ಸುದ್ದಿ ಕಲ್ಯಾಣ ಕರ್ನಾಟಕದ ಪ್ರಾದೇಶಿಕ ಅಸ್ಮಿತೆ ಕಲಾಕೃತಿಗಳಲ್ಲಿ ಬಿಂಬಿತವಾಗಬೇಕು: ಹಿರಿಯ ಚಿತ್ರ ಕಲಾವಿದ ಚಂದ್ರಹಾಸ ಜಾಲಿಹಾಳ.
ಸುದ್ದಿ

ಕಲ್ಯಾಣ ಕರ್ನಾಟಕದ ಪ್ರಾದೇಶಿಕ ಅಸ್ಮಿತೆ ಕಲಾಕೃತಿಗಳಲ್ಲಿ ಬಿಂಬಿತವಾಗಬೇಕು: ಹಿರಿಯ ಚಿತ್ರ ಕಲಾವಿದ ಚಂದ್ರಹಾಸ ಜಾಲಿಹಾಳ.

Share
Share

 

ಮರ್ಚೆಡ್ ಡೇಸ್ ಸುದ್ದಿ|ಕಲಾಬುರಗಿ.

ಕಲಬುರಗಿ : ಯಾವುದೇ ಇರಲಿ  ಒಂದು ಪ್ರದೇಶದ ಜನಜೀವನದ ವೈಶಿಷ್ಟ್ಯಗಳಾದ ಭಾಷೆ, ಸಂಪ್ರದಾಯ, ಜನಪದ, ಉಡುಪು, ವಿಚಾರಗಳು ಹಾಗೂ ಭೌಗೋಳಿಕ ಗುಣಲಕ್ಷಣಗಳನ್ನು ಚಿತ್ರಕಲೆಯಲ್ಲಿ ಅಳವಡಿಸಿಕೊಂಡಾಗ ಮಾತ್ರ ಅಲ್ಲಿ ಪ್ರಾದೇಶಿಕ ಅಸ್ಮಿತೆಯನ್ನು ಯಶಸ್ವಿಯಾಗಿ ಗುರುತಿಸಲು ಸಾಧ್ಯ ಎಂದು ಹಿರಿಯ ಚಿತ್ರಕಲಾವಿದ ಚಂದ್ರಹಾಸ ಜಾಲಿಹಾಳ ಅಭಿಪ್ರಾಯಪಟ್ಟಿದ್ದಾರೆ.

ನಗರದ ಅಂಕುರ ಕಲಾ ಗ್ಯಾಲರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕವಿತಾ ಎಸ್. ಕಟ್ಟೆ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಲಾವಿದೆ ಕವಿತಾ ಎಸ್. ಕಟ್ಟೆ ಅವರು ತಾವು ಬೆಳೆದುಬಂದ ಗ್ರಾಮೀಣ ಪರಿಸರದ ಕೌದಿ, ಬೀಸುವ ಕಲ್ಲು, ತೊಟ್ಟಿಲು ಹಾಗೂ ಅಡಕಲು ಗಡಿಗೆಗಳಂತಹ ಜನಪದ ದೃಶ್ಯಗಳನ್ನು ತಮ್ಮ ಸ್ಮೃತಿ ಪಟಲದ ಆಧಾರದ ಮೇಲೆ ತೀವ್ರತೆಯಿಂದ ಅಭಿವ್ಯಕ್ತಿಸಿದ್ದಾರೆ ಎಂದು ಜಾಲಿಹಾಳ ಮೆಚ್ಚುಗೆ ವ್ಯಕ್ತಪಡಿಸಿದರು. ವಿಶೇಷವಾಗಿ ಕಲ್ಯಾಣ ಕರ್ನಾಟಕದ ಪ್ರಾದೇಶಿಕ ಕಸೂತಿಯಾದ ‘ಕೌದಿ’ಯನ್ನು ಮುಖ್ಯ ಆಕರವಾಗಿಟ್ಟುಕೊಂಡು ಅವರು ಸರಣಿ ಕಲಾಕೃತಿಗಳನ್ನು ರಚಿಸಿದ್ದು, ಇವುಗಳಲ್ಲಿ ಗ್ರಾಮೀಣ ಸೊಗಡಿನೊಂದಿಗೆ ಸ್ತ್ರೀ ಸಂವೇದನೆಯೂ ದೃಢವಾಗಿ ಮೂಡಿಬಂದಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ದಿ ಆರ್ಟ್ ಇಂಟಿಗ್ರೇಶನ್ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ನೀಲಮ್ಮ ಬೆಳಮಗಿ, ಇಂದಿನ ಆಧುನಿಕತೆಯ ಭರಾಟೆಯಲ್ಲಿ ಜನಪದ ವಸ್ತು-ವಿಷಯಗಳನ್ನು ಒಳಗೊಂಡಿರುವ ಕವಿತಾ ಅವರ ಈ ಕಲಾಕೃತಿಗಳು ನೋಡುಗರ ಮನಸ್ಸಿಗೆ ಅಪಾರ ನೆಮ್ಮದಿ ನೀಡುವುದರೊಂದಿಗೆ ಮಧುರ ಬಾಲ್ಯದ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತವೆ ಎಂದರು. ಇದೇ ವೇಳೆ ಚಿತ್ರಕಲಾವಿದ ಬಸವರಾಜ ವಿ. ಕಮಾಜಿ ಮಾತನಾಡಿದರೆ, ಮಹಾವಿದ್ಯಾಲಯದ ಪ್ರಾಚಾರ್ಯ ಎಂ. ಎಚ್. ಬೆಳಮಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಮಾರಂಭದ ವಿಶೇಷ ಸಡಗರವಾಗಿ ಜನಪದ ಕಸೂತಿ ಕಲಾವಿದೆಯರಾದ ಇಂದುಬಾಯಿ ಕಟ್ಟೆ ಮತ್ತು ಗೋದುಬಾಯಿ ಬುಜುರ್ಕೆ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಲಾವಿದೆ ಕವಿತಾ ಕಟ್ಟೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಲ್ಲಿಕಾರ್ಜುನ ಮುಗುಳಿ ಸ್ವಾಗತಿಸಿದರೆ, ಬಿ. ಎನ್. ಪಾಟೀಲ್ ನಿರೂಪಣೆ ಮಾಡಿದರು ಮತ್ತು ಹಣಮಂತ ಬಾಡದ್ ವಂದನಾರ್ಪಣೆ ಸಲ್ಲಿಸಿದರು. ಈ ಪ್ರದರ್ಶನದಲ್ಲಿ ನಗರದ ಗಣ್ಯ ಕಲಾವಿದರು, ಕಲಾ ಪ್ರೇಮಿಗಳು ಹಾಗೂ  ಚಿತ್ರಕಲಾ ವಿದ್ಯಾರ್ಥಿಗಳು ಭಾಗವಹಿಸಿ ಯಶಸ್ವಿಗೊಳಿಸಿದರು.

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...