Home ಅಂಕಣ ಅಕ್ಷರ ಲೋಕದ ಅಪರೂಪದ ರತ್ನ: ಸದಾ ಸ್ಮರಣೀಯ ಶಿಕ್ಷಕ ಎಚ್. ಎಂ. ಬಾಬಾ ಅವರಿಗೆ ನಿವೃತ್ತಿಯ ಗೌರವಾಭಿನಂದನೆಗಳು.
ಅಂಕಣಸುದ್ದಿ

ಅಕ್ಷರ ಲೋಕದ ಅಪರೂಪದ ರತ್ನ: ಸದಾ ಸ್ಮರಣೀಯ ಶಿಕ್ಷಕ ಎಚ್. ಎಂ. ಬಾಬಾ ಅವರಿಗೆ ನಿವೃತ್ತಿಯ ಗೌರವಾಭಿನಂದನೆಗಳು.

Share
Share

ಹೆಚ್ಎಮ್. ಬಾಬಾ ಶಿಕ್ಷಕರು ಸರಕಾರಿ  ಪ್ರಾಥಮಿಕ ಶಾಲೆ ಹಾಳು ತಿಮ್ಮಾಪುರ್ ರಾಯಚೂರು ಮಡದಿ ರಸಿದ ಬೇಗಂ.

ಮರ್ಚೆಡ್ ಡೇಸ್ ವಿಶೇಷ ಲೇಖನೆ:

ರಾಯಚೂರು ಜಿಲ್ಲೆಯ ರಾಯಚೂರು ತಾಲೂಕಿನ ಮರ್ಚೆಡ್ ಗ್ರಾಮದ ನಿವಾಸಿಯಾದ ಹಾಜಿ ಮಲಂಗ್ ಬಾಬಾ ಅವರು ಕೇವಲ ಒಬ್ಬ ಶಿಕ್ಷಕರಲ್ಲ, ಈ ಭಾಗದ ಸಾಂಸ್ಕೃತಿಕ ತಾರೆ. ಗ್ರಾಮಸ್ಥರು, ಶಾಲೆಯ ವಿದ್ಯಾರ್ಥಿಗಳು ಹಾಗೂ ಸ್ನೇಹಿತರ ವಲಯದಲ್ಲಿ ‘ಎಚ್. ಎಂ. ಬಾಬಾ’ ಎಂದೇ ಅತಿ ಪ್ರಸಿದ್ಧಿ ಪಡೆದಿರುವ ಇವರನ್ನು ಎಲ್ಲರೂ ಪ್ರೀತಿಯಿಂದ ಕರೆಯುತ್ತಾರೆ. ಅದ್ಭುತ ವಾಗ್ಮಿಯಾಗಿ, ಮುತ್ತಿನಂತಹ ಸುಂದರ ಅಕ್ಷರಗಳ ಕೈಬರಹದ ಬರಹಗಾರ ಎಂದು ಗುರುತಿಸಿಕೊಂಡಿರುವ ಇವರು, ತಮ್ಮ ಮಾತು ಮತ್ತು ಬರವಣಿಗೆಯ ಮೂಲಕವೇ ಜನಮನ ಸೂರೆಗೊಂಡ ವಿಶಿಷ್ಟ ವ್ಯಕ್ತಿತ್ವದ ಮತ್ತು ತನ್ನದೇ ಸ್ಟೈಲ್ ಉಳ್ಳ ಶಿಕ್ಷಕರು.

ಸರ್ಕಾರಿ ಸೇವೆಗೆ ಸೇರುವ ಮೊದಲೇ ಬಾಬಾ ಅವರಲ್ಲಿ ಸಮಾಜಮುಖಿ ಚಿಂತನೆಗಳಿದ್ದವು. ಅಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಟ್ಯೂಷನ್ ಹೇಳಿಕೊಡುವುದು, ಪತ್ರಿಕೆಗಳನ್ನು ಓದಿಸುವುದು, ಸಾಹಿತ್ಯ ಮತ್ತು ಸಂಗೀತದ ಅಭಿರುಚಿ ಬೆಳೆಸುವುದನ್ನು ಅವರು ನಿರಂತರವಾಗಿ ಮಾಡುತ್ತಾ ಬಂದಿದ್ದರು. ಜಗತ್ತಿನ ವಿದ್ಯಮಾನಗಳ ಬಗ್ಗೆ ಸದಾ ಚರ್ಚಿಸುತ್ತಿದ್ದ ಅವರು, ಅದೆಷ್ಟೋ ಯುವಕರಿಗೆ ಮಾರ್ಗದರ್ಶಕರಾಗಿದ್ದಾರೆ. ಇಂದಿನ ಪತ್ರಿಕೋದ್ಯಮದಲ್ಲಿ ಗುರುತಿಸಿಕೊಳ್ಳಲು ನನಗೆ ಅಂದು ಲಂಕೇಶ್, ರವಿ ಬೆಳಗೆರೆ, ವಿಶ್ವೇಶ್ವರ ಭಟ್ ಅವರಂತಹ ಮಹನೀಯರ ಬರಹಗಳನ್ನು ಹಾಗೂ ರಾಯಚೂರಿನ ಕ್ರಾಂತಿ ಕವಿ ಶಿವಪುತ್ರ ಬೇರಿ ಅವರಂತ ಅನೇಕ ಕ್ರಾಂತಿಕಾರಿ ಚಿಂತನೆಗಳನ್ನು ಪರಿಚಯಿಸಿದ್ದು ಇದೇ ಪ್ರೀತಿಯ ಗುರುಗಳು ಎನ್ನುವುದು ಹೆಮ್ಮೆಯ ಸಂಗತಿ.

ಬಾಬಾ ಅವರಿಗೆ ಪ್ರಕೃತಿ ಮತ್ತು ಮೂಕ ಪ್ರಾಣಿಗಳೆಂದರೆ ಅಪಾರ ಪ್ರೀತಿ. ಇವರ ಮನೆ ಎರಡು ಮೂರು ನಾಯಿಗಳನ್ನು  ಸಾಕಿದರು ಹಾಗೂ ಆಕಾಶದ ಎತ್ತರದಲ್ಲಿ ಹಾರಾಡುವ ಪಾರಿವಾಳಗಳ ಕಲರವವನ್ನು ಕಾಣಬಹುದು. ಕೊರೊನಾ ಸಾಂಕ್ರಾಮಿಕದ ದಿನಗಳಲ್ಲಿ ಇವರ ತೋಟದ ಮನೆಗೆ ಭೇಟಿ ನೀಡಿದಾಗ ಅವರ ಪರಿಸರ ಪ್ರೇಮ ಕಣ್ಣಿಗೆ ಕಟ್ಟುವಂತಿತ್ತು. ಬಗೆಬಗೆಯ ಹೂವಿನ ಗಿಡಗಳು, ತೆಂಗಿನ ಮರಗಳ ನಡುವೆ ಇದ್ದ ಆ ತೋಟದ ಮನೆಯ ನೀರಿನ ಕೊಳದಲ್ಲಿ ಕನ್ನಡ ಸಾಹಿತ್ಯದ ದಿಗ್ಗಜರ ಚಿತ್ರಗಳು ಮತ್ತು ಹೆಸರುಗಳನ್ನು ಕೆತ್ತಿಸಿರುವುದು ಕನ್ನಡ ಸಾಹಿತ್ಯದ ಮೇಲ ಅವರಿಗಿರುವ ಅಚಲ ಭಕ್ತಿಯನ್ನು ಸಾರುತ್ತಿತ್ತು. ಮತ್ತು ಹಿಂದಿ ಸಿನಿಮಾದ ನೂರಾರು ಕ್ಯಾಸೆಟ್ಗಳು ಮೊಮ್ಮದ್ ರಫಿ ಕಿಶೋರ್ ಕುಮಾರ್, ಸೈಗಲ್,  ಲತಾ, ಆಶಾ ಜಿ ಅವರ ಹಳೆ ಹಾಡುಗಳನ್ನು ಕೇಳುತ್ತಾರೆ ಹೋದವರಿಗೆ ಕೇಳಿಸುತ್ತಾರೆ ಅಲ್ಲಿ ಅವರು ಪ್ರೀತಿಯಿಂದ ಮಾಡಿಕೊಟ್ಟ ಕಡು ಕಪ್ಪು ಬಣ್ಣದ ‘ಬ್ಲಾಕ್ ಟೀ’ ರುಚಿ ಇಂದಿಗೂ ಮರೆಯಲಾಗದು.

ಊರಿನ ಶಾಲೆಗೆ ಪ್ರತಿಯೊಂದು ಸಮಸ್ಯೆಗೂ ಧ್ವನಿಯಾಗುವ ಬಾಬಾ ಅವರು, ಯುವಕರಲ್ಲಿ ನಿರಂತರವಾಗಿ ಸಾಮಾಜಿಕ ಜಾಗೃತಿ ಮೂಡಿಸುತ್ತಿದ್ದಾರೆ. ಕಲೆಯ ವಿಷಯಕ್ಕೆ ಬಂದರೆ ಒಬ್ಬ ಶ್ರೇಷ್ಠ ಕಲಾವಿದನಂತೆ, ವೇದಿಕೆಯ ಮೇಲೆ ನಿಂತರೆ ಒಬ್ಬ ರಾಜಕೀಯ ನಾಯಕ ಹಾಗೂ ಸಾಮಾಜಿಕ ಹೋರಾಟಗಾರನಂತೆ ಕಂಗೊಳಿಸುವ ಬಹುಮುಖ ಪ್ರತಿಭೆ ಇವರದ್ದು. ಯಾರನ್ನೂ ಅಷ್ಟು ಬೇಗ ಹತ್ತಿರ ಬಿಟ್ಟುಕೊಳ್ಳದ, ತನ್ನದೇ ಆದ ವಿಶಿಷ್ಟ ಸೌಮ್ಯ ಗತ್ತು ಮತ್ತು ಸದಾಚಾರವನ್ನು ಕಾಯ್ದುಕೊಂಡಿರುವ ಕಲೆಗಾರ ಈ ಶಿಕ್ಷಕ.

ಎಚ್. ಎಂ. ಬಾಬಾ ಅವರ ಯಶಸ್ಸಿನ ಹಿಂದೆ ಅವರ ಸುಂದರ ಕುಟುಂಬದ ಬೆಂಬಲವಿದೆ. ಇವರ ಹಿರಿಯ ಮಗ ಎಂ. ಡಿ. ಭಾಷಾ, ಮಗಳು ರಾಣಿ ಕುಸುಂಬಿ ಹಾಗೂ ಎರಡನೆಯ ಮಗಳು ರಾಣಿ ಮುಸ್ಕಾನ್ ಇವರ ಹೆಮ್ಮೆಯ ಮಕ್ಕಳು. ಮತ್ತು ಮೊಮ್ಮಕ್ಕಳು  ಎಲ್ಲಕ್ಕಿಂತ ಮುಖ್ಯವಾಗಿ, ಇಂತಹ ವಿಶಿಷ್ಟ ವ್ಯಕ್ತಿತ್ವದ ಕಲೆಗಾರನನ್ನು ಅಚ್ಚುಕಟ್ಟಾಗಿ ಸಂಬಾಳಿಸಿಕೊಂಡು ಹೋಗುತ್ತಿರುವ ಅವರ ಪ್ರೀತಿಯ ಮಡದಿ ರಸಿದಾ ಬೇಗಂ ಅವರ ಪಾತ್ರ ಅನನ್ಯವಾದದ್ದು. ಅವರನ್ನು ಬಿಟ್ಟು ಬಾಬಾ ಅವರ ಜೀವನವನ್ನು ಬೇರೆಯವರನ್ನು ಊಹಿಸಿಕೊಳ್ಳುವುದೂ ಅಸಾಧ್ಯ.

ಕಳೆದ ಹಲವಾರು ವರ್ಷಗಳಿಂದ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಅತ್ಯಂತ ಜವಾಬ್ದಾರಿ ಹಾಗೂ ಹೊಣೆಗಾರಿಕೆಯಿಂದ ಸರ್ಕಾರಿ ಹುದ್ದೆಯನ್ನು ನಿರ್ವಹಿಸಿದ ಎಚ್. ಎಂ. ಬಾಬಾ ಅವರು ಇಂದು (ಜೂನ್ 29) ವಯೋನಿವೃತ್ತಿ ಹೊಂದುತ್ತಿದ್ದಾರೆ. ತಮ್ಮ ಸುದೀರ್ಘ ಸೇವೆಯ ಮೂಲಕ ನೂರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ನೆಚ್ಚಿನ ಗುರುಗಳಿಗೆ ಅವರ ಪ್ರೀತಿಯ ವಿದ್ಯಾರ್ಥಿಗಳು, ಸ್ನೇಹಿತರು, ಬಂಧು-ಮಿತ್ರರು ಹಾಗೂ ‘ಮರ್ಚೆಡ್ ಡೇಸ್ ಕನ್ನಡ ದಿನಪತ್ರಿಕೆ’ಯ ಪರವಾಗಿ ಕೋಟಿ ಕೋಟಿ ಪ್ರಣಾಮಗಳು. ದೇವರು ನಿಮಗೆ ಮುಂದಿನ ನಿವೃತ್ತ ಜೀವನದಲ್ಲಿ ಸುಖ, ಶಾಂತಿ, ಉತ್ತಮ ಆಯುಷ್ಯ ಮತ್ತು ಆರೋಗ್ಯವನ್ನು ಕರುಣಿಸಲಿ, ನಿಮ್ಮ ಮುಖದ ಮೇಲಿನ ನಗು ಎಂದಿಗೂ ಹೀಗೆಯೇ ಇರಲಿ ಎಂದು ಪ್ರೀತಿಯಿಂದ ಕೋರುತ್ತೇವೆ.

ನಿವೃತ್ತಿ ಜೀವನಕ್ಕೆ ಶುಭಕೋರುವ, ನಿಮ್ಮ ಪ್ರೀತಿಯ ವಿದ್ಯಾರ್ಥಿ ಹಾಗೂ ಬಳಗ.

ತಾಯಪ್ಪ ಮರ್ಚೆಡ್.

ಪತ್ರಕರ್ತರು ಗಂಗಾವತಿ.

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...