Home ಸುದ್ದಿ ನಂದಿಪುರ ಮಠಕ್ಕೆ ಹರಿದುಬಂದ ಜನಸಾಗರ, ಹುಣ್ಣಿಮೆ ಉಚಿತ ಆರೋಗ್ಯ ಶಿಬಿರಕ್ಕೆ ಅಭೂತಪೂರ್ವ ಸ್ಪಂದನೆ.
ಸುದ್ದಿ

ನಂದಿಪುರ ಮಠಕ್ಕೆ ಹರಿದುಬಂದ ಜನಸಾಗರ, ಹುಣ್ಣಿಮೆ ಉಚಿತ ಆರೋಗ್ಯ ಶಿಬಿರಕ್ಕೆ ಅಭೂತಪೂರ್ವ ಸ್ಪಂದನೆ.

Share
Share

 

ಮರ್ಚೆಡ್ ಡೇಸ್ ಸುದ್ದಿ

ವಿಜಯನಗರ :ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಐತಿಹಾಸಿಕ ಪುಣ್ಯಕ್ಷೇತ್ರವಾದ ನಂದಿಪುರ ಮಠದಲ್ಲಿ ಹುಣ್ಣಿಮೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಸಾಗರೋಪಾದಿಯಲ್ಲಿ ಜನಸ್ತೋಮ ಹರಿದುಬಂದಿದೆ. ಕಳೆದ ಏಳು ವರ್ಷಗಳಿಂದ ಪ್ರತಿ ಹುಣ್ಣಿಮೆಯಂದು ಅತ್ಯಂತ ಯಶಸ್ವಿಯಾಗಿ ನಡೆಯುತ್ತಾ ಬಂದಿರುವ ಈ ಶಿಬಿರದಲ್ಲಿ ಈ ಬಾರಿಯೂ ಸಹ ಸಾವಿರಾರು ಸಾರ್ವಜನಿಕರು ಪಾಲ್ಗೊಂಡು ಉಚಿತ ಚಿಕಿತ್ಸೆ ಹಾಗೂ ಆಯುರ್ವೇದ ಔಷಧಿಯ ಲಾಭ ಪಡೆದುಕೊಂಡಿದ್ದಾರೆ.

ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನೆಲ್ಲೂರು ಗ್ರಾಮದ ನಿವಾಸಿಯಾದ ಪಾರಂಪರಿಕ ಪ್ರಸಿದ್ಧ ವೈದ್ಯ ಡಾ. ಬಸವರಾಜ್ ವೀರಭದ್ರಯ್ಯ ಹಿರೇಮಠ ಹಾಗೂ ಅವರ ಪುತ್ರರಾದ ಡಾ. ಕಲ್ಲೇಶ್ ಕುಮಾರ್ ಬಸವರಾಜ ಹಿರೇಮಠ (ಎಂ.ಡಿ) ಇವರು ಜಂಟಿಯಾಗಿ ಈ ಶಿಬಿರವನ್ನು ನಡೆಸಿಕೊಡುತ್ತಿದ್ದಾರೆ. ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ನಿರಂತರವಾಗಿ ನಡೆಯುವ ಈ ಶಿಬಿರದಲ್ಲಿ ಪಾರ್ಶ್ವವಾಯು (ಪಾರ್ಸಿ), ಮೂಲವ್ಯಾಧಿ, ಮಂಡಿನೋವು, ಸಕ್ಕರೆ ಕಾಯಿಲೆ, ಅಸ್ತಮಾ, ಫಿಟ್ಸ್, ನರಗಳ ದೌರ್ಬಲ್ಯ ಹಾಗೂ ಸಂತಾನಹೀನತೆಯಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಇಲ್ಲಿ ಆಯುರ್ವೇದ ಪದ್ಧತಿಯಲ್ಲಿ ಅತ್ಯುತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ನೂರಕ್ಕೆ ನೂರರಷ್ಟು ಕಾಯಿಲೆಗಳು ಗುಣಮುಖವಾಗುತ್ತಿರುವುದರಿಂದ ಈ ವೈದ್ಯರ ಕೈಗುಣಕ್ಕೆ ಜನಮನ್ನಣೆ ದೊರೆತಿದೆ.

ಈ ಉಚಿತ ಚಿಕಿತ್ಸೆಯ ಮಹತ್ವ ಹಾಗೂ ವೈದ್ಯರ ಕೀರ್ತಿ ಕೇವಲ ಸ್ಥಳೀಯ ಪ್ರದೇಶಕ್ಕೆ ಸೀಮಿತವಾಗಿರದೆ ಇಡೀ ರಾಜ್ಯಕ್ಕೆ ವಿಸ್ತರಿಸಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ದಾವಣಗೆರೆ, ಹರಿಹರ, ಚಿತ್ರದುರ್ಗ, ಬಳ್ಳಾರಿ, ಹೊಸಪೇಟೆ, ಹಗರಿಬೊಮ್ಮನಹಳ್ಳಿ ಹಾಗೂ ನೆರೆಯ ಆಂಧ್ರಪ್ರದೇಶದಿಂದಲೂ ಸಹ ನೂರಾರು ರೋಗಿಗಳು ಪ್ರತಿ ಹುಣ್ಣಿಮೆಯ ದಿನದಂದು ನಂದಿಪುರ ಗ್ರಾಮಕ್ಕೆ ಆಗಮಿಸುತ್ತಿದ್ದಾರೆ. ಇಲ್ಲಿಯವರೆಗೆ ಲಕ್ಷಾಂತರ ನಾಗರಿಕರು ಈ ಉಚಿತ ಶಿಬಿರದ ಸದುಪಯೋಗ ಪಡೆದುಕೊಂಡಿರುವುದು ಈ ಕ್ಷೇತ್ರದ ಪಾವಿತ್ರ್ಯತೆ ಮತ್ತು ವೈದ್ಯರ ಜನಸೇವೆಯ ಪ್ರತೀಕವಾಗಿದೆ.

ಪರಮಪೂಜ್ಯ ಶ್ರೀ ಗುರು ದೊಡ್ಡ ಬಸವೇಶ್ವರರ ಹಾಗೂ ಪರಮ ಪೂಜ್ಯ ಶ್ರೀ ಗುರು ಚರಂತಪ್ಪಜ್ಜನವರ ದಿವ್ಯ ಕೃಪಾ ಆಶೀರ್ವಾದದೊಂದಿಗೆ ಆರಂಭವಾದ ಈ ಆರೋಗ್ಯ ಸೇವೆ, ಪ್ರಸ್ತುತ ಪರಮಪೂಜ್ಯ ಶ್ರೀ ಡಾಕ್ಟರ್ ಮಹೇಶ್ವರ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ನಿರಂತರವಾಗಿ ಮುನ್ನಡೆಯುತ್ತಿದೆ. ಕೇವಲ ಮಾಸಿಕ ಹುಣ್ಣಿಮೆ ಶಿಬಿರಗಳಷ್ಟೇ ಅಲ್ಲದೆ, ಪ್ರತಿ ವರ್ಷ ಮೃಗಶಿರ ನಕ್ಷತ್ರದ ಸಮಯದಲ್ಲೂ ಸಹ ಆಸ್ತಮಾ (ದಮ್ಮು) ರೋಗಿಗಳಿಗೆ ವಿಶೇಷವಾಗಿ ಉಚಿತ ಔಷಧಿಯನ್ನು ವಿತರಿಸಲಾಗುತ್ತಿದ್ದು, ಈ ವೈದ್ಯಕೀಯ ಸೇವಾ ಕಾರ್ಯವು ಸಾರ್ವಜನಿಕರ ವಲಯದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

ನಂದಿಪುರ ಮಠದಲ್ಲಿ ನಡೆಯುತ್ತಿರುವ ಈ ನಿರಂತರ ಸಾಮಾಜಿಕ ಹಾಗೂ ವೈದ್ಯಕೀಯ ಸೇವೆಯನ್ನು ಕರ್ನಾಟಕ ರಾಜ್ಯದ ಪ್ರಸಿದ್ಧ ಸಾಹಿತಿಗಳಾದ ಎಸ್. ವಿ. ಪಾಟೀಲ್ ಗುಂಡೂರು, ಖ್ಯಾತ ವಾಸ್ತು ತಜ್ಞರಾದ ಡಾ. ಮಂಜುನಾಥ್ ಕುರುಗೋಡು ಸೇರಿದಂತೆ ನಾಡಿನ ಹತ್ತು ಹಲವು ಗಣ್ಯಮಾನ್ಯರು ಶ್ಲಾಘಿಸಿ, ವೈದ್ಯರ ತಂಡಕ್ಕೆ ಹೃತ್ಪೂರ್ವಕವಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಶಿಬಿರದ ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ವೈದ್ಯರ ಮೊಬೈಲ್ ಸಂಖ್ಯೆಗಳಾದ 9845782214 ಅಥವಾ 849782829324 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ವರದಿಗಾರರು:

ಪಿ . ದಶರಥ ಹಿರಿಯ ಪತ್ರಕರ್ತರು ಗಂಗಾವತಿ

ಸಂಪರ್ಕ ಮೊ: 9482766689.

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...