ಮರ್ಚೆಡ್ ಡೇಸ್ ಸುದ್ದಿ.
ರಾಯಚೂರು : ಕೃಷಿ ಇಲಾಖೆಯಿಂದ 2026-27ನೇ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಅರ್ಹ ರೈತರಿಂದ ನೋಂದಣಿಗೆ ಅರ್ಜಿ ಆಹ್ವಾನಿಸಲಾಗಿದೆ.
ಕೃಷಿ ಬೆಳೆಗಳಿಗೆ ಸಂಬಂಧಿಸಿದಂತೆ ಹಲವಾರು ಅಪಾಯಗಳಿಂದ ಬೆಳೆ ನಷ್ಟವಾದಾಗ ರೈತರನ್ನು ರಕ್ಷಿಸುವ ಮಾಧ್ಯಮ ಬೆಳೆ ವಿಮೆಯಾಗಿರುತ್ತದೆ. ಪ್ರಸ್ತುತ ಸಾಲು ಮತ್ತು ಹಂಗಾಮಿನಲ್ಲಿ ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂ ಕುಸಿತ ಮತ್ತು ಬೆಳೆ ಮುಳುಗಡೆ ಸಂಧರ್ಭದಲ್ಲಿ ಬೆಳೆ ನಷ್ಟ ಉಂಟಾದಲ್ಲಿ ವೈಯುಕ್ತಿಕ ನಷ್ಟದ ನಿರ್ವಹಣೆಗಾಗಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಪಿಎಮ್‌ಎಫ್‌ಬಿವೈ (ವಿಮಾ) ಯೋಜನೆಯನ್ನು ಅಧಿಸೂಚಿಸಲಾಗಿದೆ.
ಯೋಜನೆಯ ವ್ಯಾಪ್ತಿ: 2026-27ನೇ ಸಾಲಿನಿಂದ ರೇವಾಂಪೇಡ್ ಪಿಎಮ್‌ಎಫ್‌ಬಿವೈ ಮಾರ್ಗಸೂಚಿಯನ್ವಯ ಬೆಳೆ ಸಾಲ ಮಂಜೂರಾದ ಎಲ್ಲಾ ರೈತರನ್ನು ಕಡ್ಡಾಯವಾಗಿ ಈ ಯೋಜನೆಯಲ್ಲಿ ಒಳಪಡಿಸಲಾಗುವುದು. ಅದರಂತೆ ಬೆಳೆ ಸಾಲ ಪಡೆದ ರೈತರು ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಛೆ ಪಡದೇ ಇದ್ದಲ್ಲಿ ಈ ಕುರಿತು ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕಿAತ 7 ದಿನಗಳು ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರವನ್ನು ನೀಡಿದ್ದಲ್ಲಿ ಅಂತಃ ರೈತರನ್ನು ಬೆಳೆ ವಿಮ ಯೋಜನೆಯಿಂದ ಕೈಬಿಡಲಾಗುವುದು. ಈ ಕುರಿತು ಸಂಬAಧಿಸಿದ ಬ್ಯಾಂಕ್ ಗಳಿಗೆ ಭೇಟಿ ನೀಡಬಹುದಾಗಿದೆ.
ಈ ಯೋಜನೆಯಡಿಯಲ್ಲಿ ಬೆಳೆ ಸಾಲ ಪಡೆಯದ ರೈತರು ಅಂದಾಜು/ ಉಪೇಕ್ಷಿತ ಬೆಳೆ ಬಿತ್ತನೆ ಆಧಾರದ ಮೇಲೆ ಬಿತ್ತನೆ ಪೂರ್ವದಲ್ಲೇ ಪಾಲ್ಗೊಳ್ಳಬಹುದು. ಬೆಳೆ ಸಾಲ ಪಡೆಯದ ರೈತರು ಬೆಳೆ ವಿಮೆಗೆ ನೋಂದಾಯಿಸಿದ ನಂತರ ಬೇರೆ ಬೆಳೆ ಬಿತ್ತನೆ ಮಾಡಿದ್ದಲ್ಲಿ ಹಾಗೂ ಬೆಳೆ ಸಾಲ ಪಡೆದ ರೈತರು ಸಾಲದ ಅರ್ಜಿಯಲ್ಲಿ ನಮೂದಿಸಿದ ಬೆಳೆ ಬದಲಾಗಿ ಬೇರೆ ಬೆಳೆ ಬಿತ್ತನೆ ಮಾಡಿದ್ದಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿ ನಿಗದಿಪಡಿಸಿದ ಅವಧಿಯೊಳಗಾಗಿ (ಅಂದರೆ, ಜಿಲ್ಲಾವಾರು, ಬೆಳೆವಾರು ನೋಂದಣಿ ಕೊನೆಯ ದಿನಾಂಕಕ್ಕೆ 2 ದಿನಗಳ ಮುಂಚಿತವಾಗಿ) ನೋಂದಾಯಿಸಿದ ಆರ್ಥಿಕ ಸಂಸ್ಥೆಗಳಲ್ಲಿ ಬಿತ್ತನೆ ದೃಢೀಕರಣ ಪತ್ರ ನೀಡಿ ವಿಮೆ ನೋಂದಾಯಿಸಿದ ಬೆಳೆಯನ್ನು ಬದಲಾಯಿಸತಕ್ಕದ್ದು. ಅಂತಹ ಸಂದರ್ಭದಲ್ಲಿ ಹೆಚ್ಚುವರಿ ವಿಮಾ ಕಂತಿನ ವ್ಯತ್ಯಾಸದ ಮೊತ್ತವನ್ನು ರೈತರು ಭರಿಸತಕ್ಕದ್ದು ಅಥವಾ ಹೆಚ್ಚುವರಿ ವಿಮಾ ಕಂತನ್ನು ಪಾವತಿಸಿದಲ್ಲಿ ರೈತರಿಗೆ ಸಂಸ್ಥೆಗಳಿದ ಮರುಪಾವತಿಸತಕ್ಕದ್ದು.
ಅಧಿಸೂಚಿತ ಘಟಕಗಳಲ್ಲಿ ಬೆಳೆ ವಿಮೆಗೆ ಒಳಪಟ್ಟ ರೈತರಲ್ಲಿ ಬೆಳೆ ನಷ್ಟವಾದ ರೈತರಿಗೆ ಮಾತ್ರ ಮಾದರಿ ಸಮೀಕ್ಷೆಗನುಗುಣವಾಗಿ ಬೆಳೆನಷ್ಟ ಪರಿಹಾರವನ್ನು ಇತ್ಯರ್ಥ ಪಡಿಸಲಾಗುವುದು. ಬೆಳೆ ವಿಮೆ ಮಾಡಿಸಿದ ರೈತರು ಈ ಬಗ್ಗೆ ಸಂಬಧಪಟ್ಟ ಅನುಷ್ಠಾನಗೊಳಿಸುವ ವಿಮಾ ಸಂಸ್ಥೆಯು ಕಛೇರಿಗಳಿಗೆ 72 ಗಂಟೆಯೊಳಗೆ ಸೂಚಿಸಬೇಕು. ಬೆಳೆಯ ವಿವರ, ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣಗಳನ್ನು ತಿಳಿಸಬೇಕು.
ವಿಮಾ ಕಂತಿನ ವಿವರ: ರಾಯಚೂರು ಜಿಲ್ಲೆಯಲ್ಲಿ ಹೆಸರು (ಮಳೆ ಆಶ್ರಿತಿ) ಬೆಳೆಗೆ 321ರೂ.ಗಳನ್ನು ಜುಲೈ 15ರೊಳಗಾಗಿ ಪಾವತಿಸಬೇಕು. ಭತ್ತ (ಮಳೆ ಆಶ್ರಿತ) ಬೆಳೆಗೆ 612ರೂ.ಗಳನ್ನು ಜುಲೈ 31ರೊಳಗಾಗಿ ಪಾವತಿಸಬೇಕು. ಸಜ್ಜೆ ಮಳೆ (ನೀರಾವರಿ) ಬೆಳೆಗೆ 350ರೂ.ಗಳನ್ನು ಜುಲೈ 31ರೊಳಗಾಗಿ ಪಾವತಿಸಬೇಕು. ಸಜ್ಜೆ (ಮಳೆ ಆಶ್ರಿತಿ) ಬೆಳೆಗೆ 282ರೂ.ಗಳನ್ನು ಜುಲೈ 31ರೊಳಗಾಗಿ ಪಾವತಿಸಬೇಕು. ತೊಗರಿ (ಮಳೆ ಆಶ್ರಿತಿ) ಬೆಳೆಗೆ 466ರೂ.ಗಳನ್ನು ಜುಲೈ 31ರೊಳಗಾಗಿ ಪಾವತಿಸಬೇಕು. ತೊಗರಿ (ನೀರಾವರಿ) ಬೆಳೆಗೆ 488ರೂ.ಗಳನ್ನು ಜುಲೈ 31ರೊಳಗಾಗಿ ಪಾವತಿಸಬೇಕು. ಸೂರ್ಯಕಾಂತಿ (ಮಳೆ ಆಶ್ರಿತಿ) ಬೆಳೆಗೆ 390ರೂ.ಗಳನ್ನು ಜುಲೈ 31ರೊಳಗಾಗಿ ಪಾವತಿಸಬೇಕು. ನೆಲಗಡಲೆ (ಶೇಂಗಾ) (ನೀರಾವರಿ) ಬೆಳೆಗೆ 630ರೂ.ಗಳನ್ನು ಜುಲೈ 31ರೊಳಗಾಗಿ ಪಾವತಿಸಬೇಕು. ನೆಲಗಡಲೆ (ಶೇಂಗಾ) (ಮಳೆ ಆಶ್ರಿತಿ) ಬೆಳೆಗೆ 529ರೂ.ಗಳನ್ನು ಜುಲೈ 31ರೊಳಗಾಗಿ ಪಾವತಿಸಬೇಕು. ಹತ್ತಿ (ನೀರಾವರಿ) ಬೆಳೆಗೆ 1748ರೂ.ಗಳನ್ನು ಜುಲೈ 31ರೊಳಗಾಗಿ ಪಾವತಿಸಬೇಕು. ಹತ್ತಿ (ಮಳೆ ಆಶ್ರಿತಿ) ಬೆಳೆಗೆ 1208ರೂ.ಗಳನ್ನು ಜುಲೈ 31ರೊಳಗಾಗಿ ಪಾವತಿಸಬೇಕು. ಭತ್ತ (ನೀರಾವರಿ) ಬೆಳೆಗೆ 879ರೂ.ಗಳನ್ನು ಆಗಸ್ಟ್ 14ರೊಳಗಾಗಿ ಪಾವತಿಸಬೇಕು. ಸೂರ್ಯಕಾಂತಿ (ನೀರಾವರಿ) ಬೆಳೆಗೆ 460ರೂ.ಗಳನ್ನು ಆಗಸ್ಟ್ 14ರೊಳಗಾಗಿ ಪಾವತಿಸಬೇಕು. ಮುಸುಕಿನ ಜೋಳ (ನೀರಾವರಿ) ಬೆಳೆಗೆ 617ರೂ.ಗಳನ್ನು ಆಗಸ್ಟ್ 14ರೊಳಗಾಗಿ ಪಾವತಿಸಬೇಕು. ಈರುಳ್ಳಿ (ನೀರಾವರಿ) ಬೆಳೆಗೆ 1900ರೂ.ಗಳನ್ನು ಆಗಸ್ಟ್ 14ರೊಳಗಾಗಿ ಪಾವತಿಸಬೇಕು. ಮುಂಗಾರು ಹಂಗಾಮಿನಲ್ಲಿ ರಾಯಚೂರು ಜಿಲ್ಲೆಗೆ ಎಸ್.ಬಿ.ಐ ಜೆನರಲ್ ಇನ್ಸೂರೆನ್ಸ್ ಸಂಸ್ಥೆಯು ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತದೆ.
ರೈತರು ಪಹಣಿಯ ಪ್ರತಿ, ಬ್ಯಾಂಕ್ ಪಾಸ್ ಬುಕ್ ಪ್ರತಿ ಹಾಗೂ ಆಧಾರ್ ಪ್ರತಿ ಮತ್ತು ಕಡ್ಡಾಯವಾಗಿ ಎಫ್.ಐ.ಡಿ ವಿವರಗಳೊಂದಿಗೆ ಮೇಲಿನ ನಿಗದಿತ ದಿನಾಂಕದೊಳಗಾಗಿ ಹತ್ತಿರದ ಗ್ರಾಮ ಓನ್, ಕರ್ನಾಟಕ ಓನ್, ಸಿಎಸ್‌ಸಿ ಸೆಂಟರ್ಸ್ ಮತ್ತು ಬ್ಯಾಂಕ್ ಶಾಖೆಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ, ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹಾಗೂ ಜಂಟಿ ಕೃಷಿ ನಿರ್ದೇಶಕರು ಕಚೇರಿಗೆ ಭೇಟಿ ನೀಡಬಹುದಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.