Home ಸುದ್ದಿ ಧರ್ಮದ ಚೌಕಟ್ಟು ಮೀರಿದ ಭಾವೈಕ್ಯತೆಯ ಪ್ರತೀಕ: ಕಲ್ಯಾಣ ಕರ್ನಾಟಕದ ‘ನಮ್ಮ’ ಮೊಹರಂ ಆಚರಣೆ.
ಸುದ್ದಿ

ಧರ್ಮದ ಚೌಕಟ್ಟು ಮೀರಿದ ಭಾವೈಕ್ಯತೆಯ ಪ್ರತೀಕ: ಕಲ್ಯಾಣ ಕರ್ನಾಟಕದ ‘ನಮ್ಮ’ ಮೊಹರಂ ಆಚರಣೆ.

Share
Share

 

 

 

 

ಮರ್ಚೆಡ್ ಡೇಸ್ ವಿಶೇಷ ವರದಿ:

ಬದಲಾಗುತ್ತಿರುವ ಕಾಲಘಟ್ಟದಲ್ಲಿ ಮನುಷ್ಯನ ಸಂಬಂಧಗಳು, ಆಚಾರ-ವಿಚಾರಗಳು ಬದಲಾಗುತ್ತಿರಬಹುದು. ಆದರೆ, ಕಲ್ಯಾಣ ಕರ್ನಾಟಕ ಭಾಗದ ನಗರ, ಓಣಿ, ಹಳ್ಳಿಗಳಲ್ಲಿ ಆಚರಿಸಿಕೊಂಡು ಬರುತ್ತಿರುವ ಮೊಹರಂ ಹಬ್ಬದ ಸೌಹಾರ್ದತೆಗೆ ಮಾತ್ರ ಯಾವುದೇ ಕಾಲದಲ್ಲೂ ಚ್ಯುತಿ ಬಂದಿಲ್ಲ,

ಜಾತಿ, ಮತ, ಧರ್ಮದ ಭೇದವನ್ನು ಸಂಪೂರ್ಣವಾಗಿ ಮರೆತು, ಹಿಂದೂ-ಮುಸ್ಲಿಮರು ಸೋದರ-ಸೋದರಿಯರಂತೆ ಒಂದಾಗಿ ಆಚರಿಸುವ ಈ ಮೊಹರಂ, ಕೇವಲ ಒಂದು ಹಬ್ಬವಾಗಿ ಉಳಿದಿಲ್ಲ; ಬದಲಿಗೆ ಅದು ಸರ್ವ ಧರ್ಮ ಸಮನ್ವಯತೆಯ ಜೀವಂತ ಸಂಕೇತವಾಗಿದೆ.

ಬದಲಿಗೆ ಅದು ಭಕ್ತಿ ಮತ್ತು ನಿಷ್ಕಲ್ಮಶ ಭಾವನೆಗಳ ಸಂಗಮ. ಧರ್ಮದ ಬೇಲಿಗಳನ್ನು ಸಾರಾಸಗಟಾಗಿ ತಿರಸ್ಕರಿಸಿ, ದೇವರ ಹೆಸರಿನಲ್ಲಿ ಒಂದಾಗುವ ಇಲ್ಲಿನ ಜನರ ಶ್ರದ್ಧೆ ನಿಜಕ್ಕೂ ಅನನ್ಯ. ಪ್ರತಿವರ್ಷವೂ ಹೊಸ ಕಳೆ, ಹೊಸ ಉತ್ಸಾಹದೊಂದಿಗೆ, ಎಂದಿಗಿಂತಲೂ ಭಿನ್ನವಾಗಿ ಎಚ್ಚೆ ಎನ್ನುವಂತೆ ಹಬ್ಬವನ್ನು ಆಚರಿಸುವ ದೃಢ ಸಂಪ್ರದಾಯವನ್ನು ಈ ಭಾಗದ ಜನತೆ ಮೈಗೂಡಿಸಿಕೊಂಡಿದ್ದಾರೆ.

ಮೊಹರಂ ದಿನಗಳಲ್ಲಿ ಹಳ್ಳಿ, ನಗರ,ಏರಿಯಾ ತುಂಬೆಲ್ಲಾ ಹಬ್ಬದ ಸಡಗರವೋ ಸಡಗರ. ಜಾತಿ-ಭೇದವಿಲ್ಲದೆ ಎಲ್ಲರೂ ಒಂದೇ ರೀತಿಯ ಬಟ್ಟೆಗಳನ್ನು ಧರಿಸಿ ಸಂಭ್ರಮಿಸುವುದು ಇಲ್ಲಿನ ವಿಶೇಷ. ಹಳ್ಳಿಯ ಗಲ್ಲಿ ಗಲ್ಲಿಗಳಲ್ಲಿ ಮೊಳಗುವ ವಿಶಿಷ್ಟ ‘ಸವಾಲು ಪದಗಳು’ ಮತ್ತು ಅದಕ್ಕೆ ತಕ್ಕಂತೆ ಹೆಜ್ಜೆ ಹಾಕುವ ತಾರುಣ್ಯದ ಕುಣಿತವನ್ನು ಕಣ್ಣುಂಬಿಕೊಳ್ಳುವುದೇ ಒಂದು ಪರಮಾನಂದ. ಗ್ರಾಮೀಣ ಕಲೆಗಳ ಜೀವಂತಿಕೆಯಾಗಿ ನಡೆಯುವ ‘ಹಳ್ಳಳ್ಳಿ ಆಟಗಳು’ ಹಬ್ಬದ ಸೌಂದರ್ಯವನ್ನು ಮತ್ತಷ್ಟು ಇಮ್ಮಡಿಗೊಳಿಸುತ್ತವೆ.

ಈ ಭಾಗದ ಮೊಹರಂ ಆಚರಣೆಯಲ್ಲಿ ಕಲಾಪ್ರಕಾರಗಳ ಶ್ರೀಮಂತಿಕೆಯೂ ಎದ್ದು ಕಾಣುತ್ತದೆ. ಕರಾವಳಿಯ ತೇಟ ಯಕ್ಷಗಾನದ ಮಾದರಿಯನ್ನು ನೆನಪಿಸುವಂತಹ ವಿಶಿಷ್ಟ ರೂಪಗಳು, ಮೈ ರೋಮಾಂಚನಗೊಳಿಸುವ ಹುಲಿವೇಷದ ಪ್ರದರ್ಶನಗಳು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುತ್ತವೆ. ಅಷ್ಟೇ ಅಲ್ಲದೆ, ದೇವರ ಮೇಲಿನ ಭಕ್ತಿಯ ಪರಕಾಷ್ಠೆಯಾಗಿ, ಭಕ್ತರು ಮೈಮೇಲೆಯೇ ಬರೆಸಿಕೊಂಡು ಆಚರಣೆಯಲ್ಲಿ ಪಾಲ್ಗೊಳ್ಳುವ ಸಂಪ್ರದಾಯ ಇಲ್ಲಿನ ಭಿನ್ನತೆಯಲ್ಲಿ ಏಕತೆಯನ್ನು ಸಾರುತ್ತದೆ.

ವೈವಿಧ್ಯಮಯ ಆಚರಣೆಗಳು, ಸಾಂಪ್ರದಾಯಿಕ ಕಲೆಗಳು ಮತ್ತು ಅಪ್ರತಿಮ ಭಕ್ತಿಯ ಸಮ್ಮಿಲನವಾಗಿರುವ ಈ ಮೊಹರಂ, ಕಲ್ಯಾಣ ಕರ್ನಾಟಕದ ಸಾಂಸ್ಕೃತಿಕ ಹೆಮ್ಮೆಯಾಗಿದೆ. ಎಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು, ಹೃದಯಗಳನ್ನು ಜೋಡಿಸುವ ಸರ್ವ ಭಾವೈಕ್ಯತೆಯ ಮಹಾ ಸಂಕೇತವಾಗಿ ಈ ಆಚರಣೆ ಇಂದಿಗೂ, ಎಂದೆಂದಿಗೂ ಪ್ರಸ್ತುತ.

Share
Related Articles
ಅಂಕಣಸುದ್ದಿ

ಒಂದೇ ಒಂದು ಗುಂಡು ಹಾರಿಸದೆ ಮಾಯಾನಗರಿ ಮುಂಬೈ ಆಳಿದ ‘ಸುಲ್ತಾನ್’!

ಬಡತನದ ಕೂಲಿಯಿಂದ ಬಾಲಿವುಡ್ ಬೆರಗಾಗುವಂತೆ ಬೆಳೆದ 'ಹಾಜಿ ಮಸ್ತಾನ್' ಎಂಬ ಬ್ರಾಂಡ್ ಡಾನ್‌ನದ ರೋಚಕ ಕಥೆ...

ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...