Home ಸುದ್ದಿ ಮುಂಗಾರು ಮಾಯೆ , ಬೇಸಿಗೆ ಫಿರ್ ಆಯೆ!
ಸುದ್ದಿ

ಮುಂಗಾರು ಮಾಯೆ , ಬೇಸಿಗೆ ಫಿರ್ ಆಯೆ!

Share
Share

 

“ರೈತರ ಬದುಕು ದುಸ್ತರ, ಕುಡಿಯುವ ನೀರಿಗೆ ಹಾಹಾಕಾರ, ಪರಿಸರದ ಮೇಲಾಗುತ್ತಿರುವ ದಾಳಿಗೆ ಎಲಿನೊ ಎಫೆಕ್ಟ್ ಕಾರಣ ತಜ್ಞರ ಅಭಿಪ್ರಾಯ”

ಮರ್ಚೆಡ್ ಡೇಸ್ ವಿಶೇಷ ವರದಿ.

ಕಲ್ಯಾಣ ಕರ್ನಾಟಕ ಬ್ಯೂರೋ:

ರಾಜ್ಯದಲ್ಲಿ ಜೂನ್ ಆರಂಭದಲ್ಲೇ ಅಬ್ಬರಿಸಬೇಕಿದ್ದ ಮುಂಗಾರು ಮಳೆ ಸಂಪೂರ್ಣವಾಗಿ ಮಾಯವಾಗಿದೆ. ವಾತಾವರಣದಲ್ಲಿ ತಂಪಿನ ಆಂಶವೇ ಇಲ್ಲದಂತಾಗಿದ್ದು, ಕರಾವಳಿಯಿಂದ ಹಿಡಿದು ಕಲ್ಯಾಣ ಕರ್ನಾಟಕದ ಒಳನಾಡಿನವರೆಗೆ ಒಣ ಹವೆ ಮತ್ತು ಬಿಸಿ ಗಾಳಿ ಮುಂದುವರಿದಿದೆ. ಮುಂಗಾರಿನ ಆಗಮನದ ಬದಲು, ರಾಜ್ಯದಲ್ಲಿ ‘ಎರಡನೆಯ ಬೇಸಿಗೆ’ ಆರಂಭವಾಗಿದೆ ಎನ್ನುವ ಲಕ್ಷಣ ಅನಿಸುತ್ತಿದೆ ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲಿ ನಮ್ಮ ಭಾಗದಲ್ಲಂತೂ ಕಲ್ಯಾಣ ಕರ್ನಾಟಕದ ರಾಯಚೂರು, ಕೊಪ್ಪಳ, ಕಲಬುರಗಿ (ಗುಲ್ಬರ್ಗ), ಬಳ್ಳಾರಿ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಪ್ರತಿ ವರ್ಷಕ್ಕಿಂತಲೂ ಈ ವರ್ಷ ಅನುಭವಿಸಿದ ಬಿಸಿಲಿನ ಬೇಗೆಯ ಪಜೀತಿ ಯಾರಿಗೂ ಬೇಡ ಎನ್ನುವಂತಿತ್ತು.

ಆದರೆ, ಈಗ ಜೂನ್ ತಿಂಗಳಿನಲ್ಲೂ ಸೂರ್ಯನ ಪ್ರಖರತೆ ಕಡಿಮೆಯಾಗಿಲ್ಲ.

ಹವಾಮಾನ ತಜ್ಞರ ಪ್ರಕಾರ, ಹಿಂದೆ 2017 ರಲ್ಲಿ ಕಂಡುಬಂದಂತ ಅತ್ಯಂತ ಒಣ ಹಾಗೂ ವಿಕೋಪದ ಹವಾಮಾನ ಪರಿಸ್ಥಿತಿಯೇ ಈಗ 2027 ರ ಪುನರಾವರ್ತನೆಯಾಗುತ್ತಿದೆ. ಮೋಡಗಳು ಕರಗುತ್ತಲೇ ಇವೆ ಮಳೆಯ ಮುನ್ಸೂಚನೆಯೂ ಸಿಗುತ್ತಿಲ್ಲ.

ರಾಜ್ಯದ ಶೇಕಡಾ 90 ರಷ್ಟು ರೈತರು ಮುಂಗಾರು ಬಿತ್ತನೆಗಾಗಿ ಭೂಮಿ ಹದಗೊಳಿಸಿ, ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಕಲ್ಯಾಣ ಕರ್ನಾಟಕದ ಪ್ರಮುಖ ಮುಂಗಾರು ಬೆಳೆಗಳಾದ ಹತ್ತಿ, ಸಜ್ಜೆ, ಹೆಸರು ಹಾಗೂ ತೊಗರಿ ಬಿತ್ತನೆ ಮಾಡಲು ರೈತರು ತುದಿಗಾಲಿನಲ್ಲಿ ನಿಂತಿದ್ದರು.

ಕೆಲವು ಕಡೆಗಳಲ್ಲಿ ಮುಂಗಾರಿನ ಆರಂಭಿಕ ಹನಿಗಳನ್ನು ನಂಬಿ ಹಠಕ್ಕೆ ಬಿದ್ದು ಬಿತ್ತನೆ ಮಾಡಿದ ರೈತರ ಪರಿಸ್ಥಿತಿ ಈಗ ಅತ್ಯಂತ ದಯನೀಯವಾಗಿದೆ. ಮಳೆ ಬಾರದೆ ಭೂಮಿಯ ಉಷ್ಣಾಂಶ ಹೆಚ್ಚಾಗಿ, ಬಿತ್ತಿದ ಬೀಜಗಳು ಮೊಳಕೆಯೊಡೆಯುವ ಮುನ್ನವೇ ಭೂಮಿಯ ಒಡಲಲ್ಲೇ ಬತ್ತಿ ಹೋಗುತ್ತಿವೆ. “ಕೈಯಲ್ಲಿದ್ದ ಹಣ ಹಾಕಿ ಬೀಜ ಮತ್ತು ಗೊಬ್ಬರ  ಕೊಂಡೆವು, ಈಗ ಮಳೆಯೂ ಇಲ್ಲ, ಇತ್ತ ಬಿತ್ತಿದ ಬೀಜವೂ ದಕ್ಕುತ್ತಿಲ್ಲ” ಎಂದು ಅನ್ನದಾತರು ಕಣ್ಣೀರಿಡುತ್ತಿದ್ದಾರೆ.

ಈ ಭೀಕರ ಹವಾಮಾನ ಬದಲಾವಣೆಗೆ ಮತ್ತು ‘ಎಲಿನೊ ‘(El Niño) ಪ್ರಭಾವದ ತೀವ್ರತೆಗೆ ತಜ್ಞರು ನೇರವಾಗಿ ಬೆರಳು ತೋರುತ್ತಿರುವುದು ಸರ್ಕಾರಗಳ ಕಣ್ಣುಮುಚ್ಚಿ ಆಟ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಪರಿಸರ ನಾಶದ ಕಡೆಗೆ.

ರಾಷ್ಟ್ರೀಯ ಹೆದ್ದಾರಿ , ರೈಲ್ವೆ ಮಾರ್ಗಗಳ ವಿಸ್ತರಣೆ ಹಾಗೂ ವಿಮಾನ ನಿಲ್ದಾಣಗಳ ನಿರ್ಮಾಣ ಮಾಡಲು 1.73 /. ಲಕ್ಷಗಳಷ್ಟು ಎಕರೆ ಭೂಮಿಯನ್ನು ಟೆಂಡರ್‌ಗಳ ಹೆಸರಿನಲ್ಲಿ ಲಕ್ಷಾಂತರ ಹಸಿರು ಮರಗಳನ್ನು ಕತ್ತರಿಸಿ ಹಾಕಲಾಗಿದೆ.

ಗಿಡ-ಮರಗಳ ಈ ಮರಣಹೋಮದಿಂದಾಗಿ ಭೂಮಿಯ ತೇವಾಂಶ ಸಂಪೂರ್ಣ ನಾಶವಾಗಿದೆ. ತಜ್ಞರ ಅಂದಾಜಿನ ಪ್ರಕಾರ, ಈ ಅಭಿವೃದ್ಧಿ ಕಾರ್ಯಾಚರಣೆಗಳಿಂದಾಗಿ ಹಸಿರು ವಲಯ ತೀವ್ರವಾಗಿ ಕುಸಿದಿದ್ದು, ವಾತಾವರಣದ ಉಷ್ಣತೆ ಮಿತಿಮೀರಲು ಕಾರಣವಾಗಿದೆ.

ಸರ್ಕಾರಗಳು ಹಸಿರನ್ನು ಉಳಿಸುವುದನ್ನು ಬಿಟ್ಟು, ಅತಿ ಹೆಚ್ಚು ಶಾಖವನ್ನು ಹೊರಸೂಸುವ ದೊಡ್ಡ ದೊಡ್ಡ ಡಾಟಾ ಸೆಂಟರ್‌ಗಳು

ಅಣುಸ್ಥಾವರಗಳು ಹಾಗೂ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸುವುದರಲ್ಲೇ ನಿರತವಾಗಿವೆ. ಇವುಗಳಿಂದ ಹೊರಬರುವ ಅಪಾರ ಪ್ರಮಾಣದ ತಾಪಮಾನವು ಸ್ಥಳೀಯ ಹವಾಮಾನವನ್ನು ಮತ್ತಷ್ಟು ಬಿಗಡಾಯಿಸುತ್ತಿದೆ.

ಮುಂಗಾರು ಮಳೆ ಹೀಗೆಯೇ ಇನ್ನು ಎರಡು ತಿಂಗಳು ಕೈಕೊಟ್ಟರೆ, ಕೇವಲ ಕೃಷಿ ಕ್ಷೇತ್ರ ಮಾತ್ರವಲ್ಲದೆ ಇಡೀ ಸಮಾಜವೇ ಭೀಕರ ದುರಂತವನ್ನು ಎದುರಿಸಬೇಕಾಗುತ್ತದೆ. ಜನಸಾಮಾನ್ಯರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಸಿಗದೆ ತೀವ್ರ ಹಾಹಾಕಾರ ಸೃಷ್ಟಿಯಾಗಲಿದೆ.

ವಿದ್ಯುತ್ ಉತ್ಪಾದನೆ ಜಲವಿದ್ಯುತ್ ಸ್ಥಾವರಗಳ ಘಟಕಗಳು ನೀರಿನ ಕೊರತೆಯಿಂದಾಗಿ ಸಂಪೂರ್ಣ ಸ್ಥಗಿತಗೊಳ್ಳಲಿವೆ.

ಕೈಗಾರಿಕೆಗಳು ಕೈಗಾರಿಕಾ ಘಟಕಗಳಿಗೆ ನೀರಿನ ಪೂರೈಕೆ ಸ್ಥಗಿತಗೊಂಡು ಆರ್ಥಿಕತೆ ಕುಸಿಯಲಿದೆ. ಅಭಿವೃದ್ಧಿಯ ಹೆಸರಿನಲ್ಲಿ.

ಪ್ರಕೃತಿಯ ಸಮತೋಲನವನ್ನು ಕಸಿದುಕೊಂಡರೆ ಎಂತಹ ಭೀಕರ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂಬುದಕ್ಕೆ ಪ್ರಸ್ತುತ ಮುಂಗಾರು ಕೈಕೊಟ್ಟಿರುವುದೇ ಸಾಕ್ಷಿ. ಸರ್ಕಾರಗಳು ಈಗಲಾದರೂ ಎಚ್ಚೆತ್ತುಕೊಂಡು ಕೈಗಾರಿಕೆ ಹಾಗೂ ಮೂಲಸೌಕರ್ಯಗಳ ಜೊತೆಗೆ ಪರಿಸರ ಸಂರಕ್ಷಣೆಗೂ ಸಮಾನ ಆದ್ಯತೆ ನೀಡದಿದ್ದರೆ, ಕಲ್ಯಾಣ ಕರ್ನಾಟಕ ಮಾತ್ರವಲ್ಲದೆ ಇಡೀ ರಾಜ್ಯವೇ ಮರಭೂಮಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

Share
Related Articles
ಅಂಕಣಸುದ್ದಿ

ಒಂದೇ ಒಂದು ಗುಂಡು ಹಾರಿಸದೆ ಮಾಯಾನಗರಿ ಮುಂಬೈ ಆಳಿದ ‘ಸುಲ್ತಾನ್’!

ಬಡತನದ ಕೂಲಿಯಿಂದ ಬಾಲಿವುಡ್ ಬೆರಗಾಗುವಂತೆ ಬೆಳೆದ 'ಹಾಜಿ ಮಸ್ತಾನ್' ಎಂಬ ಬ್ರಾಂಡ್ ಡಾನ್‌ನದ ರೋಚಕ ಕಥೆ...

ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...