Home ಸುದ್ದಿ ಗಂಗಾವತಿ: ಶ್ರೀ ನಗರೇಶ್ವರ ದೇವಸ್ಥಾನದಲ್ಲಿ ವೈಭವದ ‘ಮಣಿದ್ವೀಪ ವರ್ಣನೆ’ ಸಮಾರೋಪ.
ಸುದ್ದಿ

ಗಂಗಾವತಿ: ಶ್ರೀ ನಗರೇಶ್ವರ ದೇವಸ್ಥಾನದಲ್ಲಿ ವೈಭವದ ‘ಮಣಿದ್ವೀಪ ವರ್ಣನೆ’ ಸಮಾರೋಪ.

Share
Share

 

ಮರ್ಚೆಡ್ ಡೇಸ್ ಸುದ್ದಿ.

ಗಂಗಾವತಿ: ಅಧಿಕ ಪುರುಷೋತ್ತಮ ಮಾಸದ ಪವಿತ್ರ ಸಂದರ್ಭದಲ್ಲಿ ನಗರದ ಶ್ರೀ ನಗರೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ತಿಂಗಳ ಕಾಲದ ಧಾರ್ಮಿಕ ಧಾರೆಗೆ ಭವ್ಯ ತೆರೆ ಬಿದ್ದಿದೆ. ಆರ್ಯವೈಶ್ಯ ಸಮಾಜದ ವತಿಯಿಂದ ಅತ್ಯಂತ ಭಕ್ತಿ-ಭಾವ ಮತ್ತು ಸಡಗರದಿಂದ ಹಮ್ಮಿಕೊಳ್ಳಲಾಗಿದ್ದ ‘ಮಣಿದ್ವೀಪ ವರ್ಣನೆ’ ಕಾರ್ಯಕ್ರಮವು.

ಸೋಮವಾರದಂದು ವಿಜೃಂಭಣೆಯ ಸಮಾರೋಪ ಸಮಾರಂಭದೊಂದಿಗೆ ಸಂಪನ್ನಗೊಂಡಿತು. ತಿಂಗಳ ಪೂರ್ತಿ ನಡೆದ ಈ ಆಧ್ಯಾತ್ಮಿಕ ಚಿಂತನೆಗೆ ಭಕ್ತ ಸಮೂಹ ಸಾಕ್ಷಿಯಾಯಿತು.

ಸಮಾರೋಪ ಸಮಾರಂಭದ ಅಂಗವಾಗಿ ಹಮ್ಮಿಕೊಂಡಿದ್ದ ಮಣಿದ್ವೀಪ ಪೂಜೆಯಲ್ಲಿ 33 ಮಂದಿ ಸುಮಂಗಲಿಯರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು. ಮಂದಿರದಲ್ಲಿ ಶ್ರೀ ಲಲಿತಾ ಪರಮೇಶ್ವರಿ ದೇವಿಯ ಆಕರ್ಷಕ ಭಾವಚಿತ್ರ ಹಾಗೂ ಕುಲದೇವಿ ಶ್ರೀ ವಾಸವಿ ಕನ್ಯಕಾ ಪರಮೇಶ್ವರಿಯ ಕಳಶಗಳನ್ನು ಪ್ರತಿಷ್ಠಾಪಿಸಿ ವಿಶೇಷ ಅಲಂಕಾರ ಮಾಡಲಾಗಿತ್ತು. ಮಣಿದ್ವೀಪ ವರ್ಣನೆಯ ಮಂತ್ರಪಠಣಗಳ ಪವಿತ್ರ ಘೋಷದ ನಡುವೆ, ದೇವಿಗೆ ಒಂಬತ್ತು ವಿಧದ ಪುಷ್ಪಗಳಿಂದ ವಿಶೇಷ ಅರ್ಚನೆ ಸಲ್ಲಿಸಿ, ಜಗನ್ಮಾತೆಯಾದ ಮಹಾಶಕ್ತಿಯನ್ನು ಆರಾಧಿಸಲಾಯಿತು.

ಕುಲ ಪುರೋಹಿತರಾದ ಶ್ರೀ ದಿಗಂಬರ್ ಭಟ್ ಜೋಶಿ ಅವರ ದಿವ್ಯ ನೇತೃತ್ವದಲ್ಲಿ ಇಡೀ ಧಾರ್ಮಿಕ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ಜರುಗಿದವು. ಇದೇ ಶುಭ ಸಂದರ್ಭದಲ್ಲಿ ಶ್ರೀ ನಗರೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವವನ್ನು ದೇವಸ್ಥಾನದ ಒಳಾಂಗಣದಲ್ಲಿ ಅತ್ಯಂತ ವೈಭವಯುತವಾಗಿ ನಡೆಸಲಾಯಿತು. ಭಕ್ತರ ಭಜನೆ ಮತ್ತು ನಾಮಸ್ಮರಣೆಯ ಜಯಘೋಷಗಳು ಮಂದಿರದಲ್ಲಿ ಭಕ್ತಿಯ ರಸದೌತಣವನ್ನೇ ಉಣಬಡಿಸಿದವು. ಕಾರ್ಯಕ್ರಮದ ಕೊನೆಯಲ್ಲಿ ನೆರೆದಿದ್ದ ನೂರಾರು ಭಕ್ತಾದಿಗಳಿಗೆ ಮಹಾಪ್ರಸಾದ ವಿತರಣೆ ಮಾಡಲಾಯಿತು.

ಈ ಸುದೀರ್ಘ ಧಾರ್ಮಿಕ ಉತ್ಸವದ ಯಶಸ್ಸಿನ ಹಿಂದೆ ನಗರದ ವಿವಿಧ ಸಂಘಟನೆಗಳ ಪರಿಶ್ರಮ ಅಡಗಿದೆ. ಆರ್ಯವೈಶ್ಯ ಸಮಾಜ, ವಾಸವಿ ಯುವಜನ ಸಂಘ, ವಾಸವಿ ಮಹಿಳಾ ಸಂಘ ಹಾಗೂ ಅವೋಪ  ಗಂಗಾವತಿ ಘಟಕದ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಶ್ರಮವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಶ್ರೀ ವಾಸವಿ ಕನ್ಯಕಾ ಪರಮೇಶ್ವರಿ ದೇವಿ ಹಾಗೂ ಶ್ರೀ ನಗರೇಶ್ವರ ಸ್ವಾಮಿಯ ಕೃಪಾಶೀರ್ವಾದ ಇಡೀ ಸಮಾಜದ ಮೇಲಿರಲಿ ಎಂದು ಈ ಸಂದರ್ಭದಲ್ಲಿ ಪ್ರಾರ್ಥಿಸಲಾಯಿತು.

Share
Related Articles
ಅಂಕಣಸುದ್ದಿ

ಒಂದೇ ಒಂದು ಗುಂಡು ಹಾರಿಸದೆ ಮಾಯಾನಗರಿ ಮುಂಬೈ ಆಳಿದ ‘ಸುಲ್ತಾನ್’!

ಬಡತನದ ಕೂಲಿಯಿಂದ ಬಾಲಿವುಡ್ ಬೆರಗಾಗುವಂತೆ ಬೆಳೆದ 'ಹಾಜಿ ಮಸ್ತಾನ್' ಎಂಬ ಬ್ರಾಂಡ್ ಡಾನ್‌ನದ ರೋಚಕ ಕಥೆ...

ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...