ಮರ್ಚೆಡ್ ಡೇಸ್ ಸುದ್ದಿ
ಗಂಗಾವತಿ:ಡಿಜಿಟಲ್ ಯುಗದ ಅತ್ಯಂತ ಆಕರ್ಷಕ ಮತ್ತು ಪ್ರಚಲಿತ ವಿಷಯವಾದ ಕ್ರಿಪ್ಟೋಕರೆನ್ಸಿ ಹಾಗೂ ಬಿಟ್ಕಾಯಿನ್ ಕುರಿತು ನಡೆಸಿದ ಅಪರೂಪದ ಸಂಶೋಧನೆಗಾಗಿ ಗಂಗಾವತಿ ತಾಲೂಕಿನ ಶ್ರೀರಾಮನಗರದ ಸಿ.ಎನ್.ಆರ್ ಸರ್ಕಾರಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಎಸ್. ಕರಿ ಗೂಳಿ ಅವರಿಗೆ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಪಿಎಚ್.ಡಿ (ಡಾಕ್ಟರ್ ಆಫ್ ಫಿಲಾಸಫಿ) ಪದವಿಯನ್ನು ಪ್ರಕಟಿಸಿದೆ.
ಪ್ರೊ. ಎಸ್. ಕರಿ ಗೂಳಿ ಅವರು “ಆನ್ ಎಂಪcontextಿರಿಕಲ್ ಸ್ಟಡಿ ಆನ್ ಕ್ರಿಪ್ಟೋಕರೆನ್ಸಿ ವಿಥ್ ಸ್ಪೆಷಲ್ ರೆಫರೆನ್ಸ್ ಟು ಬಿಟ್ ಕಾಯಿನ್ ಅಂಡ್ ಈಥೇರಿಯಂ” (An Empirical Study on Cryptocurrency with Special Reference to Bitcoin and Ethereum) ಎಂಬ ಅತ್ಯಂತ ಪ್ರಸ್ತು ಹಾಗೂ ಸವಾಲಿನ ವಿಷಯದ ಕುರಿತು ಮಹಾಪ್ರಬಂಧವನ್ನು ಮಂಡಿಸಿದ್ದರು. ಈ ವಿಷಯದ ಕುರಿತು ಇದೇ ಮೊದಲ ಬಾರಿಗೆ ಇಷ್ಟು ಆಳವಾದ ಸಂಶೋಧನೆ ನಡೆಸಿ ವಿಶ್ವವಿದ್ಯಾಲಯಕ್ಕೆ ವರದಿ ಸಲ್ಲಿಸಲಾಗಿತ್ತು. ಇವರ ವರದಿಯನ್ನು ಪುರಸ್ಕರಿಸಿ, ವಿಶ್ವವಿದ್ಯಾಲಯದ ಕುಲಪತಿಗಳು ಹಾಗೂ ಸಿಂಡಿಕೇಟ್ ಸಭೆಯು ಇವರಿಗೆ ಡಾಕ್ಟರ್ ಆಫ್ ಫಿಲಾಸಫಿ ಪದವಿ ಪ್ರದಾನ ಮಾಡಲು ಅಧಿಕೃತ ಒಪ್ಪಿಗೆ ನೀಡಿದೆ.
ಈ ಮಹತ್ವದ ಸಂಶೋಧನೆಗೆ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಪ್ರಖ್ಯಾತ ಪ್ರಾಧ್ಯಾಪಕರಾದ ಪ್ರೊ. ಡಾ. ಸಿ. ಎಂ. ಜಿಲಾನ್ ಬಾಷಾ ವಿ. ಅವರು ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿ, ಯಶಸ್ವಿ ಸಂಶೋಧನೆಗೆ ಸೂಕ್ತ ದಾರಿ ತೋರಿಸಿದ್ದಾರೆ.
ಬಿಟ್ಕಾಯಿನ್ನಂತಹ ಜಾಗತಿಕ ವಿಷಯದಲ್ಲಿ ಪಿಎಚ್.ಡಿ ಡಾಕ್ಟರೇಟ್ ಪದವಿ ಮುಡಿಗೇರಿಸಿಕೊಂಡ ಪ್ರೊ. ಎಸ್. ಕರಿ ಗೂಳಿ ಅವರಿಗೆ ನಾಡಿನ ವಿವಿಧ ವಲಯಗಳಿಂದ ಪ್ರೀತಿಯ ವಿದ್ಯಾರ್ಥಿಗಳು ಅಭಿನಂದನೆಗಳು ಸಲ್ಲಿಸಿದರು.
ಕಿಷ್ಕಿಂಧಾವಾಣಿ ಕನ್ನಡ ದಿನಪತ್ರಿಕೆಯ ಸಂಪಾದಕರಾದ. ಕೆ. ನಿಂಗಜ್ಜ.
ಮರ್ಚೆಡ್ ಡೇಸ್. ಸಂಪಾದಕರಾದ. ತಾಯಪ್ಪ ಮರ್ಚಡ್ .
ಎಲ್.ಐ.ಸಿ ರಾಮಣ್ಣ ಕುರಿ.
ನ್ಯಾಯಾಲಯ ಇಲಾಖೆಯ ತಿಮ್ಮಣ್ಣ ಬಳ್ಳಾರಿ
ಡಾ. ತಿಪ್ಪೇಸ್ವಾಮಿ ಮತ್ತು ಪ್ರೀತಿಯ ವಿದ್ಯಾರ್ಥಿ ಮಿತ್ರರು
ಕ್ರಿಪ್ಟೋಕರೆನ್ಸಿ ಲೋಕದ ಅಗ್ರಗಣ್ಯ ನಾಣ್ಯಗಳಾದ ಬಿಟ್ಕಾಯಿನ್ ಮತ್ತು ಈಥೇರಿಯಂ ಕುರಿತು ಶೈಕ್ಷಣಿಕ ವಲಯದಲ್ಲಿ ನಡೆದಿರುವ ಈ ಸಂಶೋಧನೆಯು ಮುಂದಿನ ದಿನಗಳಲ್ಲಿ ತಂತ್ರಜ್ಞಾನ ಮತ್ತು ವಾಣಿಜ್ಯ ರಂಗದ ವಿದ್ಯಾರ್ಥಿಗಳಿಗೆ ದಾರಿದೀಪವಾಗಲಿದೆ.