ಗಂಗಾವತಿ: ವಾಹನಗಳ ಸುದೀರ್ಘ ಬಾಳಿಕೆ ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು. ಜುಲೈ ನಗರದಲ್ಲಿರುವ ರಿಲಯನ್ಸ್ ಪೆಟ್ರೋಲ್ ಬಂಕ್‌ನಲ್ಲಿ ಇಂಧನ ಹಾಕಿಸುವ ಗ್ರಾಹಕರಿಗೆ ‘ನೈಟ್ರೋಜನ್ ಗಾಳಿ’ ತುಂಬಿಸುವ ಸೌಲಭ್ಯವನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿದೆ.
ಸಾಮಾನ್ಯವಾಗಿ ಟೈರ್ ಒತ್ತಡವನ್ನು ನಿರ್ವಹಿಸಲು ನೈಟ್ರೋಜನ್ ಪ್ರಸ್ತುತ ಬಳಸುತ್ತಿದ್ದಾರೆ ಬೇರೆ ಕಡೆ ಪ್ರತಿ ಟೈರ್‌ಗೆ 10 ಇಂದ 20 ರೂಪಾಯಿವರೆಗೂ ಶುಲ್ಕ ವಿಧಿಸಲಾಗುತ್ತದೆ. ಆದರೆ, ಸಾರ್ವಜನಿಕರ ಹಿತದೃಷ್ಟಿಯಿಂದ ಈ ಪೆಟ್ರೋಲ್ ಬಂಕ್‌ನಲ್ಲಿ ಈ ವಿಶೇಷ ಸೇವೆಯನ್ನು ಉಚಿತವಾಗಿ ಒದಗಿಸುತ್ತಿರುವುದು ವಾಹನ ಸವಾರರ ಮೆಚ್ಚುಗೆಗೆ ಪಾತ್ರವಾಗಿದೆ.
ವಾಹನಗಳ ನಿರ್ವಹಣೆಯಲ್ಲಿ ಟೈರ್ ಒತ್ತಡವು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಸಾಮಾನ್ಯ ಗಾಳಿಗಿಂತ ನೈಟ್ರೋಜನ್ ಬಳಕೆಯಿಂದ
ಸಾಮಾನ್ಯ ಗಾಳಿಯಲ್ಲಿ ತೇವಾಂಶ ಇರುವುದರಿಂದ ಟೈರ್ ಮತ್ತು ರಿಮ್‌ಗಳಲ್ಲಿ ತುಕ್ಕು ಹಿಡಿಯುವ ಸಾಧ್ಯತೆ ಇರುತ್ತದೆ. ನೈಟ್ರೋಜನ್ ಒಣಗಿದ ಅನಿಲವಾಗಿರುವುದರಿಂದ ಟೈರ್ ದೀರ್ಘಕಾಲ ಬಾಳಿಕೆ ಬರುತ್ತದೆ.
ನೈಟ್ರೋಜನ್ ಅಣುಗಳು ದೊಡ್ಡದಾಗಿರುವುದರಿಂದ ಅವು ಟೈರ್‌ನಿಂದ ಸುಲಭವಾಗಿ ಸೋರುವುದಿಲ್ಲ. ತಾಪಮಾನ ಏರಿಕೆಯಾದರೂ ಟೈರ್‌ನ ಒತ್ತಡ ಸ್ಥಿರವಾಗಿರುತ್ತದೆ.
ಹೆಚ್ಚಿನ ಮೈಲೇಜ್ ಮತ್ತು ಸರಿಯಾದ ಒತ್ತಡವು ಇಂಧನ ಮೈಲೇಜ್ ಅನ್ನು ಸುಧಾರಿಸುತ್ತದೆ. ಅಲ್ಲದೆ, ಟೈರ್ ಅತಿಯಾಗಿ ಬಿಸಿಯಾಗುವುದನ್ನು ತಡೆಯುವುದರಿಂದ ದೂರದ ಪ್ರಯಾಣದಲ್ಲಿ ಟೈರ್ ಸಿಡಿಯುವ ಅಪಾಯವನ್ನು ತಗ್ಗಿಸುತ್ತದೆ.
ಟೈರ್‌ಗಳ ಆಯಸ್ಸು ಹೆಚ್ಚಾಗುವುದರಿಂದ ಪದೇ ಪದೇ ಟೈರ್ ಬದಲಿಸುವ ಅಗತ್ಯವಿರುವುದಿಲ್ಲ, ಇದು ತ್ಯಾಜ್ಯವನ್ನು ಕಡಿಮೆ ಮಾಡಲು ಪರೋಕ್ಷವಾಗಿ ಸಹಕರಿಸುತ್ತದೆ.
ವಾಹನ ಸವಾರರು ತಮ್ಮ ವಾಹನಗಳ ಸುರಕ್ಷಿತ ಪ್ರಯಾಣಕ್ಕಾಗಿ ಮತ್ತು ಟೈರ್ ನಿರ್ವಹಣೆಗಾಗಿ ಗಂಗಾವತಿಯ ಜುಲೈ ನಗರದಲ್ಲಿರುವ ರಿಲಯನ್ಸ್ ಪೆಟ್ರೋಲ್ ಬಂಕ್‌ನ ಈ ಉಚಿತ ಸೇವೆಯ ಸದುಪಯೋಗ ಪಡೆದುಕೊಳ್ಳಲು ವಾಹನ ಮಾಲೀಕರ ಗಮನಕ್ಕೆ.