Home ಅಂಕಣ ನೇರಳೆ ಹಣ್ಣು ಸಿಹಿ-ಒಗರು ನೆನಪು: ಬಾಲ್ಯದ ಮಡಿಲಲ್ಲಿ ಅಡಗಿದೆ ಆರೋಗ್ಯದ ಗುಟ್ಟು!
ಅಂಕಣಸುದ್ದಿ

ನೇರಳೆ ಹಣ್ಣು ಸಿಹಿ-ಒಗರು ನೆನಪು: ಬಾಲ್ಯದ ಮಡಿಲಲ್ಲಿ ಅಡಗಿದೆ ಆರೋಗ್ಯದ ಗುಟ್ಟು!

Share
Share

ಬಿಸಿಲ ಝಳವನ್ನ ತಣಿಸುತ್ತಾ, ಜೂನ್‌ ತಿಂಗಳ ಅಲ್ಲಲ್ಲಿ ಮೋಡ ಕವಿದ ವಾತಾವರಣ ಮೊದಲ ಮಳೆಗಾಳಿ ಬೀಸುತ್ತಿದ್ದಂತೆಯೇ ಮಾರುಕಟ್ಟೆಯ ಮತ್ತು ಹಳ್ಳಿ, ನಗರ ಮೂಲೆ ಮೂಲೆಗಳಲ್ಲಿ ಒಂದು ವಿಶೇಷವಾದ ಕಣ್ಣು ಕೋರಿಸುವ ನೀಲಿ ಜಂಬು ನಾಟಿ ,ನೆರಳೆ ಹಣ್ಣಿನ ಸುವಾಸನೆ ಮೂಗಿಗೆ ತಾಗುತ್ತದಲ್ಲವೇ? ಅದುವೇ ಮಣ್ಣಿನ ಮಗ ‘ನೇರಳೆ ಹಣ್ಣಿನ’ ಪರಿಮಳ!

ಇಂದು  ಮಾರುಕಟ್ಟೆಯಲ್ಲಿ  ದುಬಾರಿಯಾದ  ಬೇರೆ ಕಡೆಯಿಂದ  ಅಮಾದ ಮಾಡಿಕೊಳ್ಳುತ್ತಿರುವ. ಹಣ್ಣುಗಳು, ಪ್ಯಾಕೆಟ್ ಬಿಸ್ಕೆಟ್ಟುಗಳು ಎಷ್ಟೇ ಸಿಗಲಿ, ಶಾಲೆಯ ಗೇಟಿನ ಮುಂದೆ ಓರ್ವ ಅಜ್ಜಿ ಪೇಪರ್ ಕೋನಗಳಲ್ಲಿ ಉಪ್ಪು-ಖಾರ ಸವರಿ ಕೊಡುತ್ತಿದ್ದ ಆ ನೇರಳೆ ಹಣ್ಣಿನ ರುಚಿಗೆ ಸರಿ ಸಾಟಿ ಉಂಟೇ? ಎಂದು ಹಿರಿಯ ಪತ್ರಕರ್ತ ಕೆ. ನಿಂಗಜ್ಜ .ಅವರು ಈ ವಿಷಯ ಹೇಳಲಾರಂಬಿಸಿದರು.

ಅವರ ಜೊತೆ ಅನ್ಯ ಕಾರ್ಯ ನಿಮಿತ್ಯ ಆಕಸ್ಮಿಕವಾಗಿ ಆನೆಗುಂದಿಯ ಹಿರಿಯ ಪ್ರಾಥಮಿಕಗೆ ಶಾಲೆಗೆ ಭೇಟಿ ನೀಡಿದಾಗ ಹಂಚಿಕೊಂಡ ನೆನಪುಗಳು, ಇಂದಿನ ಗಡಿಬಿಡಿಯ ತಾಂತ್ರಿಕ ಯುಗದಲ್ಲಿ ಎಂತಹ ಸುಂದರ ಅರಿವನ್ನು ಮೂಡಿಸುತ್ತವೆ ನೋಡಿ.

ನಗರದಲ್ಲಿ ಐದು ರೂಪಾಯಿಗೆ ಏನು ಸಿಗುತ್ತೆ? ಆದರೆ ನಮ್ಮ ಹಳ್ಳಿಯ ಸೊಗಡಿನಲ್ಲಿ, ಮರದಿಂದ ನೇರವಾಗಿ ಕಿತ್ತಿ ತಂದ ಹಣ್ಣುಗಳನ್ನು ಕೇವಲ ಐದು, ಹತ್ತು ರೂಪಾಯಿಗೆ ಸವಿಯುವ ಆ ಸೌಭಾಗ್ಯವೇ ಬೇರೆ!”

ಈ ಮಾತು ಕೇವಲ ಒಂದು ಲಘು ಮಾತುಗಳಲ್ಲ, ಇದು ನಾವು ಕಳೆದುಕೊಳ್ಳುತ್ತಿರುವ ಹಳ್ಳಿಯ ಸರಳತೆ ಮತ್ತು ಜೀವನದ ಮೌಲ್ಯಗಳ ಸಂಕೇತ.

ಆ ದಿನಗಳ ನೇರಳೆ ಹಣ್ಣಿನ ಸವಿಯಲ್ಲಿ ಬರಿ ರುಚಿ ಇರಲಿಲ್ಲ, ಗೆಳೆಯ, ಗೆಳತಿಯರೊಂದಿಗೆ ಶಾಲೆಯ ಆವರಣದಲ್ಲಿ ಕುಳಿತು ಹಂಚಿ ತಿಂದ ಬಾಲ್ಯದ ಆತ್ಮೀಯತೆ ಇತ್ತು.

ನೇರಳೆ ಕೇವಲ ಬಾಯಿಗೆ ರುಚಿ ಮಾತ್ರವಲ್ಲ, ಇದು ನಿಸರ್ಗ ನಮಗೆ ಕರುಣಿಸಿರುವ ನೇರಳೆ ಹಣ್ಣು ಆರೋಗ್ಯದ ‘ಬೆಸ್ಟ್ ಫ್ರೆಂಡ್’ ಎನ್ನಬಹುದು.

ಇಂದಿನ ಯುವತಿಯರು ಮತ್ತು ಮಹಿಳೆಯರಲ್ಲಿ ಸಾಮಾನ್ಯವಾದ ರಕ್ತಹೀನತೆಯ ಸಮಸ್ಯೆಯನ್ನು ದೂರ ಮಾಡಲು, ಹಿಮೋಗ್ಲೋಬಿನ್ ಹೆಚ್ಚಿಸಲು ನೇರಳೆ ಹಣ್ಣಿನ ಕಬ್ಬಿನಾಂಶ ಅದ್ಭುತವಾಗಿ ಕೆಲಸ ಮಾಡುತ್ತದೆ.

ವಿಟಮಿನ್ ಸಿ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳ ಆಗರವೇ ಈ ಹಣ್ಣು. ಇದು ರಕ್ತವನ್ನು ಶುದ್ಧೀಕರಿಸಿ, ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.

ಉಪ್ಪು ಬೆರೆಸಿ ತಿನ್ನುವ ನೇರಳೆ ಹಣ್ಣು ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ.

ಇದರ ಬೀಜದ ಪುಡಿಯು ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸುವಲ್ಲಿ ಔಷಧಿಯಂತೆ ಕೆಲಸ ಮಾಡುತ್ತದೆ.

ಇದರಲ್ಲಿರುವ ಪೊಟ್ಯಾಸಿಯಮ್ ಅಧಿಕ ರಕ್ತದೊತ್ತಡವನ್ನು ತಹಬಂದಿಯಲ್ಲಿಡಲು ನೆರವಾಗುತ್ತದೆ.

ನಮ್ಮ ನಾಲಿಗೆಯನ್ನು ನೇರಳೆ ಬಣ್ಣಕ್ಕೆ ತಿರುಗಿಸಿ, ಗೆಳೆಯ, ಗೆಳತಿಯರೊಂದಿಗೆ ನಗುತ್ತಾ ಹಂಚಿಕೊಂಡ ಆ ದಿನಗಳ ನೆನಪೇ ಒಂದು ರೋಮಾಂಚನ. ಮರಗಳನ್ನು ಹತ್ತಿ ಹಣ್ಣುಗಳನ್ನು ಕಿತ್ತಿ ತರುವುದು ಕೇವಲ ತಿನ್ನುವ ಕ್ರಿಯೆಯಾಗಿರಲಿಲ್ಲ; ಅದೊಂದು ಸಾಮಾಜಿಕ ಸಂಭ್ರಮವಾಗಿತ್ತು.

ಆಧುನಿಕತೆಯ ಭರಾಟೆಯಲ್ಲಿ ನಾವು ನಾಲಿಗೆ ರುಚಿಗಾಗಿ ಫಾಸ್ಟ್ ಫುಡ್ ಮತ್ತು ಜಂಕ್ ಫುಡ್, ಪ್ಯಾಕ್ ಮಾಡಿದ ಫುಡ್‌ಗಳಿಗೆ ಮೊರೆ ಹೋಗುತ್ತಿದ್ದೇವೆ. ಆದರೆ, ಆನೆಗುಂದಿಯಂತಹ ಸಣ್ಣ ಹಳ್ಳಿಯಂದಲ್ಲದೆ ದೇಶದ ಬಹುತೇಕ ಹಳ್ಳಿಯಲ್ಲಿ ಇಂದಿಗೂ ಉಳಿದುಕೊಂಡಿರುವ ಇಂತಹ ನೈಸರ್ಗಿಕ ಹಣ್ಣುಗಳ ಸೇವನೆ ಮಾಡುತ್ತಿದ್ದಾರೆ.

ನೋಡಿ, ಪ್ರಕೃತಿ ನಮಗೆ ಕೊಟ್ಟಿರುವ ಈ ಅಮೂಲ್ಯ ಕೊಡುಗೆಯನ್ನು ಸವಿಯುತ್ತಾ, ಮರೆಯಾದ ಬಾಲ್ಯವನ್ನು ಮತ್ತೆ ನೆನಪಿಸಿಕೊಳ್ಳೋಣ. ನಮ್ಮ ಸುತ್ತಮುತ್ತ ಗಾಡಿ ಮೇಲೆ ಮಾರುತ್ತಿರುತ್ತಾರೆ.  ನೇರಳೆ ಹಣ್ಣನ್ನು ಸವಿಯುತ್ತಾ, ಆರೋಗ್ಯವಂತರಾಗೋಣ. ಬನ್ನಿ, ಮತ್ತೊಮ್ಮೆ ನಮ್ಮ ಬಾಲ್ಯದ ಆ ಸಿಹಿ-ಒಗರು ನೆನಪಿಗೆ ಜೈ ಎನ್ನೋಣ!

ವಿಶೇಷ ಲೇಖನ:

ತಾಯಪ್ಪ ಮರ್ಚೆಡ್.

ಪತ್ರಕರ್ತರು ಗಂಗಾವತಿ.

 

Share
Related Articles
ಅಂಕಣಸುದ್ದಿ

ಒಂದೇ ಒಂದು ಗುಂಡು ಹಾರಿಸದೆ ಮಾಯಾನಗರಿ ಮುಂಬೈ ಆಳಿದ ‘ಸುಲ್ತಾನ್’!

ಬಡತನದ ಕೂಲಿಯಿಂದ ಬಾಲಿವುಡ್ ಬೆರಗಾಗುವಂತೆ ಬೆಳೆದ 'ಹಾಜಿ ಮಸ್ತಾನ್' ಎಂಬ ಬ್ರಾಂಡ್ ಡಾನ್‌ನದ ರೋಚಕ ಕಥೆ...

ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...