Home ಸುದ್ದಿ ವಿಶ್ವ ಬಂಜಾರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದಲ್ಲಿ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವ್ ನಾಯಕ ಅಭಿಪ್ರಾಯ
ಸುದ್ದಿ

ವಿಶ್ವ ಬಂಜಾರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದಲ್ಲಿ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವ್ ನಾಯಕ ಅಭಿಪ್ರಾಯ

Share
Share

 

 

ಲಂಬಾಣಿ ಜನಾಂಗದ ಸಂಸ್ಕೃತಿ ಮತ್ತು ಪರಂಪರೆ ಶ್ರೀಮಂತವಾಗಿದೆ

ಮರ್ಚೇಡ್ ಡೇಸ್ ಸುದ್ದಿ.

ಕಲಬುರಗಿ: ಭಾರತ ಮತ್ತು ಕರ್ನಾಟಕದಲ್ಲಿ ಲಂಬಾಣಿ ಜನಾಂಗದ ಸಂಸ್ಕೃತಿ ಮತ್ತು ಪರಂಪರೆ ಶ್ರೀಮಂತಿಕೆಯಿAದ ಕೂಡಿದೆ. ಕಾಶ್ಮೀರದಿಂದ ಕನ್ಯಾ ಕುಮಾರಿಯವರೆಗೆ ವಿಶಿಷ್ಟ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಹಿರಿಮೆಗೆ ಬಂಜಾರ ಸಮುದಾಯ ಅಪಾರ ಕೊಡುಗೆ ನೀಡಿದೆ ಎಂದು ಎಂದು ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವ್ ನಾಯಕ ಅಭಿಪ್ರಾಯಪಟ್ಟರು.

ಗುಲಬರ್ಗಾ ವಿಶ್ವವಿದ್ಯಾಲಯದ ಸಂತ ಶ್ರೀ ಸೇವಾಲಾಲ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಬೆಂಗಳೂರು ಹಾಗೂ ಬಂಜಾರಾ ಲೋಕ ಕಲಾ ಸಂಘಟನೆ ಇವುಗಳ ಸಹಯೋಗದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ ಎರಡು ದಿನಗಳ ವಿಶ್ವ ಬಂಜಾರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ನಂತರ ಸೇವಾಲಾಲ, ಡಾ. ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಮಾತನಾಡಿ ಲಂಬಾಣಿ ಜನಾಂಗದ ಇತಿಹಾಸ ಮತ್ತು ಸಂಸ್ಕೃತಿ ವೈವಿಧ್ಯತೆಯಿಂದ ಕೂಡಿದ್ದು ಭಾಷೆ ಕೇವಲ ಮೌಖಿಕವಾಗಿ ಬೆಳೆದಿದೆ. ಅವರ ಆಚಾರ, ವಿಚಾರ, ಪದ್ಧತಿ, ಉಡುಗೆ, ತೊಡುಗೆಗಳು ವಿಭಿನ್ನ ಸಾಂಸ್ಕೃತಿಕ ಇತಿಹಾಸವನ್ನು ಹೊಂದಿವೆ. ಅವುಗಳನ್ನು ಚಾರಿತ್ರಿಕವಾಗಿ ದಾಖಲಿಸುವ ಕೆಲಸವಾಗಬೇಕಿದೆ ಎಂದರು.

ದೇಶದಲ್ಲಿ ರಾಥೋಡ್, ನಾಯಕ್, ಚೌವಾಣ, ಜಾದವ್, ಲಬಾನ, ಗೋರಮಾಟಿ ಹೀಗೆ ೯೨ ಪಂಗಡಗಳ ಬಂಜಾರ (ಲಂಬಾಣಿ) ಸಮುದಾಯವಿದೆ. ಬಸವಣ್ಣನವರ ಕಾಯಕವೇ ಕೈಲಾಸ ತತ್ವವನ್ನು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಸ್ವಾಭಿಮಾನದಿಂದ ಬದುಕುತ್ತಿರುವ ಜನಸಮೂಹವಿದು. ಬಿಳಿ ಮತ್ತು ಕೆಂಪು ವಸ್ತçಗಳನ್ನು ಶಾಂತಿ ಮತ್ತು ಕ್ರಾಂತಿಯ ತ್ಯಾಗದ ಸಂಕೇತವಾಗಿ ಧರಿಸುವ ಮೂಲಕ ಜಗತ್ತಿಗೆ ಶಾಂತಿ ಮತ್ತು ತ್ಯಾಗದ ಮೌಲ್ಯಗಳನ್ನು ಬಿತ್ತುತ್ತಿವೆ. ಸರಳ ಜೀವನ, ತಾಂಡಾಗಳ ನಿರ್ಮಿಸಿ ಹೃದಯವಂತಿಕೆಯಿದ ಬದುಕುತ್ತಿರುವ ಲಂಬಾಣಿ ಜನಾಂಗ ಭಿಕ್ಷೆ ಬೇಡದ ಸ್ವಾಭಿಮಾನದಿಂದ ದುಡಿದು ಬದುಕುತ್ತಿರುವ ಸಮುದಾಯ ಎಂದು ವಿವರಿಸಿದರು.

ಮಾಜಿ ಸಂಸದ ಡಾ. ಉಮೇಶ್ ಜಾಧವ ಮಾತನಾಡಿ ವಿಶ್ವದ ನಾನಾ ಕಡೆಗಳಲ್ಲಿ ಲಂಬಾಣಿ ನೆಲೆಸಿರುವ ಸಮುದಾಯ. ಅಲೆಮಾರಿಗಳಾಗಿ ಕರ್ನಾಟಕ, ಗುಜರಾತ್, ರಾಜಸ್ಥಾನ, ಮಹಾರಾಷ್ಟç, ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ನೆಲೆಸಿದ್ದಾರೆ. ಮೂಲತಃ ರಾಜಸ್ಥಾನ ಮತ್ತು ಗುಜರಾತ್ ಮೂಲದ ಇವರು ಲಂಬಾಣಿ ಭಾಷೆ, ವೇಷ, ಸಂಸ್ಕೃತಿ ಆಚರಿಸುವ ಸಮುದಾಯ. ಲಿಪಿಯಿಲ್ಲದ ಭಾಷೆ ಇವರದಾಗಿದೆ. ನಾನಾ ಕಡೆ ತಾಂಡಾಗಳಲ್ಲಿ ವಾಸವಿದ್ದು, ವ್ಯಾಪಾರ, ಕೃಷಿ, ಪಶುಸಂಗೋಪನೆ ಕೆಲಸದಿಂದ ಬದುಕು ಸಾಗಿಸುತ್ತಿರುವ ಜನಾಂಗದ ಆರಾಧೈ ದೈವ ಮತ್ತು ಧಾರ್ಮಿಕ ಗುರು ಸಂತ ಶ್ರೀ ಸೇವಾಲಾಲ್ ಮಹಾರಾಜ್ ಆಗಿದ್ದಾರೆ. ಸಾಂಸ್ಕೃತಿಕ ಶ್ರೀಮಂತಿಕೆಗೆ ಹೆಸರಾದ ಬಂಜಾರ ಸಮುದಾಯವನ್ನು ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಬೆಳವಣಿಗೆಗೆ ಸರ್ಕಾರ ಆಸಕ್ತಿ ವಹಿಸಬೇಕು ಎಂದರು.

ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ್ ಎಸ್ ಉಡಿಕೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ ಬಂಜಾರ ಸಾಹಿತ್ಯ ಮತ್ತು ಸಂಸ್ಕೃತಿಯ ಇತ್ತೀಚಿನ ಸ್ಥತಿಗತಿ ಕುರಿತ ಸಮ್ಮೇಳನದ ಬಾಗವಾಗಿ ಲಂಬಾಣಿ ಜನಾಂಗದ ಇತಿಹಾಸ ಮತ್ತು ಸ್ಥಿತಿಗತಿಗಳ ಚಿಂತನೆ ಮತ್ತು ಮಂಥನದಿAದ ಉತ್ತಮ ಸಂದೇಶದಿದ ಬದಲಾವಣೆ ಸಾಧ್ಯ. ಸಮುದಾಯದ ಪರಂಪರೆ, ಸಂಸ್ಕೃತಿ ಮತ್ತು ಮಹಾನ್ ವ್ಯಕ್ತಿಗಳ ವಿಚಾರಗಳಿಂದ ಸಮಕಾಲೀನ ಅಧ್ಯಯನ ಮತ್ತು ಚರ್ಚೆಗಳಿಂದ ವೈಜ್ಞಾನಿಕ ಸಂಶೋಧನೆಗೆ ಹೆಚ್ಚು ಪ್ರೋತ್ಸಾಹ ಸಿಗುತ್ತದೆ. ಮಹಾನ್ ವ್ಯಕ್ತಿಗಳ ಪೀಠಗಳು ಶೈಕ್ಷಣಿಕ ಚಟುವಟಿಕೆ ನಡೆಸಲು ಸರ್ಕಾರದ ಸ್ಪಂದನೆ ಮತ್ತು ಆರ್ಥಿಕ ನೆರವು ಅಗತ್ಯ. ನಿರಂತರ ಅಧ್ಯಯನ, ಸರ್ಟಿಫಿಕೇಟ್ ಕೋರ್ಸು ಆರಂಭ, ದಾನಿಗಳ ನೆರವಿನಿಂದ ರೇಡಿಯೋ ಪ್ರೋಗ್ರಾಮ್, ವರ್ಚುವಲ್ ಥಿಯೇಟರ್ ಚರ್ಚೆ, ನಿಯೋಜನೆ ಆಧಾರಿತ ವಿದ್ಯಾರ್ಥಿ ವೇತನ ನೀಡುವ ಮೂಲಕ ವಿಶೇಷ ಮಹತ್ವ ನೀಡಿದಂತಾಗುತ್ತದೆ ಎಂದರು.

ಪೊಹ್ರಾದೇವಿ ಮಹಾರಾಷ್ಟç ಬಂಜಾರ ಶಕ್ತಿಪೀಠದ ಪೂಜ್ಯ ಡಾ. ಬಾಬುಸಿಂಗ್ ಮಹಾರಾಜ್ ಧಿವ್ಯ ಸಾನಿಧ್ಯ ವಹಿಸಿ ಸಂದೇಶ ನೀಡಿದರು. ಬಳಿರಾಂ ಮಹಾರಾಜ್, ಅಶೋಕ್ ಪವಾರ್, ಅನಂತ್ ನಾಯಕ್, ಎಐಬಿಎಸ್‌ಎಸ್ ಅಧ್ಯಕ್ಷ ಶಂಕರ್ ಪವಾರ್ ಮಾತನಾಡಿದರು.

ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮೂಡ, ಸಿಂಡಿಕೇಟ್ ಸದಸ್ಯ ರಾಘವೇಂದ್ರ ಎಂ. ಭೈರಪ್ಪ, ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಥೋಡ್ ಮಾತನಾಡಿದರು. ಖ್ಯಾತ ಜಾನಪದ ವಿದ್ವಾಂಸ ಪ್ರೊ. ಪಿ.ಕೆ. ಖಂಡೋಬಾ, ಹರಿಯಾಣ ಸರ್ಕಾರದ ಗೃಹ ಉಪ ಕಾರ್ಯದರ್ಶಿ ಗಗನ್ ದೀಪ್ ಸಿಂಗ್ ಪ್ರಧಾನ ಭಾಷಣ ಮಾಡಿದರು. ಜಯದೇವ್ ನಾಯಕ್, ಪ್ರೊ. ಲಕ್ಷಿö್ಮಕಾಂತ್ ರಾಥೋಡ್ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ರೇವುನಾಯಕ ಬೆಳಮಗಿ, ಚಿಂಚೋಳಿ ಶಾಸಕ ಡಾ. ಅವಿನಾಶ್ ಜಾಧವ್, ಮಾಜಿ ಸಚಿವ ಬಾಬುರಾವ್ ಚೌವಾಣ, ಮೌಲ್ಯಮಾಪನ ಕುಲಸಚಿವ ಡಾ. ಎನ್. ಜಿ. ಕಣ್ಣೂರು, ವಿತ್ತಾಧಿಕಾರಿ ಶ್ರೀಮತಿ ಜಯಾಂಬಿಕ ಸೇರಿದಂತೆ ಮತ್ತಿತರರಿದ್ದರು. ಪ್ರಾಧ್ಯಾಪಕಿ ಪ್ರೊ. ಶಾರದಾ ಸುಭಾಷ್ ರಾಥೋಡ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ದಶರಥ ನಾಯಕ್ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಸಂಗೀತ ವಿಬಾಗದ ಅತಿಥಿ ಉಪನ್ಯಾಸಕರು ನಾಡಗೀತೆ ಹಾಗೂ ಬಂಜಾರ ಗೀತೆ ಪ್ರಸ್ತುತಪಡಿಸಿದರು.

ಡಾ. ಬಿ. ಆರ್. ಅಂಬೇಡ್ಕರ್ ಶಿಕ್ಷಣ ಪಡೆದು ಪೆನ್ನಿನ ಮೂಲಕ ಸಂವಿಧಾನ ರಚಿಸಿ ದೇಶದ ಇತಿಹಾಸ ಬರೆದರು. ಸುಮಾರು ಶೇ. ೮೦ ರಷ್ಟು ಹಿಂದುಳಿದ ತಳಸಮುದಾಯಗಳು ಸಂವಿಧಾನದ ಅಡಿಯಲ್ಲಿ ಬದುಕುತ್ತಿದ್ದೇವೆ. ಅದರಂತೆ ನಿಮ್ಮ ಮಕ್ಕಳ ಕೈಗೆ ಪೆನ್ನು ನೀಡಿ ಶಿಕ್ಷಣ ನೀಡಿದರು. ಮನೆ, ಕುಟುಂಭ, ಸಮಾಜ, ರಾಜ್ಯ ಮತ್ತು ದೇಶವನ್ನು ಬದಲಿಸಲು ಸಾಧ್ಯವಿದೆ. ದೇಶದಲ್ಲಿನ ಬಂಜಾರ ಸಮುದಾಯದ ಜಾತಿ ಸಮೀಕ್ಷೆ ಆಗಬೇಕು. ಒಂದೇ ಜಾತಿ ಒಂದೇ ಮೀಸಲಾತಿ ತರಬೇಕು.

*  ಜಯದೇವ್ ನಾಯಕ್

ಅಧ್ಯಕ್ಷರು, ಕರ್ನಾಟಕ ತಾಂಡಾ ಅಭಿವೃದ್ಧಿ ಮಂಡಳಿ

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...