Home ಸಂಪಾದಕೀಯ ​ಯುವಶಕ್ತಿ: ರಾಜಕೀಯ ದಾಳವಾಗಬಾರದು, ಸಮಾಜದ ದಿಕ್ಸೂಚಿಯಾಗಬೇಕು.
ಸಂಪಾದಕೀಯ

​ಯುವಶಕ್ತಿ: ರಾಜಕೀಯ ದಾಳವಾಗಬಾರದು, ಸಮಾಜದ ದಿಕ್ಸೂಚಿಯಾಗಬೇಕು.

Share
Share

 

 

ಮರ್ಚೆಡ್ ಡೇಸ್:

ಸಂಪಾದಕೀಯ:

ಕರ್ನಾಟಕದ ರಾಜಕೀಯ ವಲಯದಲ್ಲಿ ಯುವಜನತೆಯನ್ನು ಸಂಘಟಿಸುವ ಮತ್ತು ಸಬಲೀಕರಣಗೊಳಿಸುವ ಕುರಿತು ಕರ್ನಾಟಕ ನೂತನ ಮುಖ್ಯಮಂತ್ರಿ ಯಾಗಿ ಡಿಕೆ .ಶಿವಕುಮಾರ್ ಪ್ರವಚನ ಸ್ವೀಕರಿಸಿದ ನಂತರ ನಮ್ಮ ಯುವ ಜನಾಂಗದ ಕುರಿತು ತಮ್ಮ ಮುಂದಿನ ಆಲೋಚನೆ ಮತ್ತು ಅಭಿಪ್ರಾಯ ವ್ಯಕ್ತಪಡಿಸಿದರು ಈಗ ಯುವ ಜನಾಂಗದ ಕುರಿತು ಚರ್ಚೆ ಮತ್ತೆ ಮುನ್ನೆಲೆಗೆ ಬಂದಿವೆ. ಈ ಹಿಂದೆ ರಾಜೀವ್ ಗಾಂಧಿ ಯುವ ಶಕ್ತಿ ಸಂಘದ ಮೂಲಕ ಯುವಕರನ್ನು ತಲುಪುವ ಪ್ರಯತ್ನ ನಡೆದಿತ್ತು. ಇದೀಗ ನೂತನ ಮುಖ್ಯಮಂತ್ರಿಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಯುವ ಸಂಘಗಳಿಗೆ ತಲಾ 10 ಲಕ್ಷ ರೂಪಾಯಿ ಅನುದಾನ ನೀಡುವ ಆಲೋಚನೆಯನ್ನು ವ್ಯಕ್ತಪಡಿಸಿರುವುದು, ಯುವಕರನ್ನು ರಾಜಕೀಯ ಮತ್ತು ಸಾಮಾಜಿಕವಾಗಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿ ಕಾಣುತ್ತಿದೆ.

ಈ ಹಿಂದೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಇದ್ದ ಸಂದರ್ಭದಲ್ಲಿ 2000 ನೇ ಇಸವಿಯ ಆಸುಪಾಸಿನಲ್ಲಿ ಜಾರಿಯಲ್ಲಿದ್ದ ‘ರಾಜೀವ್ ಗಾಂಧಿ ಯುವ ಶಕ್ತಿ ಸಂಘ’ ಮತ್ತು ಅಂದಿನ 25,000 ರೂಪಾಯಿಗಳ ಅನುದಾನವು ನಿರೀಕ್ಷಿತ ಫಲಿತಾಂಶ ನೀಡಲಿಲ್ಲ ಎಂಬುದು ವಾಸ್ತವ. ಇದಕ್ಕೆ ಪ್ರಮುಖ ಕಾರಣಗಳೆಂದರೆ:

ಗುರಿ ಮತ್ತು ಉದ್ದೇಶದ ಕೊರತೆ: ಯೋಜನೆಗೆ ಸ್ಪಷ್ಟವಾದ ದೂರದೃಷ್ಟಿ ಇಲ್ಲದಿದ್ದಾಗ, ಅದು ಕೇವಲ ಹಣ ಹಂಚಿಕೆಯ ಕಾರ್ಯಕ್ರಮವಾಗಿ ಉಳಿಯುತ್ತದೆ.

ಯಾವುದೇ ಸಂಘಟನೆಯು ಕೇವಲ ರಾಜಕೀಯ ಲಾಭಕ್ಕಾಗಿ ಅಥವಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಸ್ಥಾಪಿತವಾದರೆ, ಅದು ದೀರ್ಘಕಾಲದವರೆಗೆ ಸಕ್ರಿಯವಾಗಿ ಉಳಿಯುವುದು ಅಸಾಧ್ಯ.

ಯುವಕರ ಬೌದ್ಧಿಕ ಅಥವಾ ಕೌಶಲ್ಯ ಬೆಳವಣಿಗೆಗೆ ಬಳಸುವ ಬದಲು, ಇಂತಹ ಹಣವು ಅಸಂಘಟಿತ ಚಟುವಟಿಕೆಗಳಿಗೆ ಬಳಕೆಯಾಗಿರುವುದು ಯೋಜನೆಗಳ ನಿಷ್ಪ್ರಯೋಜಕತೆಗೆ ಕಾರಣವಾಯಿತು.

ಜನನಾಯಕ ಸಿದ್ದರಾಮಯ್ಯ ಯುವ ವೇದಿಕೆ’ಯ ಅಗತ್ಯ

ಯುವಕರನ್ನು ಕೇವಲ ಮತದಾರರನ್ನಾಗಿ ನೋಡುವ ಬದಲು, ಅವರನ್ನು ‘ಬದಲಾವಣೆಯ ಐಕಾನ್ ಗಳನ್ನಾಗಿ. ಪರಿವರ್ತಿಸುವುದು ಇಂದಿನ ತುರ್ತು ಅಗತ್ಯ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಂತಹ ಹಿರಿಯ ಮುತ್ಸದ್ಧಿಗಳ ಮಾರ್ಗದರ್ಶನದಲ್ಲಿ, ಯುವಕರನ್ನು ಕೇವಲ ಘೋಷಣೆಗಳಿಗೆ ಸೀಮಿತಗೊಳಿಸದೆ, ಈ ಕೆಳಗಿನ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಬಹುದು ಎಂಬ ನಮ್ಮದೊಂದು ಸಣ್ಣ ಸಲಹೆ.

ಡಿಜಿಟಲ್ ಕೌಶಲ್ಯ ಮತ್ತು ತಂತ್ರಜ್ಞಾನ:

ಆಧುನಿಕ ಜಗತ್ತಿನ ಆರ್ಥಿಕತೆಯನ್ನು ಮುನ್ನಡೆಸುತ್ತಿರುವುದು ತಂತ್ರಜ್ಞಾನ. ಯುವಕರಿಗೆ ಕೋಡಿಂಗ್, ಡೇಟಾ ಅನಾಲಿಟಿಕ್ಸ್, ಮತ್ತು ಡಿಜಿಟಲ್ ಮಾರ್ಕೆಟಿಂಗ್ ತರಬೇತಿ ನೀಡುವ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಬಹುದು.

ಭಾಷಣ ಕಲೆ ಮತ್ತು ನಾಯಕತ್ವ:

ಉತ್ತಮ ಸಂವಹನ ಕಲೆ ಮತ್ತು ವಿಚಾರಧಾರೆಗಳನ್ನು ಜನರಿಗೆ ತಲುಪಿಸುವ ಸಾಮರ್ಥ್ಯ ಯುವಕರ ಬೌದ್ಧಿಕ ಮಟ್ಟವನ್ನು ಹೆಚ್ಚಿಸುತ್ತದೆ. ಚರ್ಚಾ ವೇದಿಕೆಗಳು ಪ್ರಜಾಪ್ರಭುತ್ವದ ಅಡಿಪಾಯವನ್ನು ಗಟ್ಟಿಗೊಳಿಸುತ್ತವೆ.

ಡಿಜಿಟಲ್ ಮೀಡಿಯಾ ಮತ್ತು ನರೇಷನ್:

ಇಂದಿನ ಕಾಲದಲ್ಲಿ ‘ನರೇಷನ್’ ಸೃಷ್ಟಿಸುವುದು ಬಹಳ ಮುಖ್ಯ. ಯುವಕರು ಸತ್ಯಾಸತ್ಯತೆಯನ್ನು ಅರಿಯುವ, ವಿಶ್ಲೇಷಿಸುವ ಮತ್ತು ಸಮಾಜದ ಮುಖ್ಯವಾಹಿನಿಗೆ ಸರಿಯಾದ ಮಾಹಿತಿಗಳನ್ನು ತಲುಪಿಸುವ ಡಿಜಿಟಲ್ ಮೀಡಿಯಾ ಕಾರ್ಯಕರ್ತರಾಗಿ ಬೆಳೆಯಬೇಕು.

ಯಾವುದೇ ಸರ್ಕಾರದ ಯುವ ಯೋಜನೆಗಳು ಕೇವಲ ಅನುದಾನದ ಚೆಕ್‌ಗಳ ವಿತರಣೆಯಾಗಬಾರದು. ಅದು ಬೌದ್ಧಿಕ ಬಂಡವಾಳ ವಾಗಿರಬೇಕು. 10 ಲಕ್ಷ ರೂಪಾಯಿಗಳ ಅನುದಾನವು ನಗರ/ ಗ್ರಾಮದ ಮೂಲಭೂತ ಅವಶ್ಯಕತೆಗಳು, ಕೃಷಿ ಆಧುನೀಕರಣ, ಮತ್ತು ಸಾಮಾಜಿಕ ಬದಲಾವಣೆಗಳಿಗೆ ಪೂರಕವಾದ ಯೋಜನೆಗಳಿಗೆ ಬಳಸಲ್ಪಟ್ಟಾಗ ಮಾತ್ರವೇ ಸಾರ್ಥಕವಾಗುತ್ತದೆ.

ರಾಜಕೀಯ ಉದ್ದೇಶದಿಂದ ರೂಪಿಸುವ ಸಂಘಟನೆಗಳು ತಾತ್ಕಾಲಿಕ, ಆದರೆ ವಿಚಾರಧಾರೆ ಮತ್ತು ಕೌಶಲ್ಯ ಆಧಾರಿತ ವೇದಿಕೆಗಳು ಶಾಶ್ವತ. ಸರ್ಕಾರವು ಯುವಕರನ್ನು ರಾಜಕೀಯ ದಾಳವಾಗಿ ಬಳಸುವುದನ್ನು ನಿಲ್ಲಿಸಿ, ಅವರನ್ನು ಸಮಾಜದ ಆಸ್ತಿಯನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಸ್ಪಷ್ಟ ನೀತಿಯನ್ನು ರೂಪಿಸಬೇಕಾಗಿದೆ. ಈ ಮೂಲಕ ರಾಜ್ಯದಲ್ಲಿ ಒಂದು ಶೈಕ್ಷಣಿಕ ,ರಾಜಕೀಯ ,ಸಾಮಾಜಿಕ ನ್ಯಾಯ ಹಾಗೂ ಆರೋಗ್ಯಕರವಾದ, ಜ್ಞಾನಾಧಾರಿತ ಯುವಶಕ್ತಿಯನ್ನು ,**  ನಿರ್ಮಿಸಲು ಸಾ

ಧ್ಯವಿದೆ.

Share
Related Articles
ಸಂಪಾದಕೀಯಸುದ್ದಿ

ಮಕ್ಕಳ ಹಿತದ ಜೊತೆಗೆ ಬಿಸಿಯೂಟ ನೌಕರರ ಬದುಕೂ ಉಳಿಯಲಿ: ಏಕಾಏಕಿ ಕ್ಲಸ್ಟರ್ ಕಿಚನ್ ಬೇಡ, ಮೊದಲು ಪರೀಕ್ಷೆಯಾಗಲಿ…

ಮರ್ಚೆಡ್ ಡೇಸ್ | ಸಂಪಾದಕೀಯ. ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವುದು ಸರ್ಕಾರದ ಸಾಮಾಜಿಕ ಹೊಣೆಗಾರಿಕೆ. ಸರ್ಕಾರಿ...

ಸಂಪಾದಕೀಯಸುದ್ದಿ

ಕಾರ್ಪೊರೇಟ್ ಅಂಗಳದಲ್ಲಿ ಅಕ್ಷರ ಸಾಹಿತ್ಯದ  ಹಬ್ಬ ಮ******** ಮುಖವಾಡವೇ ಅಥವಾ ಅಸ್ತಿತ್ವದ ಅನಿವಾರ್ಯತೆಯೇ?

ಮರ್ಚೆಡ್ ಡೇಸ್|ಸಂಪಾದಕೀಯ. ಬಳ್ಳಾರಿಯ ಕಬ್ಬಿಣದ ಅದಿರಿನ ಧೂಳಿನ ನಡುವೆ ನವೆಂಬರ್ 28 ಮತ್ತು 29ರಂದು ನಡೆಯಲಿರುವ...

ಸಂಪಾದಕೀಯಸುದ್ದಿ

ಕಲ್ಯಾಣ ಕರ್ನಾಟಕದಲ್ಲಿ ‘ಬಿಹಾರ’ ಮಾದರಿಯ ವಲಸೆ: ಬಿಕೋ ಎನ್ನುತ್ತಿವೆ ಹಳ್ಳಿಗಳು.

        ತವರೂರಲ್ಲೇ ಅತಿಥಿಗಳಾದ ಸ್ಥಳೀಯರು; ಬದುಕಿನ ಬಂಡಿ ಎಳೆಯಲು ಗಂಟುಮೂಟೆ ಕಟ್ಟಿದ...