ಮರ್ಚೆಡ್ ಡೇಸ್ ಸುದ್ದಿ.
ಕೊಪ್ಪಳ :ಗಿಡ ಬೆಳೆಸಿ ಪೋಷಿಸುವ ಮೂಲಕ ನಮ್ಮ ಮುಂದಿನ ಪಿಳಿಗೆಗೆ ಉತ್ತಮ ವಾತಾವರಣ ನೀಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದು ಮುನಿರಾಬಾದ್ ಉಪವಲಯ ಅರಣ್ಯ ಅಧಿಕಾರಿ ಲಿಂಗರಾಜ ಮನ್ನಪುರ ತಿಳಿಸಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮುನಿರಾಬಾದ್
ವಲಯದ ಬಂಡಿಹರ್ಲಾಪುರ ಸರ್ಕಾರಿ ಪ್ರಾಥಮಿಕ ಶಾಲೆ ಸೇರಿದಂತೆ ವಲಯದ ವಿವಿಧ ಶಾಲೆಗಳಲ್ಲಿ ಸಸಿ ನೆಡುವ ಅಭಿಯಾನಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು ಪರಿಸರ ದಿನಾಚರಣೆ ಇವತ್ತು ಕೊನೆಯಾಗಿ ಬಾರದು ಪ್ರತಿ ದಿನ ಆಚರಿಸಬೇಕು ,ಈಗಿನ ಅವಮಾನ ವಾತಾವರಣ ಸಿಕ್ಕಾಪಟ್ಟೆ ಬದಲಾಗುತ್ತಿದೆ ,ಈ ಬದಲಾವಣೆ ತಡೆಗಟ್ಟಲು ಪ್ರತಿ ಮನೆಗೊಂದು ಮರ ಅಥವಾ ಶಾಲೆ ಆವರಣದಲ್ಲಿ ಮರಗಳನ್ನು ಬೆಳೆಸಿ ಪ್ರಾಕೃತಿಗೆ ನಮ್ಮದೆಯಾದ ಕೊಡುಗೆ ಕೊಡಬೇಕು ಎಂದರು
ಈ ಸಂದರ್ಭದಲ್ಲಿ ಉಪವಲಯ ಅರಣ್ಯ ಅಧಿಕಾರಿ ಲಿಂಗರಾಜ ಶಾಲಾ ಮುಖ್ಯ ಶಿಕ್ಷಕಿ ಪದ್ಮಾವತಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಿದ್ಧಿ ಬಾಷಾ ಗೊರೆಬಾಳ, ಉಪಾಧ್ಯಕ್ಷೆ ಪುಷ್ಪಾ ತಾರಪತಿ, ಶಿಕ್ಷಕಿ ಶೋಭಾ ಸೇರಿದಂತೆ ಸಹ ಶಿಕ್ಷಕರು ಅರಣ್ಯ ಸಿಬ್ಬಂದಿಗಳು ಉಪಸ್ಥಿತರಿದ್ದರು.