Home ಸುದ್ದಿ ಕಲ್ಯಾಣ ಕರ್ನಾಟಕದಲ್ಲೇ ಮೊದಲು ಬಾರಿಗೆ ರಾಯಚೂರು ಕೃಷಿ ವಿಜ್ಞಾನ ವಿವಿಯಲ್ಲಿ ‘ರೈತ ಸಂತೆ’ ಆರಂಭ
ಸುದ್ದಿ

ಕಲ್ಯಾಣ ಕರ್ನಾಟಕದಲ್ಲೇ ಮೊದಲು ಬಾರಿಗೆ ರಾಯಚೂರು ಕೃಷಿ ವಿಜ್ಞಾನ ವಿವಿಯಲ್ಲಿ ‘ರೈತ ಸಂತೆ’ ಆರಂಭ

Share
Share

 

 

ಮರ್ಚೆಡ್ ಡೇಸ್ ಸುದ್ದಿ.

ರಾಯಚೂರು: ಮಧ್ಯವರ್ತಿಗಳ ಕಾಟವಿಲ್ಲ, ದಲ್ಲಾಳಿಗಳ ಹಾವಳಿಯಿಲ್ಲ,ರೈತರು ಬೆಳೆದ ತಾಜಾ ಬೆಳೆಗಳು ನೇರವಾಗಿ ಗ್ರಾಹಕರ ಕೈಸೇರಲಿವೆ. ಕಲ್ಯಾಣ ಕರ್ನಾಟಕ ಭಾಗದಲ್ಲೇ ಮೊದಲ ಬಾರಿಗೆ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ರಾಯಚೂರು ವತಿಯಿಂದ ವಿನೂತನ ‘ರೈತ ಸಂತೆ’ಗೆ ವೇದಿಕೆ ಸಜ್ಜಾಗಿದೆ.

ಇನ್ನು ಮುಂದೆ ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಕೃಷಿ ವಿಜ್ಞಾನ ವಿವಿ ಆವರಣದಲ್ಲಿ ರೈತ ಸಂತೆ ನಡೆಯಲಿದೆ. ರೈತರು ತಮ್ಮ ಹೊಲದಲ್ಲಿ ಬೆಳೆದ ರಾಸಾಯನಿಕ ಮುಕ್ತ ತರಕಾರಿಗಳು, ತಾಜಾ ಹಣ್ಣುಗಳು, ಪೌಷ್ಟಿಕ ದವಸ ಧಾನ್ಯಗಳು ಹಾಗೂ ಕೈಯಿಂದಲೇ ತಯಾರಿಸಿದ ಕರಕುಶಲ ವಸ್ತುಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಬಹುದಾಗಿದೆ.

ರೈತರು ಕಷ್ಟಪಟ್ಟು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಎಂಬ ಕೊರಗು ಇನ್ನು ಮುಂದೆ ಇರುವುದಿಲ್ಲ. ಹಾಗೆಯೇ ಗ್ರಾಹಕರಿಗೆ ಮಾರುಕಟ್ಟೆಯ ದುಬಾರಿ ಬೆಲೆಯಿಂದ ಮುಕ್ತಿ ಸಿಗಲಿದೆ. ಇಲ್ಲಿ ಯಾವುದೇ ದಲ್ಲಾಳಿಗಳಿಲ್ಲದ ಕಾರಣ ರೈತರಿಗೆ ಲಾಭ, ಗ್ರಾಹಕರಿಗೆ ನ್ಯಾಯಯುತ ಬೆಲೆಗೆ ತಾಜಾ ಉತ್ಪನ್ನಗಳ ಖಾತರಿ ದೊರೆಯಲಿದೆ.

ಕೃಷಿ ವಿಜ್ಞಾನ ವಿವಿಯ ಈ ಮಹತ್ವದ ಯೋಜನೆ ಕೇವಲ ಮಾರುಕಟ್ಟೆಯಲ್ಲ, ಇದೊಂದು ರೈತ ಮತ್ತು ಗ್ರಾಹಕರ ಬಾಂಧವ್ಯ ಹೆಚ್ಚಿನ ಸಂಖ್ಯೆಯಲ್ಲಿ ರೈತರು ತಮ್ಮ ಉತ್ಪನ್ನಗಳೊಂದಿಗೆ ಭಾಗವಹಿಸಿ, ಸಾರ್ವಜನಿಕರು ಈ ಸುವರ್ಣಾವಕಾಶವನ್ನು ಬಳಸಿಕೊಳ್ಳಬೇಕೆಂದು ವಿಶ್ವವಿದ್ಯಾಲಯದ ರೈತ ಸಂತೆ ಆಯೋಜಕರು ಕೋರಿದ್ದಾರೆ.

ಸ್ಥಳ: ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ರಾಯಚೂರು.

ಸಮಯ: ಪ್ರತಿ ತಿಂಗಳ 2ನೇ ಮತ್ತು 4ನೇ ಶನಿವಾರ.

ರೈತರೇ ನಿಮ್ಮ ಉತ್ಪನ್ನಗಳಿಗೆ ಸಿಗಲಿ ಸೂಕ್ತ ಬೆಲೆ, ಗ್ರಾಹಕರೇ ನೀವು ಪಡೆಯಿರಿ ತಾಜಾ ಪದಾರ್ಥ! ಬನ್ನಿ, ಕೈ

ಜೋಡಿಸಿ.

Share
Related Articles
ಅಂಕಣಸುದ್ದಿ

ಒಂದೇ ಒಂದು ಗುಂಡು ಹಾರಿಸದೆ ಮಾಯಾನಗರಿ ಮುಂಬೈ ಆಳಿದ ‘ಸುಲ್ತಾನ್’!

ಬಡತನದ ಕೂಲಿಯಿಂದ ಬಾಲಿವುಡ್ ಬೆರಗಾಗುವಂತೆ ಬೆಳೆದ 'ಹಾಜಿ ಮಸ್ತಾನ್' ಎಂಬ ಬ್ರಾಂಡ್ ಡಾನ್‌ನದ ರೋಚಕ ಕಥೆ...

ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...