ಮರ್ಚೆಡ್ ಡೇಸ್ ಸುದ್ದಿ.
ಗಂಗಾವತಿ: ಬೆಳಗ್ಗಿನ ಜಾವದಿಂದಲೇ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದವರು ಈದ್ಗಾ ಮೈದಾನಕ್ಕೆ ಆಗಮಿಸಿ ವಿಶೇಷ ನಮಾಜ್ ನೆರವೇರಿಸಿದರು.
ಈ ಸಂದರ್ಭದಲ್ಲಿ ದೇಶದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಹಬ್ಬದ ಹಿನ್ನೆಲೆಯಲ್ಲಿ ಪರಸ್ಪರ ಬಕ್ರೀದ್ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಭ್ರಾತೃತ್ವದ ಸಂದೇಶ ಸಾರಿದರು.
ಈ ಕಾರ್ಯಕ್ರಮದಲ್ಲಿ ಗುರುಗಳಾದ ಕಮಲ್ ಮುಸ್ತಫ ಹಾಫಿಜ್, ಕಾಂಗ್ರೆಸ್ ಮುಖಂಡ ಅಖ್ತರ್ ಅನ್ಸಾರಿ, ಅಯ್ಯೂಬ್ ಅನ್ಸಾರಿ, ಎಸ್.ಬಿ.ಖಾದ್ರಿ, ಕಿಷ್ಕಿಂದ ವಾಹಿನಿಯ ಮುಖ್ಯಸ್ಥರಾದ ಸೈಯದ್ ಅಲಿ, ಕರ್ನಾಟಕ ಪವರ್ ಟಿವಿ ವಾಹಿನಿಯ ಮುಖ್ಯಸ್ಥರಾದ ಎಂ.ಡಿ.ಅಲಿ, ಕೆ.ಆರ್.ಪಿ.ಪಿ ಪಕ್ಷದ ಮುಖಂಡ ಮೆಹಫೂಜ್ ಅಲಿಖಾನ್, ಈದ್ಗಾ ಕಮಿಟಿಯ ಅಧ್ಯಕ್ಷರು, ಸದಸ್ಯರು, ನಗರ ಸಭೆ ಇಲಾಖೆ ಪೊಲೀಸ್ ಇಲಾಖೆ, ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಹಿರಿಯರು ಯುವಕರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಬಕ್ರೀದ್ ಹಬ್ಬದ ಪ್ರಯುಕ್ತ ನಗರದಲ್ಲಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಮುಸ್ಲಿಂ ಬಾಂಧವರು ಕುಟುಂಬ ಸಮೇತರಾಗಿ ಹಬ್ಬವನ್ನು ಆಚರಿಸಿದರು.