Home ಸುದ್ದಿ ಸಿದ್ದರಾಮಯ್ಯ ರಾಜೀನಾಮೆ ಬಳಿಕ ದಿಲ್ಲಿಗೆ ಹೊರಟಿದ್ದೇಕೆ..? ಮೂರು ಕಾರಣ..
ಸುದ್ದಿ

ಸಿದ್ದರಾಮಯ್ಯ ರಾಜೀನಾಮೆ ಬಳಿಕ ದಿಲ್ಲಿಗೆ ಹೊರಟಿದ್ದೇಕೆ..? ಮೂರು ಕಾರಣ..

Share
Share

 

 

ಮರ್ಚೆಡ್ ಡೇಸ್ ಸುದ್ದಿ.

ಬೆಂಗಳೂರು:ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಲವು ಆಪ್ತರು ದೆಹಲಿಗೆ ವಿಶೇಷ ವಿಮಾನದಲ್ಲಿ ತೆರಳಿದ್ರು. ದೆಹಲಿಯಲ್ಲಿ ವಿಮಾನ ಇಳಿಯಲಾಗದೆ ಜೈಪುರ ವಿಮಾನ ನಿಲ್ದಾಣದಲ್ಲಿ ಇಳೀತು. ದೆಹಲಿಗೆ ಹೋಗಿದ್ದು ಈ ಮೂರು ಕಾರಣಗಳಿಗಾಗಿ….

 

*ಸಿದ್ದರಾಮಯ್ಯ ರಾಜ್ಯದಲ್ಲೇ ಇದ್ದರೆ ಯಾವುದೇ ಕಾರಣಕ್ಕೂ ಆಡಳಿತ ಸುಗಮವಾಗಿ ಇರಲ್ಲ ಅನ್ನೋದು ಭಾವಿ ಮುಖ್ಯಮಂತ್ರಿ ಡಿಕೆ ಶಿವ ಕುಮಾರಿಗೆ ಚೆನ್ನಾಗಿ ಗೊತ್ತು. ಅದೇ ಕಾರಣಕ್ಕೆ ರಾಷ್ಟ್ರ ರಾಜಕಾರಣಕ್ಕೆ ಕಳುಹಿಸಲು ರಾಜ್ಯಸಭೆಯನ್ನು ಆಯ್ಕೆ ಮಾಡಿದ್ದಾರೆ. ಇದೀಗ ಚುನಾವಣೆ ಹತ್ತಿರ ಬರ್ತಿದ್ದು, ಅಭ್ಯರ್ಥಿಯನ್ನಾಗಿಸಲು ಕಾಂಗ್ರೆಸ್‌ನಲ್ಲಿ ಭಾರೀ ಸರ್ಕಸ್ ನಡೆದಿದೆ.

 

*ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಸುಮ್ಮನಾದರೆ ಕಾಂಗ್ರೆಸ್ ಅದೋಗತಿಗೆ ಹೋಗುತ್ತದೆ ಅನ್ನೋದು ಕೂಡ ಕಾಂಗ್ರೆಸ್ ಹೈಕಮಾಂಡ್ ಅರಿವಿನಲ್ಲಿದೆ. ಅದೇ ಕಾರಣಕ್ಕೆ ಸಿದ್ದರಾಮಯ್ಯ ಆಪ್ತ ಬಳಗವನ್ನು ಸೇರಿಸಿಕೊಂಡು ಸರ್ಕಾರ ಮಾಡಿದಾಗ ಸಿದ್ದರಾಮಯ್ಯ ಅನಿವಾರ್ಯವಾಗಿ ರಾಜ್ಯ ಸರ್ಕಾರದ ಭಾಗವಾಗ್ತಾರೆ. ಕಾಂಗ್ರೆಸ್‌ನಿಂದ ದೂರ ಆದರು ಎನಿಸುವುದಿಲ್ಲ. ಮುಂದಿನ ಚುನಾವಣೆಗೆ ಬಳಸಿಕೊಳ್ಳಲು ಅನುಕೂಲಕರ.‌

 

ಸಿಎಂ ಆಯ್ಕೆ ಆದ ಬಳಿಕ ಮಂತ್ರಿ ಸ್ಥಾನ, ಡಿಸಿಎಂ ಸ್ಥಾನ, ಖಾತೆ ಹಂಚಿಕೆಯಲ್ಲಿ ಗೊಂದಲ ಉಂಟಾಗಿ ಹೈರಾಣು ಆದರೆ ಮುಂದಿನ ದಿನಗಳಲ್ಲಿ ಜನರು ಛೀ.. ಥೂ ಎನ್ನುತ್ತಾರೆ. ಸಿದ್ದರಾಮಯ್ಯ ರಾಜೀನಾಮೆ ಕೊಟ್ಟಿರೋದ್ರಿಂದಲೇ ಸಾಕಷ್ಟು ಮತಗಳನ್ನು ಕಾಂಗ್ರೆಸ್ ಕಳೆದುಕೊಳ್ಳುವ ಭೀತಿ ಇದೆ. ಅದರಲ್ಲಿ ಮತ್ತಷ್ಟು ಗೊಂದಲ ಮಾಡಲು ಕಾಂಗ್ರೆಸ್‌ಗೆ ಇಷ್ಟವಿಲ್ಲ.

 

ಮೊದಲ ಕಾರಣ, ರಾಜ್ಯಸಭೆಗೆ ಸಿದ್ದರಾಮಯ್ಯ ಅವರನ್ನು ಕಳುಹಿಸುವುದು ಬಹುತೇಕ ಖಚಿತ. ಸದ್ಯಕ್ಕೆ ನಾನು ರಾಜ್ಯಸಭೆಗೆ ಹೋಗಲ್ಲ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ರಾಹುಲ್ ಗಾಂಧಿ, ಕಯ್ ಕುಯ್ ಅನ್ನದಂತೆ ಮುಖ್ಯಮಂತ್ರಿ ಸ್ಥಾನದಿಂದಲೇ ಇಳಿಸಿದ್ದಾರೆ. ಇನ್ನು ಇದ್ಯಾವ ಲೆಕ್ಕ..? ಅದೇ ಕಾರಣಕ್ಕೆ ಸಿದ್ದರಾಮಯ್ಯ ವಿಮಾನ ಜೈಪುರದಲ್ಲಿ ಇಳಿಯುತ್ತಿದ್ದ ಹಾಗೆ ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿಸಿ, ರಾಜ್ಯಸಭೆಗೆ ಆಯ್ಕೆ ಆಗಿ ಬರುವಂತೆ ಮನವಿ ಮಾಡಿಸಿದ್ದಾರೆ.

 

ಉಪಚುನಾವಣೆಯಲ್ಲಿ ವರುಣಾದಿಂದ ಯತೀಂದ್ರ ಆಯ್ಕೆಯಾಗಲಿ, ಡಿಸಿಎಂ ಆಗಿ ಆಡಳಿತ ನಡೆಸಲಿ. ನೀವು ರಾಜ್ಯಸಭೆಗೆ ಬಂದು ಬಿಡಿ. ರಾಜ್ಯಸಭಾ ವಿಪಕ್ಷ ನಾಯಕರಾಗಿ. ನೀವೂ ನಮ್ಮ ಮೇಲ್ಪಂಕ್ತಿ‌ ನಾಯಕರು ಎಂದು ಬೆಣ್ಣೆ ಹಚ್ತಾರೆ..‌ ಸಿದ್ದರಾಮಯ್ಯ ಅನಿವಾರ್ಯವಾಗಿ ಒಪ್ಪಿಕೊಳ್ತಾರೆ. ಹೌದಾ?

Share
Related Articles
ಅಂಕಣಸುದ್ದಿ

ಒಂದೇ ಒಂದು ಗುಂಡು ಹಾರಿಸದೆ ಮಾಯಾನಗರಿ ಮುಂಬೈ ಆಳಿದ ‘ಸುಲ್ತಾನ್’!

ಬಡತನದ ಕೂಲಿಯಿಂದ ಬಾಲಿವುಡ್ ಬೆರಗಾಗುವಂತೆ ಬೆಳೆದ 'ಹಾಜಿ ಮಸ್ತಾನ್' ಎಂಬ ಬ್ರಾಂಡ್ ಡಾನ್‌ನದ ರೋಚಕ ಕಥೆ...

ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...