ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ.
*ಗಂಗಾವತಿ:* ಗಂಗಾವತಿ ನಗರಸಭೆಯಲ್ಲಿ ಖಾಲಿಯಿದ್ದ ಪೌರಾಯುಕ್ತರ ಹುದ್ದೆಗೆ ಕೊಪ್ಪಳ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾಗಿದ್ದ ಶ್ರೀ ಮಂಜುನಾಥ ಮಲ್ಲಪ್ಪ ಗುಂಡೂರ ಅವರನ್ನು ವರ್ಗಾಯಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.
ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಟಿ. ಮಂಜುನಾಥ ಅವರು ದಿನಾಂಕ: 02-11-2026 ರಂದು ಹೊರಡಿಸಿರುವ ಅಧಿಸೂಚನೆ ಸಂಖ್ಯೆ: 141 / 2026 ರ ಪ್ರಕಾರ, ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಈ ವರ್ಗಾವಣೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಮಾಡಲಾಗಿದೆ.
ಈ ಆದೇಶವು ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಹೊರಡಿಸಲಾಗಿದೆ. ನೂತನ ಪೌರಾಯುಕ್ತರು ಶೀಘ್ರದಲ್ಲೇ ಗಂಗಾವತಿ ನಗರಸಭೆಯಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.
