Home ಸುದ್ದಿ ಸಾಸಿವೆಹಾಳದಲ್ಲಿ ಭಜನಾ ಸ್ಪರ್ಧೆಯ ಸಂಭ್ರಮ: ಪ್ರಥಮ ಸ್ಥಾನ ಪಡೆದ ಕನಕಗಿರಿಯ ಬಸರಿಹಾಳ ಶ್ರೀ ಬಸವೇಶ್ವರ ಭಜನಾ ತಂಡ.
ಸುದ್ದಿ

ಸಾಸಿವೆಹಾಳದಲ್ಲಿ ಭಜನಾ ಸ್ಪರ್ಧೆಯ ಸಂಭ್ರಮ: ಪ್ರಥಮ ಸ್ಥಾನ ಪಡೆದ ಕನಕಗಿರಿಯ ಬಸರಿಹಾಳ ಶ್ರೀ ಬಸವೇಶ್ವರ ಭಜನಾ ತಂಡ.

Share
Share
ಮರ್ಚೆಡ್ ಡೇಸ್ ಸುದ್ದಿ|ಕೊಪ್ಪಳ.

ಕುಷ್ಟಗಿ:ತಾಲೂಕಿನ ಸಾಸಿವೆಹಾಳ ಗ್ರಾಮದಲ್ಲಿ ಶ್ರೀ ದುರ್ಗಾದೇವಿ ಹಾಗೂ ಶ್ರೀ ಕೆಂಚಮ್ಮ ದೇವಿಯ ನೂತನ ಮೂರ್ತಿ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪ್ರಪ್ರಥಮ ಬಾರಿಯ ಗ್ರಾಮೀಣ ಮಟ್ಟದ ಭಜನಾ ಸ್ಪರ್ಧೆಯಲ್ಲಿ ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದ ಶ್ರೀ ಬಸವೇಶ್ವರ ಭಜನಾ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ.

ಕೊಪ್ಪಳ ಜಿಲ್ಲೆಯ ನಾನಾ ತಾಲೂಕುಗಳಿಂದ ಆಗಮಿಸಿದ್ದ ಸುಮಾರು 19ಕ್ಕೂ ಹೆಚ್ಚು ಭಜನಾ ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು ತಮ್ಮ ಭಕ್ತಿಪೂರ್ಣ ಗಾಯನದ ಮೂಲಕ ಜನಮನ ಸೆಳೆದವು. ತೀವ್ರ ಪೈಪೋಟಿಯ ನಡುವೆ ಅತ್ಯುತ್ತಮ ಪ್ರದರ್ಶನ ನೀಡಿದ ಬಸರಿಹಾಳದ ಕಲಾವಿದರು ಪ್ರಥಮ ಸ್ಥಾನ ಗಳಿಸಿ ತಮ್ಮ ಗ್ರಾಮ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾರೆ. ಸ್ಪರ್ಧೆಯಲ್ಲಿ ಟನಕಣಕಲ್ ಗ್ರಾಮದ ಬಸವೇಶ್ವರ ಭಜನಾ ಮಂಡಳಿ ದ್ವಿತೀಯ ಸ್ಥಾನ ಪಡೆದರೆ, ಮುದಗಲ್ಲ ಗ್ರಾಮದ ಜ್ಞಾನಮೂರ್ತಿ ಭಜನಾ ಮಂಡಳಿ ತೃತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾಹಿತಿ, ಹಿರಿಯ ಸಂಗೀತಗಾರ ಹಾಗೂ ರಂಗಭೂಮಿ ಕಲಾವಿದ ಮಲ್ಲೇಶಪ್ಪ ಹಿರೇಗೌಡ ವಡ್ಡರಹಟ್ಟಿ ಅವರು ಮಾತನಾಡಿ, “ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ನಮ್ಮ ಗ್ರಾಮೀಣ ಜನಪದ ಹಾಗೂ ಭಜನಾ ಕಲೆಗಳು ನಶಿಸುತ್ತಿರುವ ಇಂದಿನ ದಿನಗಳಲ್ಲಿ, ಹಳ್ಳಿಗಳಲ್ಲಿ ಇಂತಹ ಸ್ಪರ್ಧೆಗಳು ಆಯೋಜನೆಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ” ಎಂದು ಮೆಚ್ಚುಗೆ ವ್ಯಕ್ತಪಡಿಸಿ ವಿಜೇತ ತಂಡಕ್ಕೆ ಶುಭ ಕೋರಿದರು.

ಕಾರ್ಯಕ್ರಮದಲ್ಲಿ ಗ್ರಾಮದ ಪ್ರಮುಖರಾದ ಅಮರೇಗೌಡ ಪೋಲಿಸ್ ಪಾಟೀಲ್, ಹನುಮಂತಪ್ಪ ಬಿ. ಮಡ್ಡೇರ್, ಮಲ್ಲಿಕಾರ್ಜುನ, ಶಶಿಧರ, ಶಿವಕುಮಾರ್, ಪರಸಪ್ಪ, ಪಂಪಾಪತಿ, ನಿರೂಪಾದೆಪ್ಪ, ಛತ್ರಪ್ಪ, ದುರಗಪ್ಪ, ನಾಗಪ್ಪ, ಮುದುಕಪ್ಪ, ದೇವರಡ್ಡೆಪ್ಪ ಹಾಗೂ ದೇವಪ್ಪ ಮಡಿವಾಳರ ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು. ಇನ್ನು ಮುಂದೆ ಯಾವುದೇ ಊರುಗಳಲ್ಲಿ ಭಜನಾ ಸ್ಪರ್ಧೆಗಳನ್ನು ಆಯೋಜಿಸಿದರೆ ತಮ್ಮ ತಂಡವನ್ನು ಸಂಪರ್ಕಿಸುವಂತೆ ಬಸರಿಹಾಳದ ಬಸನಗೌಡ (ಮೊ: 9663585641) ಕೋರಿದ್ದಾರೆ.

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...