
ಮರ್ಚೆಡ್ ಡೇಸ್ ಸುದ್ದಿ|ಕನಕಗಿರಿ.
ಕೊಪ್ಪಳ :ಜಿಲ್ಲೆಯ ಕುಷ್ಟಗಿ ತಾಲೂಕಿನ ಸಾಸಿವೆಹಾಳ ಗ್ಗ್ರಮ ದೇವತೆಗಳಾದ ಶ್ರೀ ದುರ್ಗಾದೇವಿ ಹಾಗೂ ಶ್ರೀ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮತ್ತು ನಾಡಹಬ್ಬ ದಸರಾ ಪ್ರಯುಕ್ತ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಗ್ರಾಮೀಣ ಭಜನಾ ಸ್ಪ ಶ್ರೀ ಬಸವೇಶ್ವರ ಭಜನಾ ತಂಡವು ಪ್ರಥಮ ಸ್ಥಾನ ಪಡೆದು ಗ್ರಾಮದ ಕೀರ್ತಿಯನ್ನು ಹೆಚ್ಚಿಸಿದೆ.
2026ರ ಅಕ್ಟೋಬರ್ 21ರ ಬುಧವಾರ ಸಂಜೆ ಆರಂಭವಾದ ಈ ಭವ್ಯ ಸ್ಪರ್ಧೆಯಲ್ಲಿ ಕೊಪ್ಪಳ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ 19ಕ್ಕೂ ಹೆಚ್ಚು ಪ್ರಸಿದ್ಧ ಭಜನಾ ತಂಡಗಳು ಭಾಗವಹಿಸಿದ್ದವು. ಭಕ್ತಿಗೀತೆ, ತತ್ವಪದ ಹಾಗೂ ಜಾನಪದ ಶೈಲಿಯ ಗಾಯನದ ಮೂಲಕ ಕಲಾವಿದರು ನೆರೆದಿದ್ದ ನೂರಾರು ಭಕ್ತರನ್ನು ಭಕ್ತಿಭಾವದ ಸಾಗರದಲ್ಲಿ ತೇಲಿಸಿದರು. ತೀವ್ರ ಪೈಪೋಟಿಯ ನಡುವೆ ಅತ್ಯುತ್ತಮ ಪ್ರದರ್ಶನ ನೀಡಿದ ಬಸರಿಹಾಳ ಗ್ರಾಮದ ಶ್ರೀ ಬಸವೇಶ್ವರ ಭಜನಾ ತಂಡವು ಪ್ರಥಮ ಸ್ಥಾನದೊಂದಿಗೆ 10,001 ರೂ. ನಗದು ಬಹುಮಾನ ಹಾಗೂ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 7,001 ರೂ. ಹಾಗೂ ತೃತೀಯ ಸ್ಥಾನ ಪಡೆದ ತಂಡಕ್ಕೆ 5,001 ರೂ. ನಗದು ನೀಡಿ ಗೌರವಿಸಲಾಯಿತು.
ಪರಂಪರೆ ಉಳಿಸುವ ಕಾರ್ಯ ಶ್ಲಾಘನೀಯ: ಹಿರಿಯ ಕಲಾವಿದ ಮಲ್ಲೇಶಪ್ಪ ಹಿರೇಗೌಡರು
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಂಗೀತ ಹಾಗೂ ಹಿರಿಯ ರಂಗಭೂಮಿ ಕಲಾವಿದರು ಮತ್ತು ಸಾಹಿತಿಗಳಾದ ಮಲ್ಲೇಶಪ್ಪ ಹಿರೇಗೌಡರು ವಡ್ಡರಹಟ್ಟಿ ಅವರು, “ಇಂದಿನ ಆಧುನಿಕ ತಂತ್ರಜ್ಞಾನ ಹಾಗೂ ಸಾಮಾಜಿಕ ಜಾಲತಾಣಗಳ ಅತಿಯಾದ ಭರಾಟೆಯಲ್ಲಿ ನಮ್ಮ ಸಾಂಸ್ಕೃತಿಕ ಪರಂಪರೆಯ ಕೊಂಡಿಯಾದ ಭಜನಾ ಕಲೆ ನಶಿಸಿಹೋಗುತ್ತಿದೆ. ಇಂತಹ ಸಂದಿಗ್ಧ ಕಾಲಘಟ್ಟದಲ್ಲಿ ಗ್ರಾಮೀಣ ಭಾಗದಲ್ಲಿ ಇಂತಹ ಸ್ಪರ್ಧೆಗಳನ್ನು ಆಯೋಜಿಸಿ ಯುವ ಪೀಳಿಗೆಗೆ ಭಕ್ತಿ ಪರಂಪರೆಯನ್ನು ಪರಿಚಯಿಸುತ್ತಿರುವುದು ಅತ್ಯಂತ ಶ್ಲಾಘನೀಯ” ಎಂದು ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ ಪ್ರಥಮ ಸ್ಥಾನ ಗಳಿಸಿದ ಬಸರಿಹಾಳದ ಕಲಾತಂಡಕ್ಕೆ ಹೃತ್ಪೂರ್ವಕವಾಗಿ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮಗಳಿಗೆ ಸಂಪರ್ಕಿಸಲು ಕೋರಿಕೆ:
ವಿಜೇತ ಶ್ರೀ ಬಸವೇಶ್ವರ ಭಜನಾ ತಂಡವು ವಿವಿಧ ಊರುಗಳ ಜಾತ್ರಾ ಮಹೋತ್ಸವ, ದೇವಸ್ಥಾನಗಳ ಧಾರ್ಮಿಕ ಸಮಾರಂಭ ಹಾಗೂ ವಿಶೇಷ ಉತ್ಸವಗಳಲ್ಲಿ ಭಜನಾ ಕಾರ್ಯಕ್ರಮಗಳನ್ನು ನೀಡಲು ಸಿದ್ಧವಿದ್ದು, ಆಸಕ್ತ ಆಯೋಜಕರು ಹಾಗೂ ಭಕ್ತಾದಿಗಳು ಬಸನಗೌಡ ಬಸರಿಹಾಳ (ಮೊಬೈಲ್ ಸಂಖ್ಯೆ: 9663585641) ಅವರನ್ನು ಸಂಪರ್ಕಿಸಬಹುದು ಎಂದು ತಂಡದ ಪ್ರಕಟಣೆ ತಿಳಿಸಿದೆ.