ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ.
ಗಂಗಾವತಿ:ಹಿರಿಯ ಪತ್ರಕರ್ತ ವಿಶ್ವನಾಥ ಬೆಳಗಲ್ ಮಠ ಅವರ ತಾಯಿಯಾದ ಶ್ರೀಮತಿ ಗೌರಮ್ಮ ಸದಾನಂದಯ್ಯ ಬೆಳಗಲ್ ಮಠ (78) ಅವರು ಮಂಗಳವಾರ ಸಂಜೆ ನಿಧನರಾಗಿದ್ದಾರೆ.
ಮೃತರು ಗಂಗಾವತಿ ನಗರದ ಆನೆಗೊಂದಿ ರಸ್ತೆಯ ಸರೋಜಾ ನಗರ 3ನೇ ಕ್ರಾಸ್ (ರಾಘವೇಂದ್ರ ಪಬ್ಲಿಕ್ ಸ್ಕೂಲ್ ಎದುರು) ನಿವಾಸಿಯಾಗಿದ್ದರು. ಗೌರಮ್ಮ ಅವರ ನಿಧನಕ್ಕೆ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಹಿರಿಯರು, ಪ್ರಮುಖ ಮುಖಂಡರು, ಪತ್ರಕರ್ತರು ಹಾಗೂ ಕುಟುಂಬದ ಆಪ್ತರು ತೀವ್ರ ಸಂತಾಪ ಸೂಚಿಸಿದ್ದಾರೆ.
ಮೃತರ ಅಂತ್ಯಕ್ರಿಯೆಯು ಬುಧವಾರ ಮಧ್ಯಾಹ್ನ 1:00 ಗಂಟೆಗೆ ಗಂಗಾವತಿಯ ಹಿರೇಜಂತಕಲ್ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.