Home ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸದ್ದು ಮಾಡುತ್ತಿರುವ ‘ಮೋದ ರಾತ್ರಿ’: ನಗೆಯ ಕಚಗುಳಿ ಜೊತೆಗೆ ಉತ್ತಮ ಸಂದೇಶ ಸಾರುವ ತಮಿಳು ಸಿನಿಮಾ.
ಸಿನಿಮಾಸುದ್ದಿ

ನೆಟ್‌ಫ್ಲಿಕ್ಸ್‌ನಲ್ಲಿ ಸದ್ದು ಮಾಡುತ್ತಿರುವ ‘ಮೋದ ರಾತ್ರಿ’: ನಗೆಯ ಕಚಗುಳಿ ಜೊತೆಗೆ ಉತ್ತಮ ಸಂದೇಶ ಸಾರುವ ತಮಿಳು ಸಿನಿಮಾ.

Share
Share
ಮರ್ಚೆಡ್ ಡೇಸ್|ಸಿನಿಮಾ ವರದಿ.

ತಮಿಳಿನ “ಮೋದ ರಾತ್ರಿ” (ಮೊದಲ ರಾತ್ರಿ) ಎಂಬ ಸಿನಿಮಾವು ಪ್ರಸ್ತುತ ನೆಟ್‌ಫ್ಲಿಕ್ಸ್ (Netflix) ಓಟಿಟಿ ವೇದಿಕೆಯಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಪ್ರೇಕ್ಷಕರಿಗೆ ಹೊಟ್ಟೆ ಹುಣ್ಣಾಗಿಸುವಂತಹ ಭರಪೂರ ಮನರಂಜನೆ ನೀಡುವ ಜೊತೆಗೆ, ಉತ್ತಮ ಮತ್ತು ಅರ್ಥಪೂರ್ಣ ಸಂದೇಶಗಳನ್ನು ಒಳಗೊಂಡಿರುವುದು ಈ ಚಿತ್ರದ ಪ್ರಮುಖ ವೈಶಿಷ್ಟ್ಯವಾಗಿದೆ.

ಚಿತ್ರದಲ್ಲಿ ಬರುವ ‘ಡುಮುಟಕ’ (ಡೋಲು) ಬಿಜಿಎಂ ಸಿನಿಮಾದ ಅತಿ ದೊಡ್ಡ ಹೈಲೈಟ್ ಆಗಿದ್ದು, ಪ್ರೇಕ್ಷಕರನ್ನು ಇನ್ನಿಲ್ಲದಂತೆ ಆಕರ್ಷಿಸುತ್ತಿದೆ. ಶೀರ್ಷಿಕೆಯಲ್ಲಿ ‘ಮೊದಲ ರಾತ್ರಿ’ ಎಂದಿದ್ದರೂ, “ಹೆಸರಷ್ಟೇ ಮೊದಲ ರಾತ್ರಿ! ಅದು ಬಿಟ್ಟು ಉಳಿದದ್ದೆಲ್ಲಾ ಈ ಸಿನಿಮಾದಲ್ಲಿದೆ” ಎನ್ನುವಂತೆ ಕಥೆಯು ಇಡೀ ಕುಟುಂಬ ಕುಳಿತು ಆನಂದಿಸುವಂತೆ ಅದ್ಭುತವಾಗಿ ಮೂಡಿಬಂದಿದೆ.

“ಒಂದು ಸಿನಿಮಾ ಅಂದ್ರೆ ಈ ಲೆವೆಲ್ ಕಾಮಿಡಿ ಇರಬೇಕು” ಎನ್ನುವಷ್ಟರ ಮಟ್ಟಿಗೆ ನಗೆಯ ರಸದೌತಣವನ್ನು ಉಣಬಡಿಸಿರುವ ಈ ಚಿತ್ರವನ್ನು ‘ಅಲ್ಟಿಮೇಟ್ ಕಾಮಿಡಿ ಸಿನಿಮಾ’ ಎಂದೇ ಹೇಳಬಹುದು. ಚಿತ್ರಕಥೆ ಹಾಗೂ ಹಾಸ್ಯ ಸನ್ನಿವೇಶಗಳು ನೋಡುಗರನ್ನು ಎಷ್ಟು ಆವರಿಸಿಕೊಳ್ಳುತ್ತವೆ ಎಂದರೆ, ಪ್ರೇಕ್ಷಕರು ಇದರಲ್ಲಿ ಬರುವ ಒಂದೇ ಒಂದು ದೃಶ್ಯವನ್ನೂ ಮಿಸ್ ಮಾಡದೆ ಸಂಪೂರ್ಣವಾಗಿ ನೋಡಲೇಬೇಕು. ಇಂತಹ ನೈಜ ಹಾಗೂ ಅತ್ಯುತ್ತಮ ಮನರಂಜನೆಯ ಚಿತ್ರವನ್ನು ರೂಪಿಸಿ ನೀಡಿದ ನಿರ್ದೇಶಕ ರಾಜಾ ಕುರುಪ್ಪಸ್ವಾಮಿ ಹಾಗೂ ಅವರ ಇಡೀ ಚಿತ್ರತಂಡಕ್ಕೆ ಪ್ರೇಕ್ಷಕರು ಖಂಡಿತವಾಗಿಯೂ ಧನ್ಯವಾದಗಳನ್ನು ಹೇಳಲೇಬೇಕು.

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...