Home ಸುದ್ದಿ ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ: ಒಂದೇ ವೇದಿಕೆಯಲ್ಲಿ ತಂಗಡಗಿ-ರೆಡ್ಡಿ; ಕಾರ್ಯಕರ್ತರಿಗಿದು ದೊಡ್ಡ ಪಾಠ!
ಸುದ್ದಿ

ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ: ಒಂದೇ ವೇದಿಕೆಯಲ್ಲಿ ತಂಗಡಗಿ-ರೆಡ್ಡಿ; ಕಾರ್ಯಕರ್ತರಿಗಿದು ದೊಡ್ಡ ಪಾಠ!

Share
Share
ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ.

ಗಂಗಾವತಿ: ರಾಜಕೀಯವೆಂಬ ಚದುರಂಗದಾಟದಲ್ಲಿ ಶಾಶ್ವತ ಮಿತ್ರರೂ ಇಲ್ಲ, ಶಾಶ್ವತ ಶತ್ರುಗಳೂ ಇಲ್ಲ ಎಂಬ ಹಳೆಯ ನಾಣ್ಣುಡಿಗೆ ಗಂಗಾವತಿಯಲ್ಲಿ ಸಾಕ್ಷಿಯೊಂದು ದೊರೆತಿದೆ. ಇತ್ತೀಚಿನ ದಿನಗಳಲ್ಲಿ ಪರಸ್ಪರ ಬಹಿರಂಗವಾಗಿ ಏಕವಚನದಲ್ಲೇ ಕಟು ವಾಗ್ದಾಳಿ ನಡೆಸಿಕೊಂಡು, ರಾಜಕೀಯ ವಲಯದಲ್ಲಿ ಬೆಂಕಿ ಹೊತ್ತಿಸಿದ್ದ ಸಚಿವ ಶಿವರಾಜ ತಂಗಡಗಿ ಹಾಗೂ ಸ್ಥಳೀಯ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಒಂದೇ ವೇದಿಕೆ ಹಂಚಿಕೊಂಡು ಅಕ್ಕಪಕ್ಕದಲ್ಲೇ ಕುಳಿತಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ನಗರದ ಅಮರ ಜ್ಯೋತಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ‘ಪ್ರಜಾಸೇವಾ ಆಂದೋಲನ’ ಕಾರ್ಯಕ್ರಮದಲ್ಲಿ ಈ ಇಬ್ಬರೂ ಧುರೀಣರು ವೇದಿಕೆ ಹಂಚಿಕೊಂಡಿದ್ದಾರೆ. ವೇದಿಕೆಯಲ್ಲಿ ಸಚಿವ ತಂಗಡಗಿ ಅವರು ಸರ್ಕಾರದ ವಿವಿಧ ಯೋಜನೆಗಳ ಹಾಗೂ ಜನಪರ ಕಾರ್ಯಕ್ರಮಗಳ ಕುರಿತು ಮಾತನಾಡಿದರೆ, ಶಾಸಕ ಜನಾರ್ದನ ರೆಡ್ಡಿ ಅವರು ಕಾರ್ಯಕ್ರಮದಲ್ಲಿ ಸಾಕ್ಷಿಯಾದರು. ಪರಸ್ಪರ ಕಟು ವಿರೋಧಿಗಳಂತಿದ್ದ ಇಬ್ಬರು ಮುಖಂಡರು ಯಾವುದೇ ಭಿನ್ನಾಭಿಪ್ರಾಯ ತೋರ್ಪಡಿಸದೆ ಸಾರ್ವಜನಿಕ ಸಮಾರಂಭದಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದು ಜನರಲ್ಲಿ ಅಚ್ಚರಿ ಮೂಡಿಸಿದೆ.

ಗ್ರಾಮೀಣ ಮಟ್ಟದಲ್ಲಿ ಮತ್ತು ಕೇರಿಗಳಲ್ಲಿ ನಾಯಕರ ಹೆಸರಿನಲ್ಲಿ ಬಡಿದಾಡಿಕೊಳ್ಳುವ, ಹೊಲ-ಮನೆಗಳ ತಂಟೆ ಕಟ್ಟಿ ಪೊಲೀಸ್ ಠಾಣೆ, ಕೋರ್ಟ್ ಮೆಟ್ಟಿಲೇರಿ ವೈರತ್ವ ಬೆಳೆಸಿಕೊಳ್ಳುವ ಮುಗ್ಧ ಕಾರ್ಯಕರ್ತರಿಗೆ ಈ ಚಿತ್ರ ದೊಡ್ಡ ಸಂದೇಶ ರವಾನಿಸಿದೆ. ನಾಯಕರು ಅಧಿಕಾರ, ಶಿಷ್ಟಾಚಾರ ಅಥವಾ ರಾಜಕೀಯ ತಂತ್ರಗಾರಿಕೆಗೆ ತಕ್ಕಂತೆ ವೇದಿಕೆಗಳಲ್ಲಿ ಒಂದಾಗುತ್ತಾರೆ, ಕೈಕುಲುಕುತ್ತಾರೆ; ಆದರೆ ಅವರ ಬೆನ್ನ ಹಿಂದೆ ನಿಂತು ವೈಷಮ್ಯ ಬೆಳೆಸಿಕೊಂಡು ಬದುಕು ಹಾಳುಮಾಡಿಕೊಳ್ಳುವ ಕಾರ್ಯಕರ್ತರು ಮಾತ್ರ ಬೀದಿಗೆ ಬೀಳುತ್ತಾರೆ. ರಾಜಕೀಯ ವೈರತ್ವ ಕೇವಲ ಸಿದ್ಧಾಂತಕ್ಕೆ ಸೀಮಿತವಾಗಿರಬೇಕೇ ಹೊರತು, ವೈಯಕ್ತಿಕ ದ್ವೇಷವಾಗಿ ಜೀವ-ಜೀವನಗಳನ್ನು ಹಾಳುಮಾಡಿಕೊಳ್ಳಬಾರದು ಎಂಬುದಕ್ಕೆ ಈ ವೇದಿಕೆಯ ಸೌಹಾರ್ದ ಚಿತ್ರಣವೇ ಪ್ರತ್ಯಕ್ಷ ಸಾಕ್ಷಿ.

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...