Home ಸುದ್ದಿ ಬಿ.ಯದ್ದಾಪುರದಲ್ಲಿ   ಸಂಭ್ರಮದಿಂದ ನೆರವೇರಿದ ಮಹಾಗಣಪತಿ ವಿಸರ್ಜನೆ: ₹24,500ಕ್ಕೆ ಲಡ್ಡು ಹರಾಜು ಪಡೆದ ನರಸಿಂಹ ಕೊತ್ತುಕೂರ.
ಸುದ್ದಿ

ಬಿ.ಯದ್ದಾಪುರದಲ್ಲಿ   ಸಂಭ್ರಮದಿಂದ ನೆರವೇರಿದ ಮಹಾಗಣಪತಿ ವಿಸರ್ಜನೆ: ₹24,500ಕ್ಕೆ ಲಡ್ಡು ಹರಾಜು ಪಡೆದ ನರಸಿಂಹ ಕೊತ್ತುಕೂರ.

Share
Share

ಮರ್ಚೆಡ್ ಡೇಸ್ ಸುದ್ದಿ|ರಾಯಚೂರು.

ರಾಯಚೂರು: ತಾಲ್ಲೂಕಿನ ಬಿ. ಯದ್ದಾಪುರ  ಗ್ರಾಮದಲ್ಲಿ ಶ್ರೀ ಗಣೇಶ ಯುವಕ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಮಹಾಗಣಪತಿಯ ಮೂರ್ತಿಯನ್ನು   ಸ್ನೇಹ ಬಳಗದ ಸಹಯೋಗದಲ್ಲಿ ಅತ್ಯಂತ ವೈಭವ ಹಾಗೂ ಸಂಭ್ರಮದೊಂದಿಗೆ ನಿನ್ನೆ ಪೂಜೆ ನೆರವೇರಿಸಿ ವಿಸರ್ಜಿಸಲಾಯಿತು.

ಗಣೇಶೋತ್ಸವದ ಪ್ರಯುಕ್ತ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆಮಾಡಿದ್ದು, ವಿಶೇಷ ಪೂಜಾ ಕೈಂಕರ್ಯಗಳು, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ವಿಜೃಂಭಣೆಯಿಂದ ಜರುಗಿದವು. ವಿಸರ್ಜನಾ ಮೆರವಣಿಗೆಯಲ್ಲಿ ಮ್ಯೂಸಿಕ್ ಹಾಗೂ ವಾದ್ಯ-ಮೇಳಗಳ ನಾದಕ್ಕೆ ಯುವಕರು ಹೆಜ್ಜೆ ಹಾಕಿ ಸಂಭ್ರಮಿಸಿದರೆ, ಗ್ರಾಮದ ಹಿರಿಯರು, ತಾಯಂದಿರು ಮತ್ತು ಮಕ್ಕಳು ರಂಗು-ರಂಗಿನ ಸಂಭ್ರಮದಲ್ಲಿ ಪಾಲ್ಗೊಂಡು ಭಕ್ತಿಭಾವ ಮೆರೆದರು. ಶಾಂತಿಯುತ ಹಾಗೂ ಅಚ್ಚುಕಟ್ಟಾಗಿ ಉತ್ಸವ ನಡೆಸಿದ ಯುವಕರ ಕಾರ್ಯಕ್ಕೆ ಗ್ರಾಮಸ್ಥರು ತುಂಬು ಹೃದಯದಿಂದ ಶ್ಲಾಘನೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ವಿಸರ್ಜನಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿದ್ದ ಮಹಾಗಣಪತಿಯ ಲಡ್ಡು ಪ್ರಸಾದದ ಬಹಿರಂಗ ಹರಾಜು ಪ್ರಕ್ರಿಯೆ ಭಾರಿ ಪೈಪೋಟಿಯೊಂದಿಗೆ ನಡೆಯಿತು. ಹರಾಜಿನಲ್ಲಿ ಗ್ರಾಮದ ನರಸಿಂಹ ಕೊತ್ತುಕೂರ ಅವರು ಅಂತಿಮವಾಗಿ ಬರೋಬ್ಬರಿ 24,500 ರೂಪಾಯಿಗಳನ್ನು ಕೂಗುವ ಮೂಲಕ ಗಣಪತಿಯ ಪವಿತ್ರ ಲಡ್ಡುವನ್ನು ತಮ್ಮದಾಗಿಸಿಕೊಂಡರು. ಭಕ್ತಿಪೂರ್ವಕವಾಗಿ ಗಣೇಶನ ಪ್ರಸಾದ ಪಡೆದ ಅವರಿಗೆ ಗ್ರಾಮಸ್ಥರು ಹಾಗೂ ಗಣೇಶ ಮಂಡಳಿಯವರು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಶ್ರೀ ಗಣೇಶ ಯುವಕ ಮಂಡಳಿಯ ಪ್ರಮುಖರಾದ ನರಸಿಂಹ ಕೊತ್ತುಕೂರ, ಕೆ. ದುಲ್ಲಯ್ಯ, ಮುರಳಿ, ಅಭಿಷೇಕ್, ನರಸಿಂಹ, ಶಿವಕುಮಾರ್, ಕೃಷ್ಣ, ಭೀಮರೆಡ್ಡಿ, ನರಸಿಂಹ, ಮಂಜುನಾಥ್, ಭೀಮೇಶ್ ಹಾಗೂ ವೆಂಕಟೇಶ್ ಸೇರಿದಂತೆ ಮಂಡಳಿಯ ಸದಸ್ಯರು ಹಾಗೂ ಗ್ರಾಮದ ಸಮಸ್ತ ಭಕ್ತಾದಿಗಳು ಉಪಸ್ಥಿತರಿದ್ದರು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿದ ಶೋಭಾಯಾತ್ರೆಗೆ ಊರಿನ ಹಿರಿಯರು ಹಾಗೂ ಮಹಿಳೆಯರು ಆರತಿ ಬೆಳಗಿ ವಿನಾಯಕನಿಗೆ ವಿದಾಯ ಹೇಳಿದರು. ಗ್ರಾಮದ ಸರ್ವ ಜನರೂ ಒಂದಾಗಿ ಪಾಲ್ಗೊಂಡಿದ್ದ ಈ ವಿಸರ್ಜನಾ ಮಹೋತ್ಸವವು ಬಿ.ಯದ್ದಾಪುರದಲ್ಲಿ ಸಾಮರಸ್ಯ ಹಾಗೂ ಭಕ್ತಿಯ ಹೊನಲನ್ನೇ ಹಾರಿಸಿತು.

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...