ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ.
ಗಂಗಾವತಿ:ವಿಜಯಪುರದ ಡಾ. ಬಿ.ಆರ್. ಅಂಬೇಡ್ಕರ್ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಪ್ರತಿಷ್ಠಿತ ‘ಖೇಲೋ ಇಂಡಿಯಾ ಅಸ್ಮಿತಾ ವುಮೆನ್ಸ್ ವುಶು ಲೀಗ್’ ಪಂದ್ಯಾವಳಿಯಲ್ಲಿ ಗಂಗಾವತಿಯ ಬಾಲಕಿಯರು ಅದ್ಭುತ ಪ್ರದರ್ಶನ ನೀಡಿ ಒಟ್ಟು 7 ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ನಗರದ ಹೆಸರಾಂತ ‘ಜವಾನ್ ಕರಾಟೆ ಸ್ಪೋರ್ಟ್ಸ್ ಅಸೋಸಿಯೇಷನ್’ ಹಾಗೂ ‘ನ್ಯೂ ಬ್ರೈಟ್ ಕರಾಟೆ ಸ್ಪೋರ್ಟ್ಸ್ ಅಕಾಡೆಮಿ’ಯ 7 ವಿದ್ಯಾರ್ಥಿನಿಯರು ಈ ಸಾಧನೆ ಮಾಡಿ ನಗರಕ್ಕೆ ಮತ್ತು ಸಂಸ್ಥೆಗೆ ಅಪಾರ ಕೀರ್ತಿ ತಂದಿದ್ದಾರೆ.
ಪಂದ್ಯಾವಳಿಯ ವಿವಿಧ ತೂಕದ ವಿಭಾಗಗಳಲ್ಲಿ ಸ್ಪರ್ಧಿಸಿದ್ದ ಪಟುಗಳು 1 ಚಿನ್ನ ಹಾಗೂ 6 ಬೆಳ್ಳಿ ಪದಕಗಳನ್ನು ಜಯಿಸಿದ್ದಾರೆ.
* ಜೆ. ಲಯ: ಸೀನಿಯರ್ 52 ಕೆಜಿ ವಿಭಾಗ – ಪ್ರಥಮ ಸ್ಥಾನ (ಚಿನ್ನದ ಪದಕ)* ಐಶ್ವರ್ಯ: ಜೂನಿಯರ್ 40 ಕೆಜಿ ವಿಭಾಗ – ದ್ವಿತೀಯ ಸ್ಥಾನ (ಬೆಳ್ಳಿ ಪದಕ)* ದೃವಿ: ಜೂನಿಯರ್ 34 ಕೆಜಿ ವಿಭಾಗ – ದ್ವಿತೀಯ ಸ್ಥಾನ (ಬೆಳ್ಳಿ ಪದಕ)* ಅಮೃತ: ದ್ವಿತೀಯ ಸ್ಥಾನ (ಬೆಳ್ಳಿ ಪದಕ)
* ಸಾನಿಯಾ: ಸೀನಿಯರ್ 40 ಕೆಜಿ ವಿಭಾಗ – ದ್ವಿತೀಯ ಸ್ಥಾನ (ಬೆಳ್ಳಿ ಪದಕ)* ಶಿಫಾ ನಜ್: ಜೂನಿಯರ್ 28 ಕೆಜಿ ವಿಭಾಗ – ದ್ವಿತೀಯ ಸ್ಥಾನ (ಬೆಳ್ಳಿ ಪದಕ)* ಸಿದ್ರ: ಸಬ್ ಜೂನಿಯರ್ 20 ಕೆಜಿ ವಿಭಾಗ – ದ್ವಿತೀಯ ಸ್ಥಾನ (ಬೆಳ್ಳಿ ಪದಕ)ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ವುಶು ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಅಶೋಕ್ ಮೂಕಾಶಿ, “ಇಂದಿನ ದಿನಗಳಲ್ಲಿ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು, ಅವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಶಕ್ತಿಶಾಲಿಯಾಗಲು ಸಮರ ಕಲೆಗಳು ಅತ್ಯಂತ ಅವಶ್ಯಕ. ಇಂತಹ ಸರ್ಕಾರಿ ಪ್ರಾಯೋಜಿತ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳು ಹೆಣ್ಣುಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ಧೈರ್ಯವನ್ನು ತುಂಬುತ್ತವೆ,” ಎಂದರು. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ಕ್ರೀಡೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಲು ಪೋಷಕರು ಮತ್ತು ಶಿಕ್ಷಕರ ನಿರಂತರ ಪ್ರೋತ್ಸಾಹ ಅಗತ್ಯ ಎಂದು ತರಬೇತುದಾರರು ಅಭಿಪ್ರಾಯಪಟ್ಟರು.
ಕ್ರೀಡಾಪಟುಗಳ ಈ ಶ್ರೇಷ್ಠ ಸಾಧನೆಗೆ ಸಂಸ್ಥೆಯ ರಾಜ್ಯಾಧ್ಯಕ್ಷರಾದ ಅನ್ವರ್ ಪಾಷಾ, ಸೈಯದ್ ಬಿಲಾಲ್, ಮುಖ್ಯ ತರಬೇತುದಾರ ಸೈಯದ್ ಸಮೀರ್ ಹಾಗೂ ಸಂಸ್ಥೆಯ ಸದಸ್ಯ ನಜೀರ್ ಸಾಬ್ ಹರ್ಷ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಪಾಲಕರಾದ ವೀರೇಶ್, ಮಂಜುನಾಥ್, ಮೌನೇಶ್, ಆನಂದ್, ಎಂ.ಡಿ. ಯೂನುಸ್ ಮತ್ತು ಯಮನೂರು ಸಾಬ್ ವಿಜೇತ ಮಕ್ಕಳಿಗೆ ಹಾರ್ದಿಕ ಅಭಿನಂದನೆ ಸಲ್ಲಿಸಿ, ಮುಂದಿನ ಕ್ರೀಡಾ ಜೀವನಕ್ಕೆ ಶುಭ ಹಾರೈಸಿದರು.