Home ಸುದ್ದಿ ನಗರಸಭೆಯ ‘ಆವಕ-ಜಾವಕ’ ವಿಭಾಗಕ್ಕೆ ಬೀಗ: ಸಿಬ್ಬಂದಿ ಗೈರು, ಸಾರ್ವಜನಿಕರ ಗೋಳು.
ಸುದ್ದಿ

ನಗರಸಭೆಯ ‘ಆವಕ-ಜಾವಕ’ ವಿಭಾಗಕ್ಕೆ ಬೀಗ: ಸಿಬ್ಬಂದಿ ಗೈರು, ಸಾರ್ವಜನಿಕರ ಗೋಳು.

Share
Share

ಮರ್ಚೆಡ್ ಡೇಸ್ ಸುದ್ದಿ | ಗಂಗಾವತಿ,

ಗಂಗಾವತಿ : ನಗರಸಭೆಯಲ್ಲಿ ಸಾರ್ವಜನಿಕರ ಪತ್ರ ವ್ಯವಹಾರ ಹಾಗೂ ಅರ್ಜಿಗಳನ್ನು ಸ್ವೀಕರಿಸಬೇಕಾದ ಪ್ರಮುಖ ಆವಕ-ಜಾವಕ ವಿಭಾಗವು ಕಚೇರಿ ವೇಳೆಯಲ್ಲೂ ಬೀಗ ಹಾಕಿಕೊಂಡು ಕುಳಿತಿರುವುದು, ಜನಸಾಮಾನ್ಯರ ಪಾಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಮಂಗಳವಾರ ದಿನಾಂಕ 11-08-2026 ರಂದು ಬೆಳಿಗ್ಗೆ 11:35 ರ ಸುಮಾರಿಗೆ ನಗರಸಭೆ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದಾಗ, ಆವಕ-ಜಾವಕ ವಿಭಾಗದ ಬಾಗಿಲು ಹಾಫ್‌ ಟಿಕೆಟ್‌ ಸಿನಿಮಾದ ಹಾಗೆ ಸಂಪೂರ್ಣ ಬಂದ್ ಆಗಿರುವುದು ಕಂಡುಬಂತು. ಕಚೇರಿ ಸಮಯದಲ್ಲಿ ಕನಿಷ್ಠ ಒಬ್ಬ ಸಿಬ್ಬಂದಿಯೂ ಸ್ಥಳದಲ್ಲಿ ಇರಲಿಲ್ಲ.

ದೂರದೂರುಗಳಿಂದ ಅರ್ಜಿಗಳು, ಮನವಿ ಪತ್ರಗಳು ಹಾಗೂ ವಿವಿಧ ದಾಖಲೆಗಳನ್ನು ಹಿಡಿದುಕೊಂಡು ಬಂದಿದ್ದ ಸಾರ್ವಜನಿಕರು ಗಂಟೆಗಟ್ಟಲೆ ಬಾಗಿಲು ಕಾಯ್ದು ಸುಸ್ತಾದರು. ಇತ್ತ ಅಧಿಕಾರಿಗಳನ್ನು ಪ್ರಶ್ನಿಸಿದರೆ, “ಯಾರು ಇದ್ದಾರೆ ನಮಗೆ ಗೊತ್ತಿಲ್ಲ”, “ಇವತ್ತು ಬಂದಿಲ್ಲ ಬಿಡಿ” ಎಂಬ ಬೇಜವಾಬ್ದಾರಿ ಉತ್ತರಗಳನ್ನು ನೀಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ದಿನನಿತ್ಯ ನೂರಾರು ಅರ್ಜಿಗಳು, ದೂರುಗಳು, ತೆರಿಗೆ ಪಾವತಿ ಮತ್ತು ಎನ್‌ಒಸಿ (NOC) ಸಂಬಂಧಿತ ಪತ್ರಗಳು ನಗರಸಭೆಗೆ ಬರುತ್ತವೆ. ಇಂತಹ ಅತಿಮುಖ್ಯ ವಿಭಾಗದಲ್ಲೇ ಸಿಬ್ಬಂದಿ ಗೈರುಹಾಜರಾಗಿರುವುದು ಆಡಳಿತ ವ್ಯವಸ್ಥೆಯ ದಿವ್ಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಸರ್ಕಾರಿ ಕಚೇರಿಗೆ ಬಂದ್ರೆ ನೌಕರರು ಬಚ್ಚಿಟ್ಕೊಳ್ಳೋದು ಕಾಮನ್ ಬಿಡಿ,ಆದ್ರೆ ಆಫೀಸ್‌ ಬಾಗಿಲಿಗೇ ಬೀಗ ಹಾಕಿ ಮಾಯವಾಗೋದ್ರಲ್ಲಿ ಈ ಸಿಬ್ಬಂದಿ ನಂಬರ್‌ ಒನ್‌, ಎಂದು ಬಂದಿದ್ದ ನಾಗರಿಕರು ವ್ಯಂಗ್ಯವಾಡಿದರು. “ಪತ್ರ ಕೊಟ್ಟರೂ ಸ್ವೀಕರಿಸಲು ಯಾರೂ ಇಲ್ಲ, ರಸೀದಿ ಕೇಳಿದ್ರೆ ದೇವ್ರೆ ಗತಿ. ಇದು ಜನರಿಗೆ ಮಾಡುತ್ತಿರುವ ಮೋಸ ಅಲ್ಲದೆ ಮತ್ತೇನು?” ಎಂದು ತೀವ್ರ ಆಕ್ರೋಶ ಹೊರಹಾಕಿದರು.

ಕೂಡಲೇ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಎಚ್ಚೆತ್ತುಕೊಂಡು, ಆವಕ-ಜಾವಕ ವಿಭಾಗಕ್ಕೆ ಖಾಯಂ ಸಿಬ್ಬಂದಿಯನ್ನು ನಿಯೋಜಿಸಬೇಕು ಹಾಗೂ ಸಾರ್ವಜನಿಕರಿಗೆ ನಿತ್ಯ ಪರದಾಟಕ್ಕೆ ಬ್ರೇಕ್ ಹಾಕಬೇಕು ಎಂದು ನಗರದ ಜನತೆ  ಒತ್ತಾಯಿಸಿದ್ದಾರೆ.

Share
Related Articles
ಅಂಕಣಸುದ್ದಿ

ಒಂದೇ ಒಂದು ಗುಂಡು ಹಾರಿಸದೆ ಮಾಯಾನಗರಿ ಮುಂಬೈ ಆಳಿದ ‘ಸುಲ್ತಾನ್’!

ಬಡತನದ ಕೂಲಿಯಿಂದ ಬಾಲಿವುಡ್ ಬೆರಗಾಗುವಂತೆ ಬೆಳೆದ 'ಹಾಜಿ ಮಸ್ತಾನ್' ಎಂಬ ಬ್ರಾಂಡ್ ಡಾನ್‌ನದ ರೋಚಕ ಕಥೆ...

ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...