ಮರ್ಚೆಡ್ ಡೇಸ್ ಸುದ್ದಿ.
ರಾಯಚೂರು: ವೈಯಕ್ತಿಕ ವೈಮನಸ್ಸು ಹಾಗೂ ಸಣ್ಣಪುಟ್ಟ ವಸ್ತುಗಳಿಗಾಗಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ, ಮೂವರು ಆಪ್ತ ಸ್ನೇಹಿತರಲ್ಲೇ ಒಬ್ಬನನ್ನು ಅತ್ಯಂತ ಬರ್ಬರವಾಗಿ ಕೊಲೆ ಮಾಡಿರುವ ಭೀಕರ ಘಟನೆ ರಾಯಚೂರು ನಗರದ ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಕೊಲೆಯಾದ ದುರ್ದೈವಿಯನ್ನು ತಿರುಪತಿ (26) ಎಂದು ಗುರುತಿಸಲಾಗಿದ್ದು,
ಈ ಅಮಾನವೀಯ ಕೃತ್ಯ ಎಸಗಿದ ಆರೋಪಿಗಳಾದ ಆವೇಶ್ ಮತ್ತು ರಾಜು ಇವರಿಬ್ಬರೂ ಸೋದರರು ಎಂಬುವವರನ್ನು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆಯಿಂದಾಗಿ ಇಡೀ ರಾಯಚೂರು ನಗರವೇ ಒಂದು ಕ್ಷಣ ದಿಗ್ಭ್ರಮೆಗೊಂಡಿದ್ದು, ಸ್ತಬ್ಧವಾಗಿದೆ.
ಕೊಲೆಯಾದ ತಿರುಪತಿ ಹಾಗೂ ಆರೋಪಿಗಳಾದ ಆವೇಶ್(26) ಮತ್ತು ರಾಜು(30) ಮೂವರೂ ರಾಯಚೂರಿನ ಕುಲಸಿಂಬಿ ಕಲೋನಿಯ ನಿವಾಸಿಗಳು ಹಾಗೂ ಆಪ್ತ ಸ್ನೇಹಿತರಾಗಿದ್ದರು. ಇವರು ಮೂರು ಜನ ನಗರ ಬಸ್ ನಿಲ್ದಾಣದಲ್ಲಿ ಜೊತೆಯಾಗಿಯೇ ಕೂಲಿ ಕೆಲಸ ಮಾಡಿಕೊಂಡಿದ್ದ ಇವರ ನಡುವೆ,
ಇತ್ತೀಚೆಗೆ ಸಣ್ಣಪುಟ್ಟ ಚಿಲ್ಲರೆ ವಸ್ತುಗಳ ವಿಷಯಕ್ಕಾಗಿ ಆಗಾಗ ಜಗಳವಾಗುತ್ತಿತ್ತು ಎನ್ನಲಾಗಿದೆ. ಘಟನೆಯ ದಿನದಂದು ಇದೇ ವಿಚಾರವಾಗಿ ಮೂವರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಸಿಟ್ಟಿನ ಆವೇಶದಲ್ಲಿದ್ದ ಆರೋಪಿಗಳು ತಿರುಪತಿಯನ್ನು ಮುಗಿಸಲು ಸಂಚು ರೂಪಿಸಿದ್ದರು. ತಿರುಪತಿ ಒಂಟಿಯಾಗಿದ್ದನ್ನು ಗಮನಿಸಿ, ಮನೆಯ ಕಿಟಕಿಯ ಮೂಲಕ ಒಳ ನುಗ್ಗಿದ ದುಷ್ಕರ್ಮಿಗಳು, ಆತನನ್ನು ಬರ್ಬರವಾಗಿ ಹತ್ಯೆ ಮಾಡಿ, ಬಳಿಕ ಮೃತದೇಹದ ರುಂಡವನ್ನು ಕತ್ತರಿಸಿ ಎತ್ತಿಕೊಂಡು ಹೋಗಿದ್ದರು.
ಕೊಲೆಯ ಬಳಿಕ ಅನಾಥವಾಗಿ ಬಿದ್ದಿದ್ದ ಮೃತದೇಹ ಪತ್ತೆಯಾದ ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ತನಿಖೆ ತೀವ್ರಗೊಳಿಸಿದ್ದರು.
ಆದರೆ ತಿರುಪತಿಯ ಕತ್ತರಿಸಿದ ರುಂಡ ಪತ್ತೆಯಾಗದ ಕಾರಣ ತನಿಖೆ ಸವಾಲಾಗಿ ಪರಿಣಮಿಸಿತ್ತು. ಅಂತಿಮವಾಗಿ ಘಟನೆ ನಡೆದು 48 ಗಂಟೆಗಳ ತೀವ್ರ ಹುಡುಕಾಟದ ಬಳಿಕ ತಿರುಪತಿಯ ರುಂಡ ಪತ್ತೆಯಾಗಿದ್ದು, ಅದು ಸಂಪೂರ್ಣವಾಗಿ ಕೊಳೆತು ನಾರುವ (ಡಿಕಂಪೋಸ್) ಸ್ಥಿತಿಯಲ್ಲಿತ್ತು. ಎಂದು.
ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು (ಎಸ್ಪಿ) ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಸದ್ಯ ಬಂಧಿತ ಆರೋಪಿಗಳು ತಾವು ಮಾಡಿದ ಕೊಲೆಯನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕೊಲೆಯಾದ ತಿರುಪತಿ ಈ ಹಿಂದೆ ಮುಸ್ಲಿಂ ಸಮುದಾಯದ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗಿದ್ದನು. ಆದರೆ ದಾಂಪತ್ಯದಲ್ಲಿ ಮೂಡಿದ ಬಿರುಕಿನಿಂದಾಗಿ ಕಳೆದ ಆರು ತಿಂಗಳಿನಿಂದ ಹೆಂಡತಿ ಗಂಡನೊಂದಿಗೆ ಜಗಳವಾಡಿಕೊಂಡು ತವರು ಮನೆ ಸೇರಿದ್ದಳು. ಇತ್ತ ತಿರುಪತಿಯ ತಂದೆ-ತಾಯಿಯೂ ಸಹ ಆತನ ನಡವಳಿಕೆಗೆ ಬೇಸತ್ತು ಆತನೊಂದಿಗೆ ಹೊಂದಿಕೊಳ್ಳಲಾಗದೆ ಬೇರೆ ಕಡೆ ವಾಸಿಸುತ್ತಿದ್ದರು.
ಹೀಗಾಗಿ ತಿರುಪತಿ ಮನೆಯಲ್ಲಿ ಒಬ್ಬನೇ ಒಂಟಿಯಾಗಿ ಜೀವಿಸುತ್ತಿದ್ದನು. ಆವೇಶ್(26) ಎನ್ನುವ ಆರೋಪಿ ಹೊಸ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಗಲಾಟೆ ಮಾಡಿಕೊಂಡು ಜೈಲಿಗೆ ಹೋಗಿದ್ದ ಇದೇ ತಿಂಗಳ 16ನೇ ತಾರೀಕು ಬಿಡುಗಡೆಯಾಗಿದ್ದಾನೆ 18ಕ್ಕೆ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ.
ತಿರುಪತಿ (26) ಹಿಂದೆ ಸಣ್ಣಪುಟ್ಟ ಕಳ್ಳತನ ಹಾಗೂ ಪ್ರಕರಣದಲ್ಲೂ ಭಾಗಿಯಾಗಿ ಪೊಲೀಸ್ ಸ್ಟೇಷನ್ ಹೋಗುವುದು ಬರುವುದು ಮಾಡುತ್ತಿದ್ದ ಕೂಲಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ.
ಕೇವಲ ಸಣ್ಣಪುಟ್ಟ ಜಗಳ ಹಾಗೂ ವೈಯಕ್ತಿಕ ದ್ವೇಷಕ್ಕಾಗಿ ಇಷ್ಟೊಂದು ಕ್ರೂರವಾಗಿ ಕೊಂದು ರುಂಡವನ್ನೇ ಕತ್ತರಿಸಿ ಒತ್ತೈದ ಘಟನೆ ಸಾರ್ವಜನಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಕೊಲೆಗೆ ನಿಖರವಾದ ಕಾರಣವೇನು? ಇದರ ಹಿಂದೆ ಬೇರೆ ಯಾವುದಾದರೂ ಆಯಾಮಗಳಿವೆಯೇ? ಎಂಬ ಬಗ್ಗೆ ರಾಯಚೂರು ನಗರ ಪಶ್ಚಿಮ ಪೊಲೀಸ ಠಾಣೆಯಲ್ಲಿ ಈ
ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ತನಿಖೆ ಮುಂದುವರಿದಿದೆ.