Home ಸುದ್ದಿ ನೆನೆಗುದಿಗೆ ಬಿದ್ದ ಕನಕಗಿರಿ ಉತ್ಸವ: ಇದು ಸರ್ಕಾರದ ನಿರಾಸಕ್ತಿಯೇ ಅಥವಾ ಹಣದ ದುರುಪಯೋಗವೇ?
ಸುದ್ದಿ

ನೆನೆಗುದಿಗೆ ಬಿದ್ದ ಕನಕಗಿರಿ ಉತ್ಸವ: ಇದು ಸರ್ಕಾರದ ನಿರಾಸಕ್ತಿಯೇ ಅಥವಾ ಹಣದ ದುರುಪಯೋಗವೇ?

Share
Share

 

ಮರ್ಚಡ್ ಡೇಸ್ ಸುದ್ಧಿ.

ಕನಕಗಿರಿ: ಜಿಲ್ಲಾಡಳಿತವು ಪ್ರತಿಷ್ಠಿತವಾಗಿ ಹಮ್ಮಿಕೊಳ್ಳಲು ಉದ್ದೇಶಿಸಿದ್ದ 5ನೇ ಕನಕಗಿರಿ ಉತ್ಸವವು ಸಾರ್ವಜನಿಕರ ಪಾಲಿಗೆ ಕೇವಲ ‘ಮರೀಚಿಕೆ’ಯಾಗಿ ಉಳಿದಿದೆ. ಪದೇ ಪದೇ ಉತ್ಸವದ ದಿನಾಂಕ ಮುಂದೂಡಲ್ಪಟ್ಟು, ಇದೀಗ ಸಂಪೂರ್ಣ ಸ್ಥಗಿತಗೊಂಡಿರುವುದು ಗಂಗಾವತಿ ಮತ್ತು ಕನಕಗಿರಿ ಭಾಗದ ಜನರಲ್ಲಿ ತೀವ್ರ ನಿರುತ್ಸಾಹ ಮೂಡಿಸಿದೆ.

ಪದೇ ಪದೇ ದಿನಾಂಕ ಬದಲಾವಣೆ: ಹಳಿ ತಪ್ಪಿದ ಸಿದ್ಧತೆ.

ಮೊದಲಿಗೆ ಮೇ 8 ಮತ್ತು 9 ರಂದು ಉತ್ಸವ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಸ್ಥಳೀಯ ದುರ್ಗಾದೇವಿ ಜಾತ್ರೆಯ ಹಿನ್ನೆಲೆಯಲ್ಲಿ ದಿನಾಂಕವನ್ನು ಮೇ 16 ಹಾಗೂ 17ಕ್ಕೆ ಮುಂದೂಡಲಾಯಿತು. ಆ ಬಳಿಕ ಆಡಳಿತಾತ್ಮಕ ಕಾರಣಗಳನ್ನು ನೀಡಿ ಜೂನ್ 10ಕ್ಕೆ ನಿಗದಿಪಡಿಸಲಾಯಿತು. ಇದೀಗ ಕೊನೆಯ ಕ್ಷಣದಲ್ಲಿ ಜೂನ್ 10 ಹಾಗೂ 21ರ ಕಾರ್ಯಕ್ರಮಗಳೂ ರದ್ದಾಗಿದ್ದು, ಉತ್ಸವವನ್ನು ನವೆಂಬರ್ ತಿಂಗಳಿಗೆ ತಳ್ಳಲಾಗಿದೆ ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಇನ್ನೆರಡು ದಿನ ಬಾಕಿ ಇರುವಾಗ ಜಿಲ್ಲಾಧಿಕಾರಿಗಳು ಏಕಾಏಕಿ ಉತ್ಸವ ಮುಂದೂಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಸಿದ್ಧತೆಯ ಶೇ. 40ರಷ್ಟು ವೆಚ್ಚದ ಹಣ ನೀರುಪಾಲು

ಉತ್ಸವಕ್ಕಾಗಿ ಈಗಾಗಲೇ ಶೇ. 40 ರಷ್ಟು ಪೂರ್ವಸಿದ್ಧತೆಗಳು ಪೂರ್ಣಗೊಂಡಿದ್ದವು.

ಲಕ್ಷಾಂತರ ರೂಪಾಯಿ ನಷ್ಟ: ಗುತ್ತಿಗೆದಾರರು, ಉಪಗುತ್ತಿಗೆದಾರರು ಮತ್ತು ಕಾರ್ಮಿಕರ ಕೂಲಿ, ಸಾಮಗ್ರಿಗಳ ಸಾರಿಗೆ ವೆಚ್ಚ, ವಿದ್ಯುತ್ ಅಲಂಕಾರದ ಸಾಮಗ್ರಿಗಳು ಹಾಗೂ ಬೃಹತ್ ಊಟದ ಶೆಡ್ ನಿರ್ಮಾಣಕ್ಕೆ ಭಾರಿ ವೆಚ್ಚ ಮಾಡಲಾಗಿತ್ತು.

ದಿನಸಿ ದಾಸ್ತಾನು ವ್ಯರ್ಥ: ಸಾವಿರಾರು ಜನರಿಗೆ ಊಟದ ವ್ಯವಸ್ಥೆ ಕಲ್ಪಿಸಲು ತಂದಿದ್ದ ಕಿರಾಣಿ ಹಾಗೂ ನಾನಾ ದಿನಸಿ ಸಾಮಗ್ರಿಗಳು ಸಿದ್ಧತೆಯಲ್ಲಿದ್ದವು. ಸರ್ಕಾರದ ಈ ದಿಢೀರ್ ನಿರ್ಧಾರದಿಂದಾಗಿ ಗುತ್ತಿಗೆದಾರರು ಹಾಗೂ ಸಾರ್ವಜನಿಕರ ಹಣ ಅಪವ್ಯಯವಾದಂತಾಗಿದೆ.

ರಾಜ್ಯ ರಾಜಕೀಯದಲ್ಲಿ ಇತ್ತೀಚೆಗೆ ಮಹತ್ವದ ಬದಲಾವಣೆಗಳಾಗಿದ್ದು, ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು 15 ದಿನಗಳೇ ಕಳೆದಿದ್ದರೂ, ಕನಕಗಿರಿ ಹಾಗೂ ಗಂಗಾವತಿಯಲ್ಲಿ ಇನ್ನೂ ಹಳೆಯ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳೇ ರಾರಾಜಿಸುತ್ತಿವೆ. ಆ ಬ್ಯಾನರ್‌ಗಳಲ್ಲಿ ಸಿದ್ದರಾಮಯ್ಯ ಅವರ ಹೆಸರನ್ನು ಸಿಎಂ ಸ್ಥಾನದಲ್ಲಿ ಹಾಗೂ ಡಿ.ಕೆ. ಶಿವಕುಮಾರ್ ಹೆಸರನ್ನು ಡಿಸಿಎಂ ಸ್ಥಾನದಲ್ಲೇ ಉಳಿಸಿಕೊಳ್ಳಲಾಗಿದೆ. ಅಲ್ಲದೆ ಸಚಿವ ಸ್ಥಾನದಿಂದ ನಿರ್ಗಮಿಸಿರುವ ಸ್ಥಳೀಯ ಶಾಸಕ ಶಿವರಾಜ್ ತಂಗಡಗಿ ಅವರ ಹೆಸರೇ ಇನ್ನೂ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿ ಬ್ಯಾನರ್‌ಗಳಲ್ಲಿದೆ. ಜಿಲ್ಲಾಡಳಿತದ ಈ ಬೇಜವಾಬ್ದಾರಿತನ ಸಾರ್ವಜನಿಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

“ಕನಕಗಿರಿ ಉತ್ಸವದ ಆಚರಣೆಗೆ ಬಿಡುಗಡೆಯಾದ ಅನುದಾನದಲ್ಲಿ ಭಾರಿ ಅವ್ಯವಹಾರ ನಡೆದ ವಾಸನೆ ಬಡಿಯುತ್ತಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ಜೂನ್ 10 ಹಾಗೂ 21ಕ್ಕೆ ಮುಂದೂಡಿದ್ದ ಉತ್ಸವ ಏನಾಯಿತು ಎಂಬುದಕ್ಕೆ ಜಿಲ್ಲಾಧಿಕಾರಿಗಳಾಗಲಿ ಅಥವಾ ಸ್ಥಳೀಯ ಶಾಸಕರಾಗಲಿ ಯಾವುದೇ ಪ್ರತಿಕ್ರಿಯೆ ನೀಡದೆ ತುಟಿ ಬಿಚ್ಚದಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.”

            ಯಮನೂರಪ್ಪ ಮಲ್ಲಿಗೆವಾಡ (ಕೆ.ಜೆ.ಎಸ್.                           ಹೋರಾಟಗಾರರು)

ಒಟ್ಟಾರೆಯಾಗಿ, ಇತಿಹಾಸ ಪ್ರಸಿದ್ಧ ಕನಕಗಿರಿಯ 5ನೇ ಉತ್ಸವವು ಆಡಳಿತ ಯಂತ್ರ ಮತ್ತು ರಾಜಕೀಯ ನಾಯಕರ ಗೊಂದಲದ ಗೂಡಾಗಿ ಪರಿಣಮಿಸಿದ್ದು, ಜನಸಾಮಾನ್ಯರ ನಿರಾಶೆಗೆ ಕಾರಣವಾಗಿದೆ.

Share
Related Articles
ಅಂಕಣಸುದ್ದಿ

ಒಂದೇ ಒಂದು ಗುಂಡು ಹಾರಿಸದೆ ಮಾಯಾನಗರಿ ಮುಂಬೈ ಆಳಿದ ‘ಸುಲ್ತಾನ್’!

ಬಡತನದ ಕೂಲಿಯಿಂದ ಬಾಲಿವುಡ್ ಬೆರಗಾಗುವಂತೆ ಬೆಳೆದ 'ಹಾಜಿ ಮಸ್ತಾನ್' ಎಂಬ ಬ್ರಾಂಡ್ ಡಾನ್‌ನದ ರೋಚಕ ಕಥೆ...

ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...