ಮರ್ಚೆಡ್ ಡೇಸ್ ಸುದ್ದಿ.
ಗಂಗಾವತಿ: ಇಲ್ಲಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಜೂನ್ 13 ರ ಕೊಪ್ಪಳ ಜಿಲ್ಲಾಧ್ಯಕ್ಷರಾದ ಸೋಮಶೇಖರ್ ಗೌಡ ಅವರ ಅಧ್ಯಕ್ಷತೆಯಲ್ಲಿ ಗಂಗಾವತಿ ತಾಲೂಕು ಉಪನ್ಯಾಸಕರ ಸಂಘದ ಪದಾಧಿಕಾರಿಗಳ ನಾಮನಿರ್ದೇಶನ ಸಭೆ ಯಶಸ್ವಿಯಾಗಿ ಜರುಗಿತು.
ಸಭೆಯಲ್ಲಿ ಸಂಘದ ಬಲವರ್ಧನೆ ಹಾಗೂ ಉಪನ್ಯಾಸಕರ ಹಿತರಕ್ಷಣೆ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ಇದೇ ಸಂದರ್ಭದಲ್ಲಿ ತಾಲೂಕು ಸಂಘದ ವಿವಿಧ ಹುದ್ದೆಗಳಿಗೆ ಪದಾಧಿಕಾರಿಗಳನ್ನು ಸರ್ವಾನುಮತದಿಂದ ನಾಮನಿರ್ದೇಶನ ಮಾಡಲಾಯಿತು.
ಅಧ್ಯಕ್ಷರು: ಅಜಗರ್ ಪಾಶ (ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ಗಂಗಾವತಿ)
ಪ್ರಧಾನ ಕಾರ್ಯದರ್ಶಿ: ಕುಮಾರಸ್ವಾಮಿ ಜಿ. (SMNM ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಗಂಗಾವತಿ
ಕಾರ್ಯಧ್ಯಕ್ಷರು: ಕೆ. ಎಚ್. ಕೊಳ್ಳಣ್ಣನವರ್ (ಎಚ್. ಆರ್. ಸರೋಜಮ್ಮ ಬಾಲಕಿಯರ ಪದವಿ ಪೂರ್ವ ಕಾಲೇಜು, ಗಂಗಾವತಿ.
ಉಪಾಧ್ಯಕ್ಷರು: ಶ್ರೀಮತಿ ಲಲಿತಾ ಕಂದಗಲ್ ಬಾಲಕಿಯರ ಸರ್ಕಾರಿ ಪದವಿಬ್ ಪೂರ್ವ ಕಾಲೇಜು, ಗಂಗಾವತಿ.
ಖಜಾಂಚಿ: ಆದಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು, ಕೆಸರಹಟ್ಟಿ
ತಾಲೂಕು ಸಂಘದ ನೂತನ ಪದಾಧಿಕಾರಿಗಳಾಗಿ ಆಯ್ಕೆಯಾದ ಎಲ್ಲಾ ಉಪನ್ಯಾಸಕ ಮಿತ್ರರಿಗೆ ಕೊಪ್ಪಳ ಜಿಲ್ಲಾ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರಾದ ಸೋಮಶೇಖರ್ ಗೌಡ ಹಾಗೂ ಸಭೆಯಲ್ಲಿದ್ದ ಹಿರಿಯ ಉಪನ್ಯಾಸಕರು, ಗ್ರಂಥಪಾಲಕರು ಮತ್ತು ಸರ್ವ ಸದಸ್ಯರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿ, ಶುಭ ಹಾರೈಸಿದ್ದಾರೆ.