Home ಸುದ್ದಿ ಅನೀಲ್ ಕುಮಾರ್ ಕಾಣೆ: ಪತ್ತೆಗೆ ಪಶ್ಚಿಮ ಪೊಲೀಸರ ಮನವಿ.
ಸುದ್ದಿ

ಅನೀಲ್ ಕುಮಾರ್ ಕಾಣೆ: ಪತ್ತೆಗೆ ಪಶ್ಚಿಮ ಪೊಲೀಸರ ಮನವಿ.

Share
Share

 

ಮರ್ಚೇಡ್ ಡೇಸ್ ಸುದ್ದಿ.

ರಾಯಚೂರು ಜೂನ್ 12 (ಕರ್ನಾಟಕ ವಾರ್ತೆ): ಪಶ್ಚಿಮ ಪೊಲೀಸ್ ಠಾಣೆಯ ವ್ಯಾಪ್ತಿಯ ನಿವಾಸಿಯಾದ ಅನೀಲ್ ಕುಮಾರ್ ತಂದೆ ದಾವಿದ್ (30) ಎಂಬ ಯುವಕ ಜೂನ್ 11ರ ರಾತ್ರಿ 8.30ಕ್ಕೆ ಹೊರಗೆ ಹೋಗಿ ಬರುವದಾಗಿ ತಿಳಿಸಿ ಮನೆಯಿಂದ ಹೊರಗೆ ಹೋದವನು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದು, ಈ ಕುರಿತು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಸಂ:66/2026 ಕಲಂ ಮನುಷ್ಯ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಯುವಕನ ಮೊಬೈಲ್ ನಂ: 7483318137ಗೆ ಕರೆ ಮಾಡಿದ್ದು, ಫೋನ್ ಸ್ವಿಚ್ ಆಫ್ ಬಂದಿತು. ನಂತರ ತಮ್ಮ ಸಂಬAಧೀಕರು ಹಾಗೂ ಆತನ ಗೆಳೆಯರಲ್ಲಿ ವಿಚಾರ ಮಾಡಲಾಗಿ ಯಾವುದೇ ಮಾಹಿತಿ ಇರುವದಿಲ್ಲ. ನಂತರ ಅಂದಿನಿAದ ಇಲ್ಲಿಯವರೆಗೆ ತನ್ನ ಮಗನಿಗಾಗಿ ರಾಯಚೂರು ನಗರದ ರೈಲ್ವೇ ಸ್ಟೇಷನ್, ಬಸ್ ನಿಲ್ದಾಣದ ಹಾಗೂ ವಿವಿಧ ಬಡಾವಣೆಗಳಲ್ಲಿ ಹುಡುಕಾಡ ಮಾಡಲಾಗಿದ್ದು, ಎಲ್ಲಿಯೂ ಸಿಕ್ಕಿಲ್ಲ.

ಕಾಣೆಯಾದ ಯುವಕನ ಚಹರೆ ಪಟ್ಟಿ: ವಯಸ್ಸು: 30 ವರ್ಷ, 5.6 ಅಡಿ ಎತ್ತರ, ಕೆಂಪುಬಣ್ಣ, ದುಂಡುಮುಖ,

ಸಾದಾರಣ ಮೈಕಟ್ಟು, ತಲೆಯಲ್ಲಿ ಕಪ್ಪು ಕೂದಲು ಹೊಂದಿದ್ದಾನೆ. ಕನ್ನಡ, ತೆಲುಗು ಭಾಷೆ ಮಾತನಾಡುತ್ತೇನೆ.

ಈ ಚಹರೆವುಳ್ಳ ವ್ಯಕ್ತಿಯು ಕಂಡು ಬಂದಲ್ಲಿ ಪಶ್ಚಿಮ ಪೊಲೀಸ ಠಾಣೆಯ ಪಿ.ಎಸ್.ಐ ಮೊಬೈಲ್ ಸಂಖ್ಯೆ: 9480803847, ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 08532-232570, ಸಿ.ಪಿ.ಐ ಪಶ್ಚಿಮ ವೃತ್ತ, ರಾಯಚೂರು ದೂರವಾಣಿ ಸಂಖ್ಯೆ: 08532-226856, 9480803831, ಜಿಲ್ಲಾ ನಿಸ್ತಂತು ಘಟಕ ರಾಯಚೂರು ದೂರವಾಣಿ ಸಂಖ್ಯೆ: 08532-235635, 9480803800ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಪಶ್ಚಿಮ ಪೊಲೀಸ ಠಾಣೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Share
Related Articles
ಅಂಕಣಸುದ್ದಿ

ಒಂದೇ ಒಂದು ಗುಂಡು ಹಾರಿಸದೆ ಮಾಯಾನಗರಿ ಮುಂಬೈ ಆಳಿದ ‘ಸುಲ್ತಾನ್’!

ಬಡತನದ ಕೂಲಿಯಿಂದ ಬಾಲಿವುಡ್ ಬೆರಗಾಗುವಂತೆ ಬೆಳೆದ 'ಹಾಜಿ ಮಸ್ತಾನ್' ಎಂಬ ಬ್ರಾಂಡ್ ಡಾನ್‌ನದ ರೋಚಕ ಕಥೆ...

ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...