ಮರ್ಚಡ್ ಡೇಸ್ ಸುದ್ದಿ.
ರಾಯಚೂರು: ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಓರ್ವ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಗೆ, ಅದೇ ಮಹಿಳೆ ಖಾರದ ಪುಡಿ ಎರಚಿ ತಕ್ಕ ಪಾಠ ಕಲಿಸಿರುವ ಘಟನೆ ನಡೆದಿದೆ.
ಬಸ್ ನಿಲ್ದಾಣದ ಆವರಣದಲ್ಲಿ ವ್ಯಕ್ತಿಯೊಬ್ಬ ಮಹಿಳೆಯೊಬ್ಬರಿಗೆ ಕಿರುಕುಳ ನೀಡುವ ಮೂಲಕ ಅನುಚಿತವಾಗಿ ವರ್ತಿಸಿದ್ದಾನೆ. ಇದರಿಂದ ಕೆರಳಿದ ಆ ಮಹಿಳೆ, ತಕ್ಷಣವೇ ಪಕ್ಕದ ಹೋಟೆಲ್ಗೆ ತೆರಳಿ ಖಾರದ ಪುಡಿಯನ್ನು ತಂದಿದ್ದಾಳೆ. ಬಳಿಕ ಆ ವ್ಯಕ್ತಿಯ ಕಣ್ಣಿಗೆ ಖಾರದ ಪುಡಿಯನ್ನು ಎರಚಿ, ಆತನ ದುರ್ವರ್ತನೆಗೆ ತಕ್ಕ ಉತ್ತರ ನೀಡಿದ್ದಾಳೆ.
ಮಹಿಳೆಯ ಈ ದಿಟ್ಟತನವನ್ನು ಬಸ್ ನಿಲ್ದಾಣದಲ್ಲಿದ್ದ ಸಾರ್ವಜನಿಕರು ಮತ್ತು ಪ್ರಯಾಣಿಕರು ಮೆಚ್ಚಿಕೊಂಡಿದ್ದಾರೆ. ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ವಿರುದ್ಧ ಇಂತಹ ದಿಟ್ಟ ಪ್ರತಿಭಟನೆಗಳು ನಡೆಯಬೇಕೆಂದು ಸ್ಥಳದಲ್ಲಿದ್ದ ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ.