ರಾಯಚೂರು: ಕನ್ನಡ ಸಾಹಿತ್ಯ ಲೋಕದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿದ ರಾಯಚೂರು ಜಿಲ್ಲೆಯ ಹೆಂಬೇರಾಳು ಗ್ರಾಮದ ಕವಿ ಶಾಂತರಸ ಅವರು ಅಪ್ಪಟ ಸಾಹಿತ್ಯ ಪ್ರೇಮಿಗಳಿಗೆ ಎಂದಿಗೂ ಮರೆಯಲಾಗದ ಚೇತನ. ಉರ್ದುವಿನ ಗಜಲ್ ಪ್ರಕಾರವನ್ನು ಕನ್ನಡಕ್ಕೆ ತಂದು, ಅದಕ್ಕೆ ಭದ್ರ ಬುನಾದಿ ಹಾಕಿದ ಕೀರ್ತಿ ಈ ಸಾಹಿತ್ಯ ದಿಗ್ಗಜನಿಗೆ ಸಲ್ಲುತ್ತದೆ.
1924ರ ಏಪ್ರಿಲ್ 7 ರಂದು ರಾಯಚೂರು ಜಿಲ್ಲೆಯ ಹೆಂಬೇರಾಳು ಹಳ್ಳಿಯಲ್ಲಿ ಜನಿಸಿದ ಶಾಂತರಸರು (ಶಾಂತರಸ ಹೆಂಬೇರಾಳು), ವಿದ್ವಾಂಸರಾದ ಚನ್ನಬಸಯ್ಯ ಹಿರೇಮಠ ಅವರ ಪುತ್ರರು. ತಂದೆಯಿಂದಲೇ ಸಾಹಿತ್ಯ ಮತ್ತು ಸಂಸ್ಕೃತದ ಒಲವನ್ನು ಬೆಳೆಸಿಕೊಂಡ ಇವರು, ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದರು. ರಾಯಚೂರಿನ ಹಮ್ದರ್ದ್ ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ, 1981ರಲ್ಲಿ ಪ್ರಾಚಾರ್ಯರಾಗಿ ನಿವೃತ್ತಿಯನ್ನು ಹೊಂದಿದ ಮೇಲು.
ಶಾಂತರಸರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ. ಕೇವಲ ಕವಿತೆಗಳಿಗಷ್ಟೇ ಸೀಮಿತವಾಗದೆ, ಕಥೆ, ಕಾದಂಬರಿ ಮತ್ತು ನಾಟಕಗಳ ಮೂಲಕವೂ ಸಮಾಜದ ಕಣ್ಣು ತೆರೆಸುವ ಪ್ರಯತ್ನ ಮಾಡಿದರು.
ಉರ್ದು ಭಾಷೆಯ ಗಜಲ್, ರುಬಾಯಿ ಮತ್ತು ಫರ್ದ್ಗಳನ್ನು ಕನ್ನಡಕ್ಕೆ ಮೊದಲ ಬಾರಿಗೆ ಸಮರ್ಥವಾಗಿ ಪರಿಚಯಿಸಿದವರಲ್ಲಿ ಇವರು ಮುಂಚೂಣಿಯಲ್ಲಿದ್ದಾರೆ. ಉರ್ದುವಿನ ‘ಬಾರಾಮಾಸ’ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿ ಕಾವ್ಯ ಪ್ರೇಮಿಗಳ ಮನ ಗೆದ್ದರು.
ಪ್ರಮುಖ ಕೃತಿಗಳು: ‘ಮಾನಸಗಳ್ಳಿ’, ‘ಬಯಲು ಸೀಮೆಯ ಬಿಸಿಲು’ ಕವನ ಸಂಕಲನಗಳು, ‘ಬಡೇಸಾಬು ಪುರಾಣ’ ಕಥಾ ಸಂಕಲನ ಮತ್ತು ‘ಸಣ್ಣ ಗೌಡಸಾನಿ’ ಕಾದಂಬರಿ ಇಂದಿಗೂ ಓದುಗರ ನೆಚ್ಚಿನ ಕೃತಿಗಳಾಗಿವೆ.
ಸಾಹಿತ್ಯ ಪ್ರಸಾರಕ್ಕಾಗಿ ರಾಯಚೂರಿನಲ್ಲಿ ‘ಸತ್ಯ ಸ್ನೇಹ’ ಎಂಬ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿ ಹೊಸ ಬರಹಗಾರರಿಗೆ ಉತ್ತೇಜನ ನೀಡಿದ
ರಾಜ್ಯೋತ್ಸವ ಪ್ರಶಸ್ತಿ ತಿರಸ್ಕಾರ: 1992ರಲ್ಲಿ ಸರ್ಕಾರದ ನೀತಿಗಳನ್ನು ವಿರೋಧಿಸಿ ತಮಗೆ ಘೋಷಣೆಯಾಗಿದ್ದ ರಾಜ್ಯೋತ್ಸವ ಪ್ರಶಸ್ತಿಯನ್ನು ತಿರಸ್ಕರಿಸುವ ಮೂಲಕ ಸಾಹಿತ್ಯಿಕ ಬದ್ಧತೆಯನ್ನು ಪ್ರದರ್ಶಿಸಿದ್ದರು.
ಸಮ್ಮೇಳನಾಧ್ಯಕ್ಷತೆ: 2006 ರಲ್ಲಿ ಬೀದರ್ನಲ್ಲಿ ನಡೆದ 73 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಅವರು ಮಾಡಿದ ಭಾಷಣ ಸಾಹಿತ್ಯ ಲೋಕದಲ್ಲಿ ಇಂದಿಗೂ ಪ್ರಸ್ತುತವಾಗಿದೆ
ಬಡತನ, ಪ್ರೇಮ ಮತ್ತು ಸಾಮಾಜಿಕ ಕಾಳಜಿಯನ್ನು ತಮ್ಮ ಕಾವ್ಯದ ಉಸಿರಾಗಿಸಿಕೊಂಡಿದ್ದ ಶಾಂತರಸರು 2008ರ ಏಪ್ರಿಲ್ 13 ರಂದು ಇಹಲೋಕ ತ್ಯಜಿಸಿದರು. ಆದರೆ, ಅವರು ಹಾಕಿಕೊಟ್ಟ ಗಜಲ್ ಪರಂಪರೆ ಮತ್ತು ಅವರು ಕಟ್ಟಿದ ಸಾಹಿತ್ಯದ ಹಾದಿ ಇಂದಿನ ಯುವ ಕವಿಗಳಿಗೆ ದಾರಿದೀಪವಾಗಿದೆ. ರಾಯಚೂರಿನ ಈ ‘ಶಾಂತ’ ಹರಿಕಾರ ಕನ್ನಡದ ಅಸ್ಮಿತೆಯಾಗಿ ಎಂದಿಗೂ ಜೀವಂತ.
ರಾಯಚೂರು ಕನ್ನಡ ಸಾಹಿತ್ಯ ಲೋಕದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿದ ರಾಯಚೂರು ಜಿಲ್ಲೆಯ ಹೆಂಬೇರಾಳು ಗ್ರಾಮದ ಕವಿ ಶಾಂತರಸ ಅವರು ಅಪ್ಪಟ ಸಾಹಿತ್ಯ ಪ್ರೇಮಿಗಳಿಗೆ ಎಂದಿಗೂ ಮರೆಯಲಾಗದ ಚೇತನ. ಉರ್ದುವಿನ ಗಜಲ್ ಪ್ರಕಾರವನ್ನು ಕನ್ನಡಕ್ಕೆ ತಂದು, ಅದಕ್ಕೆ ಭದ್ರ ಬುನಾದಿ ಹಾಕಿದ ಕೀರ್ತಿ ಈ ಸಾಹಿತ್ಯ ದಿಗ್ಗಜನಿಗೆ ಸಲ್ಲುತ್ತದೆ.
1924ರ ಏಪ್ರಿಲ್ 7 ರಂದು ರಾಯಚೂರು ಜಿಲ್ಲೆಯ ಹೆಂಬೇರಾಳು ಹಳ್ಳಿಯಲ್ಲಿ ಜನಿಸಿದ ಶಾಂತರಸರು (ಶಾಂತರಸ ಹೆಂಬೇರಾಳು), ವಿದ್ವಾಂಸರಾದ ಚನ್ನಬಸಯ್ಯ ಹಿರೇಮಠ ಅವರ ಪುತ್ರರು. ತಂದೆಯಿಂದಲೇ ಸಾಹಿತ್ಯ ಮತ್ತು ಸಂಸ್ಕೃತದ ಒಲವನ್ನು ಬೆಳೆಸಿಕೊಂಡ ಇವರು, ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದರು. ರಾಯಚೂರಿನ ಹಮ್ದರ್ದ್ ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ, 1981ರಲ್ಲಿ ಪ್ರಾಚಾರ್ಯರಾಗಿ ನಿವೃತ್ತಿ ಹೊಂದಿ
ಶಾಂತರಸರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ. ಕೇವಲ ಕವಿತೆಗಳಿಗಷ್ಟೇ ಸೀಮಿತವಾಗದೆ, ಕಥೆ, ಕಾದಂಬರಿ ಮತ್ತು ನಾಟಕಗಳ ಮೂಲಕವೂ ಸಮಾಜದ ಕಣ್ಣು ತೆರೆಸುವ ಪ್ರಯತ್ನ ಮಾಡಿದರು.
ಗಜಲ್ ಕ್ರಾಂತಿ ಉರ್ದು ಭಾಷೆಯ ಗಜಲ್, ರುಬಾಯಿ ಮತ್ತು ಫರ್ದ್ಗಳನ್ನು ಕನ್ನಡಕ್ಕೆ ಮೊದಲ ಬಾರಿಗೆ ಸಮರ್ಥವಾಗಿ ಪರಿಚಯಿಸಿದವರಲ್ಲಿ ಇವರು ಮುಂಚೂಣಿಯಲ್ಲಿದ್ದಾರೆ. ಉರ್ದುವಿನ ‘ಬಾರಾಮಾಸ’ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿ ಕಾವ್ಯ ಪ್ರೇಮಿಗಳ ಮನ ಗೆದ್ದರು.
ಪ್ರಮುಖ ಕೃತಿಗಳು ‘ಮಾನಸಗಳ್ಳಿ’, ‘ಬಯಲು ಸೀಮೆಯ ಬಿಸಿಲು’ ಕವನ ಸಂಕಲನಗಳು, ‘ಬಡೇಸಾಬು ಪುರಾಣ’ ಕಥಾ ಸಂಕಲನ ಮತ್ತು ಕೆಲವು ಕಥಾ ಸಂಕಲನ ಹಿಂದಿ ಸಿನಿಮವಾಗಿವೆ.ಸಣ್ಣ ಗೌಡಸಾನಿ’ ಕಾದಂಬರಿ ಇಂದಿಗೂ ಓದುಗರ ನೆಚ್ಚಿನ ಕೃತಿಗಳಾಗಿವೆ.
ಸಾಹಿತ್ಯ ಪ್ರಸಾರಕ್ಕಾಗಿ ರಾಯಚೂರಿನಲ್ಲಿ ‘ಸತ್ಯ ಸ್ನೇಹ’ ಎಂಬ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿ ಹೊಸ ಬರಹಗಾರರಿಗೆ ಉತ್ತೇಜನ ನೀಡಿದ.