Home ಸುದ್ದಿ ‘ಮೋದಿ ಕಾ ಬಾಪ್ ಭಿ ಜಾಯೇಗಾ’: ವೇದಿಕೆಯಲ್ಲಿ ಖರ್ಗೆ ರೊಚ್ಚಿಗೆದ್ದ ವಿಡಿಯೋದ ಅಸಲಿ ಕಥೆಯೇನು?
ಸುದ್ದಿ

‘ಮೋದಿ ಕಾ ಬಾಪ್ ಭಿ ಜಾಯೇಗಾ’: ವೇದಿಕೆಯಲ್ಲಿ ಖರ್ಗೆ ರೊಚ್ಚಿಗೆದ್ದ ವಿಡಿಯೋದ ಅಸಲಿ ಕಥೆಯೇನು?

Share
Share
ಮರ್ಚೇಡ್ ಡೇಸ್|ವಿಶೇಷ ಸುದ್ದಿ.

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಬಿಹಾರದ ಪಾಟ್ನಾದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಪ್ರಧಾನಿ ಮೋದಿ ವಿರುದ್ಧ “ಮೋದಿ ಕಾ ಬಾಪ್ ಭಿ ಜಾಯೇಗಾ” (ಮೋದಿಯ ಅಪ್ಪನೂ ಹೋಗಬೇಕಾಗುತ್ತದೆ) ಎಂದು ಗುಡುಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಆದರೆ, ವೇದಿಕೆಯಲ್ಲಿ ಖರ್ಗೆಯವರು ಈ ಪರಿ ರೊಚ್ಚಿಗೇಳಲು ಮತ್ತು ಸಭೆಯಲ್ಲಿ ಗದ್ದಲ ಸೃಷ್ಟಿಯಾಗಲು ಕಾರಣವಾದ ಆ ಘಟನೆಯ ಹಿನ್ನೆಲೆಯೇ ಬೇರೆಯಾಗಿದೆ.

ಖರ್ಗೆಯವರ ಆಕ್ರೋಶಕ್ಕೆ ಕಾರಣವಾದ ವ್ಯಕ್ತಿಯ ಹೆಸರು ಸಂತೋಷ್ ಕುಮಾರ್. ಈತ ಬಿಹಾರದ ಛಪ್ರಾ ಜಿಲ್ಲೆಯ ಮೂಲದವನಾಗಿದ್ದು, ಸ್ವತಃ ಕಟ್ಟಾ ಕಾಂಗ್ರೆಸ್ ಕಾರ್ಯಕರ್ತ.

ಅರ್ಧಕ್ಕೆ ನಿಂತ ಮಾತು – ತಪ್ಪಾಗಿ ಅರ್ಥೈಸಿದ ವೇದಿಕೆ: ಸಭೆಯಲ್ಲಿ ಮಾತನಾಡಲು ಮುಂದಾಗಿದ್ದ ಸಂತೋಷ್ ಕುಮಾರ್, “ಮೋದಿ ನಹೀ ಜಾಯೇಗಾ.. ಜಬ್ ತಕ್ ದೇಶ್ ಮೇ ಬಗಾವತ್ ನಹೀ ಹೋಗಿ” (ದೇಶದಲ್ಲಿ ಜನರು ದಂಗೆ ಎದ್ದು ದೊಡ್ಡ ಹೋರಾಟ ಮಾಡದ ಹೊರತು ಮೋದಿ ಅಧಿಕಾರದಿಂದ ಕೆಳಗಿಳಿಯುವುದಿಲ್ಲ) ಎಂದು ಪೂರ್ತಿ ವಾಕ್ಯ ಹೇಳಲು ಹೊರಟಿದ್ದ. ಆದರೆ, ಸಭಾಂಗಣದಲ್ಲಿದ್ದ ಭಾರಿ ಗದ್ದಲದಿಂದಾಗಿ ಆತ ಹೇಳಿದ ಆರಂಭದ “ಮೋದಿ ನಹೀ ಜಾಯೇಗಾ” (ಮೋದಿ ಹೋಗಲ್ಲ) ಎಂಬ ಭಾಗ ಮಾತ್ರ ವೇದಿಕೆಯಲ್ಲಿದ್ದ ಖರ್ಗೆಯವರ ಕಿವಿಗೆ ಬಿದ್ದಿದೆ.

ಆತ ವಾಕ್ಯ ಮುಗಿಸುವ ಮುನ್ನವೇ ಸಿಟ್ಟಿಗೆದ್ದ ಮಲ್ಲಿಕಾರ್ಜುನ ಖರ್ಗೆಯವರು, ಆತನಿಗೆ ಪೂರ್ತಿ ಮಾತನಾಡಲು ಬಿಡದೆ “ಮೋದಿ ಕಾ ಬಾಪ್ ಭಿ ಜಾಯೇಗಾ” (ಮೋದಿ ಅಪ್ಪನೂ ಹೋಗಬೇಕಾಗುತ್ತದೆ) ಎಂದು ವೇದಿಕೆಯಲ್ಲೇ ಆಕ್ರೋಶದಿಂದ ಕೂಗಿದರು.

ಕಾರ್ಯಕರ್ತರ ಧಳಿಕೆ ಹಾಗೂ ಗೊಂದಲ: ಆತ ಪ್ರಧಾನಿ ಮೋದಿಯನ್ನು ಬೆಂಬಲಿಸಿ ಮಾತನಾಡುತ್ತಿದ್ದಾನೆ ಮತ್ತು ‘ಬಿಜೆಪಿ ಏಜೆಂಟ್’ ಎಂದು ತಪ್ಪು ತಿಳಿದುಕೊಂಡ ಕಾಂಗ್ರೆಸ್ ಕಾರ್ಯಕರ್ತರು, ಆತನ ಮೇಲೆ ಮುಗಿಬಿದ್ದು ಹಿಗ್ಗಾಮುಗ್ಗಾ ಥಳಿಸಿ ಸಭೆಯಿಂದ ಹೊರದಬ್ಬಿದರು.

ಘಟನೆಯ ನಂತರ ಮಾತನಾಡಿದ ಸಂತೋಷ್ ಕುಮಾರ್, “ನಾನು ಮೋದಿ ವಿರುದ್ಧ ಜನರನ್ನು ಎಚ್ಚರಿಸುವ ಉದ್ದೇಶದಿಂದಲೇ ಮಾತನಾಡಲು ಬಂದಿದ್ದೆ. ಗಲಾಟೆಯಲ್ಲಿ ನನ್ನ ಆರಂಭದ ವಾಕ್ಯ ಮಾತ್ರ ಕೇಳಿಸಿದ್ದರಿಂದ ನನ್ನದೇ ಪಕ್ಷದ ಕಾರ್ಯಕರ್ತರು ತಪ್ಪು ತಿಳಿದು ನನ್ನ ಮೇಲೆ ಹಲ್ಲೆ ನಡೆಸಿ ಸಭೆಯಿಂದ ಆಚೆ ಹಾಕಿದರು” ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾನೆ.

ಒಂದು ವೇಳೆ ಸಂತೋಷ್ ಕುಮಾರ್ ಹೇಳಲು ಹೊರಟಿದ್ದ ಸಂಪೂರ್ಣ ವಾಕ್ಯವನ್ನು ಖರ್ಗೆಯವರು ಪೂರ್ತಿಯಾಗಿ ಕೇಳಿಸಿಕೊಂಡಿದ್ದರೆ, ಖಂಡಿತ ರೊಚ್ಚಿಗೇಳುತ್ತಿರಲಿಲ್ಲ; ಬದಲಿಗೆ ನಕ್ಕು ಆತನ ಬೆನ್ನು ತಟ್ಟುತ್ತಿದ್ದರು ಎಂಬ ಮಾತು ಕಾಂಗ್ರೆಸ್ ವಲಯದಲ್ಲೇ ಕೇಳಿಬರುತ್ತಿದೆ. ಪ್ರಸ್ತುತ ಈ ವಿಡಿಯೋ ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ಮತ್ತು ಪರ-ವಿರೋಧದ ವಾಕ್ಸಮರಕ್ಕೆ ಕಾರಣವಾಗಿದೆ.

Share
Related Articles
ಅಂಕಣಸುದ್ದಿ

ಜನರ ಜೀವ ಉಳಿಸಲು ಜಾಗತಿಕ ಔಷಧಿ ದೈತ್ಯರ ಎದರು ಸೆಟೆದು ನಿಂತ ಧೀರ ಅಧಿಕಾರಿ ಐಎಎಸ್ ಅಧಿಕಾರಿ ಪಿ.ಎಚ್. ಕುರಿಯನ್.

ಮರ್ಚೆಡ್ ಡೇಸ್ | ವಿಶೇಷ ಲೇಖನ: ಅಧಿಕಾರವೆಂದರೆ ಜನರ ಸೇವೆ ಎಂಬುದನ್ನು ಜಗತ್ತಿಗೆ ತೋರಿಸಿದ ಅಪರೂಪದ...

ಸುದ್ದಿ

ಡ್ರೋನ್ ಕಣ್ಣಲ್ಲಿ ಸೆರೆಯಾಯ್ತು ದೇವಿರಮ್ಮ ಬೆಟ್ಟದ ಅದ್ಭುತ ವೈಭವ: ಜನಸಾಗರದ ನಡುವೆ ರಕ್ಷಣಾ ಪಡೆಯ ಶ್ಲಾಘನೀಯ ಸೇವ.

ಮರ್ಚೆಡ್ ಡೇಸ್ ಸುದ್ದಿ|ಚಿಕ್ಕಮಂಗಳೂರು. ಚಿಕ್ಕಮಗಳೂರು :ತಾಲೂಕಿನ ಮಲ್ಲೇನಹಳ್ಳಿ ಸಮೀಪದಲ್ಲಿರುವ ಸುಪ್ರಸಿದ್ಧ ದೇವಿರಮ್ಮ ಬೆಟ್ಟದಲ್ಲಿ ಭಕ್ತಿಭಾವದ ಪರಾಕಾಷ್ಠೆ...

ಸುದ್ದಿ

ಆಕಾಶದಲ್ಲೇ ಬೆಳಕಿನ ಮಹಾಸಂಗ್ರಾಮ! ಶತಮಾನಗಳ ಸಂಪ್ರದಾಯಕ್ಕೆ ಸಾಕ್ಷಿಯಾದ ಕೇರಳದ ತ್ರಿಶೂರ್ ಪೂರಂನ ‘ವೆಡಿಕ್ಕೆಟ್ಟು’ ವೈಭವ.

  ಮರ್ಚೆಡ್ ಡೇಸ್ ಸುದ್ದಿ| ವಿಶೇಷ ವರದಿ ಭಕ್ತಿ, ಸಂಪ್ರದಾಯ ಮತ್ತು ಪಟಾಕಿಗಳ ಅಬ್ಬರದ ಅಪರೂಪದ...

ಸುದ್ದಿ

ಹಾಲುಮತದ ಪುಣ್ಯಕಾಶಿ ಹುಲಜಂತಿಯಲ್ಲಿ ಕಲಿಯುಗದ ಪವಾಡ: ಮಾಳಿಂಗರಾಯನ ಶಿಖರಕ್ಕೆ ಶಿವ-ಪಾರ್ವತಿಯರಿಂದ ರೇಷ್ಮೆ ಮುಂಡಾಸು ಸೇವೆ.

ಮರ್ಚೆಡ್ ಡೇಸ್ ಸುದ್ದಿ|ಹುಲಿಜಂತಿ. ಹುಲಿಜಂತಿ:ಹಾಲುಮತದ ಶ್ರದ್ಧಾ ಕೇಂದ್ರ ಹುಲಜಂತಿ ಕ್ಷೇತ ಸಮಸ್ತ ಹಾಲುಮತ ಸಂಸ್ಕೃತಿಯ ಆರಾಧ್ಯ...